ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಬಾಳಸಂಗಾತಿಯ ಮಾತುಗಳಿಗೆ ನಿಮ್ಮ ಸಹಮತವಿರಲಿ..
Published 10 ಆಗಸ್ಟ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕೃಷಿಯಲ್ಲಿ ನೀವು ಪಾಲಿಸುತ್ತಿರುವ ತಂತ್ರಗಳು ಶೀಘ್ರದಲ್ಲಿ ಫಲ ನೀಡಲಿವೆ. ಅಧಿಕಾರಿಯ ಸಹಾಯದಿಂದ ಬಡ್ತಿ ಅಥವಾ ವರ್ಗಾವಣೆಯಂತಹ ಅವಕಾಶವನ್ನು ಪಡೆದುಕೊಳ್ಳುವಿರಿ. ಕೆಂಪು ಬಣ್ಣ ಶುಭ ತರಲಿದೆ.
ವೃಷಭ
ಕಾರ್ಯಕ್ಷೇತ್ರದಲ್ಲಿ ಕೆಲಸದ ಒತ್ತಡ ಕಡಿಮೆಯಾಗಿ ಕುಟುಂಬಕ್ಕೆ ಸಮಯ ನೀಡಲು ಸಾಧ್ಯವಾಗುವುದು. ತಂದೆ ತಾಯಿಯರ ಆಶೀರ್ವಾದದೊಂದಿಗೆ ಈ ದಿನವನ್ನು ಆರಂಭಿಸಿ. ಒಳ್ಳೆಯದಾಗಲಿದೆ.
ಮಿಥುನ
ಕೆಲವೊಮ್ಮೆ ಅಧೈರ್ಯ ಮತ್ತು ಜಿಗುಪ್ಸೆಯಂತಹ ಸಮಸ್ಯೆ ಕಾಡಲಿದೆ. ವಿವಾಹ ವಿಷಯಗಳು ನಿಶ್ಚಿತಗೊಂಡಿದ್ದರೂ ಸಹ ಇನ್ನೊಮ್ಮೆ ವಿಚಾರಿಸಿದೃಢಪಡಿಸಿಕೊಳ್ಳುವುದು ಉತ್ತಮ.
ಕರ್ಕಾಟಕ
ಕಾರ್ಮಿಕರಿಗೆ, ಕೃಷಿಕರಿಗೆ ಅಶುಭ ಫಲಗಳು ಅಧಿಕವಾಗಿದ್ದು, ಖರ್ಚು ಹೆಚ್ಚಾಗಲಿದೆ. ವ್ಯಾವಹಾರಿಕ ಚಾಣಾಕ್ಷತನ ಮತ್ತು ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸಿದರೆ ಲಾಭವಾಗಲಿದೆ.
ಸಿಂಹ
ಗುರಿ ತಲುಪುವ ಮಾರ್ಗವನ್ನು ಮತ್ತೊಮ್ಮೆ ಪರಿಶೀಲಿಸಿಕೊಂಡಲ್ಲಿ ನಿರೀಕ್ಷೆಗೂ ಮೀರಿ ಯೋಜನೆಗಳು ನೆರವೇರಲಿವೆ. ಬಾಳಸಂಗಾತಿಯ ಮಾತುಗಳಿಗೆ ನಿಮ್ಮ ಸಹಮತವಿರಲಿ.
ಕನ್ಯಾ
ಭಿನ್ನಾಭಿಪ್ರಾಯದಿಂದ ಹೊರಬಂದು ಹೊಸ ತಲೆಮಾರಿನವರು ನೂತನ ಸಂಬಂಧ ಬೆಳೆಸುವಂತಾಗಲಿದೆ. ಆಯುರ್ವೇದ ಚಿಕಿತ್ಸೆಯಿಂದ ಆರೋಗ್ಯ ಸುಧಾರಿಸಲಿದೆ. ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
ತುಲಾ
ಮಕ್ಕಳಿಂದ ಅಹಿತಕರ ಘಟನೆಗಳು ಜರುಗಿ ಪಾಲಕರಿಗೆ ಭವಿಷ್ಯದ ಬಗ್ಗೆ ಯೋಚನೆಗಳು ಬರಲಿದೆ. ದಂಪತಿಯ ಮಧ್ಯೆ ಅನಗತ್ಯ ವಾದ-ವಿವಾದಗಳು ಉಂಟಾಗಿ, ವೈಮನಸ್ಸು ಮೂಡಬಹುದು.
ವೃಶ್ಚಿಕ
ಮನರಂಜನಾ ಚಟುವಟಿಕೆಗಳಲ್ಲಿ ಭಾಗಿಯಾಗುವುದರಿಂದ ಸಂತಸವಾಗಲಿದೆ. ಈಗಿನ ಉದ್ಯೋಗದಲ್ಲಿ ಸ್ಥಿರತೆ ಮತ್ತು ಧನಲಾಭ ಇರಲಿದೆ. ಭಾವನೆಗಳಿಗೆ ಪ್ರಶಂಸೆ ಸಿಗುವ ದಿನ ಇದಾಗಿದೆ.
ಧನು
ಬೇರೆಯವರ ಕೆಲಸವನ್ನು ನಿಮ್ಮ ಕೆಲಸವೆಂದೇ ತಿಳಿದು ಯಶಸ್ವಿಯಾಗಿ ಮಾಡಿ ಮುಗಿಸುವಿರಿ. ಕುಡಿಯುವ ನೀರಿನ ಶುದ್ಧತೆಯ ಬಗ್ಗೆ ಎಚ್ಚರ ವಹಿಸುವುದು ಅವಶ್ಯ.
ಮಕರ
ವಿರೋಧಿಗಳ ಜೊತೆಯೆ ದಿನದ ಬಹುಪಾಲು ಸಮಯವನ್ನು ಕಳೆಯಬೇಕಾಗುವುದು. ಶಸ್ತ್ರಚಿಕಿತ್ಸೆಯ ಬಗ್ಗೆ ವೈದ್ಯರ ಸಲಹೆಗಳನ್ನು ಹೆಚ್ಚು ಗಮನದಿಂದ ಕೇಳುವುದು ಸೂಕ್ತ. ಚಿನ್ನ ಮಾರಾಟಗಾರರಿಗೆ ಶುಭದಿನ.
ಕುಂಭ
ವೈಯಕ್ತಿಕ ವಿಚಾರಗಳ ಬಗ್ಗೆ ಅನ್ಯರ ಪ್ರಭಾವಗಳಿಗೆ ಒಳಗಾಗಿ ಒತ್ತಡಗಳಿಗೆ ಸಿಲುಕಿಕೊಳ್ಳಬೇಡಿ. ಅವಿವಾಹಿತರ ಮನೋಕಾಮನೆಗಳು ಈಡೇರಲು ದುರ್ಗಾಪರಮೇಶ್ವರಿಯ ಆರಾಧಿಸಿ.
ಮೀನ
ನಿಮ್ಮ ಮೇಲಿನ ನಂಬಿಕೆ ಹಾಗೂ ವಿಶ್ವಾಸದಿಂದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಸುಲಭವಾಗಿ ಒಪ್ಪಿಕೊಳ್ಳುವರು. ಮನದ ಆಸೆಗಳು ಈ ದಿನ ಈಡೇರಲಿವೆ.
ADVERTISEMENT
ADVERTISEMENT