ದಿನ ಭವಿಷ್ಯ: ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ..
Published 2 ಡಿಸೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ವ್ಯವಹಾರಗಳ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಸರಿ ಎನಿಸಲಿದೆ. ಧರ್ಮ ವಿರೋಧಿ ಕಾರ್ಯಗಳನ್ನು ಮಾಡದಿರಿ. ಅಜೀರ್ಣ ಸಮಸ್ಯೆಯನ್ನು ಎದುರಿಸಿ ಅಧಿಕವಾಗಿ ಆಯಾಸವಾಗಬಹುದು.
ವೃಷಭ
ಮುಂದಿನ ಗುರಿ ಸಾಧನೆಗೆ ಇಂದು ಅತಿ ಮುಖ್ಯವಾದ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ಬದಲಾವಣೆ ತರುವ ವಿಚಾರವಾಗಿ ಕ್ರಾಂತಿಕಾರಿ ನಡೆಯೊಂದನ್ನು ಕೈಗೊಳ್ಳುವಿರಿ. ಮಹಾಗಣಪತಿಯನ್ನು ಆರಾಧಿಸಿ.
ಮಿಥುನ
ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಆಪ್ತರು ತಿಳಿಸಿಕೊಡುವರು. ವಕೀಲರು, ನ್ಯಾಯಾಂಗ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಪ್ರಗತಿ. ಭೋಜನದ ಸಮಯವು ಹೆಚ್ಚು ಕಡಿಮೆ ಆಗುವುದು.
ಕರ್ಕಾಟಕ
ನಿಮ್ಮ ತಪ್ಪುಗಳನ್ನು ಸರಿಪಡಿಸುವವರ ಮೇಲೆ ಬೇಸರ ಮಾಡಿಕೊಳ್ಳಬೇಡಿ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಲಾಭದ ದಿನವಾಗಿರುತ್ತದೆ. ಸಾಕುಪ್ರಾಣಿಯ ಅನಾರೋಗ್ಯ ನಿದ್ದೆಗೆಡಿಸಲಿದೆ.
ಸಿಂಹ
ಮಧ್ಯವರ್ತಿಗಳ ಅತಿ ಆಸೆಯಿಂದ ರೈತರಿಗೆ ಲಾಭವಿರುವುದಿಲ್ಲ.ಅದಕ್ಕಾಗಿ ನೇರವಾಗಿ ರೈತಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಿ. ನ್ಯಾಯಾಲಯದ ಕಾರ್ಯ ಕಲಾಪಗಳಲ್ಲಿ ಹೊಸತನ ಕಂಡುಬರಲಿದೆ.
ಕನ್ಯಾ
ಚಕ್ರವ್ಯೂಹದಲ್ಲಿ ಸಿಲುಕಿದ ನಿಮಗೆ ಅದನ್ನು ಭೇದಿಸುವ ಉಪಾಯವು ಮಿತ್ರರಿಂದ ಸಿಗುತ್ತದೆ. ನಿಮ್ಮದೇ ನಿರೀಕ್ಷೆಯಲ್ಲಿರುವ ಕುಟುಂಬದ ವ್ಯಕ್ತಿಗಳಿಗೆ ನಿಮ್ಮ ಬಿಗುವಿನ ದಿನಚರಿಯಿಂದಾಗಿ ಸ್ವಲ್ಪ ಬೇಸರ ಉಂಟಾಗಬಹುದು.
ತುಲಾ
ನಿಮ್ಮೊಳಗಿರುವ ಮಾತನ್ನು ಭಯವಿಲ್ಲದೇ ತಿಳಿಸಿರುವುದರಿಂದ ಹೆಚ್ಚಿನ ವ್ಯಾಪಾರವನ್ನು ಗಿಟ್ಟಿಸಿಕೊಳ್ಳುವಿರಿ. ಮಕ್ಕಳಿಂದ ದುಬಾರಿ ವಸ್ತುಗಳ ಖರೀದಿಯ ಒತ್ತಡ ಬರುವುದು. ಆಫೀಸಿನ ಕೆಲಸ ಕಾರ್ಯಗಳು ಹೆಚ್ಚೆನಿಸುವುದು.
