ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ದಂತವೈದ್ಯರಿಗೆ ಲಾಭದಾಯಕ ದಿನ..
Published 30 ಸೆಪ್ಟೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸುಗಂಧ ದ್ರವ್ಯಗಳ ಉಪಯೋಗದಿಂದ ಅಲರ್ಜಿ ಸಂಭವಿಸಬಹುದು. ಎಚ್ಚರಿಕೆ ಇರಲಿ. ಕಾರ್ಮಿಕರ ಮೇಲಿನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳುವುದರಿಂದ ಪ್ರಯೋಜನವನ್ನು ಪಡೆಯಲಿದ್ದೀರಿ.
ವೃಷಭ
ಜಾಣ್ಮೆ ಮತ್ತು ಅವಿರತ ದುಡಿಮೆಯಿಂದ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗಿರುವುದು ಗಮನಕ್ಕೆ ಬರಲಿದೆ. ಅಕ್ಕ ಅಥವಾ ತಂಗಿಯ ಆರೋಗ್ಯದ ಬಗ್ಗೆ ಖರ್ಚು ಮಾಡಬೇಕಾದ ಸಂದರ್ಭ ಬರುವುದು.
ಮಿಥುನ
ಉನ್ನತ ಶಿಕ್ಷಣ ಮುಂದುವರಿಸಲು ಬಂಧುಗಳ ಸಹಾಯ ಹಸ್ತ ಅಥವಾ ವಾಸ್ತವ್ಯದ ವ್ಯವಸ್ಥೆಯನ್ನು ಅಪೇಕ್ಷಿಸಬಹುದು.  ಮುಂಜಾನೆ ಏಳುವಾಗಲೇ ದಿನಚರಿ ನೆನೆದು ಉತ್ಸಾಹಿಗಳಾಗಿರುತ್ತೀರಿ.
ಕರ್ಕಾಟಕ
ದೇವತಾನುಗ್ರದ ಜತೆಯಲ್ಲಿ ಹಲವು ದಿನಗಳಿಂದ ಇರುವ ಋಣಭಾದೆಗೆ ಅಂತ್ಯ ಕಾಣಿಸುವ ಕಾಲ ಒದಗಿಬರುವುದು.  ಸಂತೋಷ, ಉಲ್ಲಾಸ ಇರುತ್ತದೆ. ವಿದ್ಯಾರ್ಥಿಗಳಿಗೆ ಪ್ರಗತಿ ಉಂಟಾಗುವುದು.
ಸಿಂಹ
ಸಣ್ಣ ಪುಟ್ಟ ಸಮಸ್ಯೆ ಹೊರತುಪಡಿಸಿ ಆರೋಗ್ಯ, ಮಾನಸಿಕ ನೆಮ್ಮದಿ ಉತ್ತಮವಾಗಿರುತ್ತದೆ. ತಂದೆಯವರ ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಗಮನವಿರಲಿ. ರೈತರ ಫಸಲಿಗೆ ಉತ್ತಮ ಬೆಲೆಯ ನಿರೀಕ್ಷೆ ಫಲಿಸುವುದು.
ಕನ್ಯಾ
ಆರ್ಥಿಕವಾಗಿ ಸಾಕಷ್ಟು ಸಂಪಾದನೆಯಾಗುವುದರಿಂದ ಅನಿವಾರ್ಯದ ಖರ್ಚಿಗೇನೂ ಯೋಚನೆ ಇರುವುದಿಲ್ಲ. ಮನೆಯವರ ಬೇಡಿಕೆಗಳನ್ನು ಸ್ವಲ್ಪ ಮಟ್ಟಿಗೆ ಪೂರೈಸುವಿರಿ. ದಂತವೈದ್ಯರಿಗೆ ಲಾಭದಾಯಕ ದಿನ.
ತುಲಾ
ವಿಭಿನ್ನ ರೀತಿಯ ಮತ್ತು ಅತಿ ಕ್ಲಿಷ್ಟಕರ ಕೆಲಸವೊಂದನ್ನು ಸ್ನೇಹಿತರು ಒಪ್ಪಿಸಲಿದ್ದಾರೆ, ಒಪ್ಪಿಕೊಳ್ಳಿ. ಸಾಕಷ್ಟು ಗೌರವವನ್ನು, ಹೆಸರನ್ನು ತರಲಿದೆ. ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.
ವೃಶ್ಚಿಕ
ನೀರಿನ ಹತ್ತಿರದಲ್ಲಿ ಅಥವಾ ನೀರಿಗೆ ಸಂಬಂಧಿಸಿದ ಕೆಲಸ ನಡೆಸುವವರಿಗೆ ವೃತ್ತಿಯಲ್ಲಿ ಭೀತಿ ಎದುರಾಗಬಹುದು. ನಂಬಿಕಸ್ಥರಿಂದ ಮೋಸ ಹೋಗುವ ಸಾಧ್ಯತೆಯಿದೆ. ಬಿಳಿ ಬಣ್ಣ ಶುಭವನ್ನು ತರಲಿದೆ.
ಧನು
ಈ ದಿನ ಸಣ್ಣ ಪುಟ್ಟ ಅಡಚಣೆಗಳು ಕಾರ್ಯಗಳಿಗೆ ಅಡ್ಡಿಯಾಗಲಾರದು.  ಕಾರ್ಯ ಸಾಧನೆಗೆ ತೋರಿ ಬರುವ ಆತಂಕಗಳು ನಿವಾರಣೆಯಾಗಲಿದೆ. ವಿಮಾ ಯೋಜನೆಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ.
ಮಕರ
ಕಣ್ಣಿನ ದೃಷ್ಟಿಗೆ ಸಂಬಂಧಿಸಿದಂತೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಶಸ್ತ್ರಚಿಕಿತ್ಸೆಯನ್ನು ತಪ್ಪಿಸಲಿದೆ. ಕಲಹ ಉಂಟುಮಾಡುವ ವಿಚಾರ ಗಳನ್ನು ನಿಯಂತ್ರಿಸುವ ಜಾಣ್ಮೆ ಇರಲಿ. ಉದ್ಯೋಗದ ಬಗ್ಗೆ ಯೋಚನೆ ಬೇಡ.
ಕುಂಭ
ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದಿನ ಹೆಜ್ಜೆ ಹಾಕುವ ಯೋಚನೆ ಸರಿಯಾದ ಮಾರ್ಗವಾಗಿರುತ್ತದೆ. ಕಾರ್ಯ ಕ್ಷೇತ್ರದಲ್ಲಿ ಉತ್ತಮ ಹೊಂದಾಣಿಕೆ ಮಾಡಿಕೊಳ್ಳುವುದು ಅಗತ್ಯ.
ಮೀನ
ಮುದ್ರಣ ವೃತ್ತಿಯವರು ತಪ್ಪಿಲ್ಲದೇ ಕಾರ್ಯನಿರ್ವಹಿಸುವುದರಿಂದ ಲಾಭ ಬರುವುದು. ಹಣಕಾಸು ನಿರ್ವಹಣೆಯ ವಿಚಾರದಲ್ಲಿ ಕುಶಲಮತಿಯನ್ನು ಹೊಂದಿರುವ ನೀವು  ಸಣ್ಣ-ಪುಟ್ಟ ತ‍ಪ್ಪುಗಳನ್ನು ಮಾಡುವ ಲಕ್ಷಣಗಳಿವೆ.
ADVERTISEMENT
ADVERTISEMENT