ವೃಶ್ಚಿಕ
ಎಲ್ಲ ಕಾರ್ಯಗಳ ವೈಫಲ್ಯಕ್ಕೆ ಪ್ರಧಾನ ಕಾರಣವಾಗಿ ನಿಮ್ಮ ಅನುಭವದ ಕೊರತೆಯಾಗಿರುತ್ತದೆ. ವೈಫಲ್ಯದಿಂದ ದುಃಖಿತರಾಗದೇ ಪುನಃ ಪ್ರಯತ್ನಿಸಿ. ನೆಂಟರಿಷ್ಟರ ಆಗಮನ ಮನೆಯಲ್ಲಿ ಹಬ್ಬದ ವಾತಾವರಣವನ್ನು ಮೂಡಿಸಲಿದೆ.
ಧನು
ಈ ದಿನ ಉದ್ಯೋಗಾವಕಾಶದ ದೃಷ್ಟಿಯಿಂದ ಬಹಳ ಮಹತ್ವಪೂರ್ಣವಾಗಿರುತ್ತದೆ. ಬಂಗಾರ ಖರೀದಿಸುವ ಬಗ್ಗೆ ಮನೆಯಲ್ಲಿ ಮಾತುಕತೆ ನಡೆಯುವುದು. ಜಗನ್ಮಾತೆಯನ್ನು ಆರಾಧಿಸಿ ಶುಭ ಉಂಟಾಗುವುದು.
ಮಕರ
ಮಹತ್ವಾಕಾಂಕ್ಷೆ ಈಡೇರಿಸಿ ಕೊಳ್ಳುವ ಪ್ರಯತ್ನದಲ್ಲಿ ಸಕಾರಾತ್ಮಕ ದೃಷ್ಟಿಕೋನವಿರಲಿ. ಭಾವನಾತ್ಮಕ ಸಂಬಂಧಗಳನ್ನು ಬೆಳೆಸಲು ಸೂಕ್ತ ಕಾಲವಾಗಿದೆ. ನೀವು ವಹಿಸಿಕೊಂಡ ಜವಾಬ್ದಾರಿ ಎಲ್ಲದಕ್ಕಿಂತ ಮುಖ್ಯವಾಗುತ್ತದೆ.
ಕುಂಭ
ಕೇವಲ ನಿಮ್ಮ ಆಲಸ್ಯತನಕ್ಕೋಸ್ಕರವಾಗಿ ಕೆಲಸ ಕಾರ್ಯಗಳನ್ನು ಮುಂದೂಡುವುದು ಸರಿಯಲ್ಲ. ಕೊಡು ಕೊಳ್ಳುವ ವಿಚಾರದಲ್ಲಿ ಜಾಗರೂಕರಾಗಿರಿ. ಸಂಪಾದನೆಯಲ್ಲಿ ಕಡಿಮೆಯಿರದಿದ್ದರೂ ಆರ್ಥಿಕವಾಗಿ ಚಿಂತೆಯಿರದು.
ಮೀನ
ನಿಮ್ಮ ಒಳ್ಳೆಯ ನಿರ್ಧಾರಗಳಿಗೆ ಪ್ರಭಾವಿಗಳ ಹಸ್ತಕ್ಷೇಪ ಇರಬಹುದು. ನಿಮ್ಮ ಬುದ್ಧಿಯನ್ನು ನಿಮ್ಮ ಕೈಯಲ್ಲಿ ಇಟ್ಟುಕೊಳ್ಳುವುದರಿಂದ ನಿಮ್ಮ ಅಭಿವೃದ್ಧಿಗೆ ಅನುಕೂಲ ಆಗುತ್ತದೆ. ಗೌರವಾನ್ವಿತವಾಗಿ ಬದುಕುವುದನ್ನು ರೂಢಿಸಿಕೊಳ್ಳಿರಿ.