ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ವಾತಾವರಣ ಮೂಡಿ ಬರಲಿದೆ
Published 11 ಫೆಬ್ರುವರಿ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬುದ್ಧಿವಂತಿಕೆ ಕೊರತೆಯಿಂದ ಸಮಸ್ಯೆಯಲ್ಲಿ ಸಿಲುಕುವ ಸಂಭವ ವಿರುವುದು. ದೇಹದಲ್ಲಿ ಪಿತ್ತ ಅಧಿಕವಾಗುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ. ಮದುವೆ ಕೆಲಸಗಳಿಗೆ ಓಡಾಟ ನಡೆಸುವಿರಿ.
ವೃಷಭ
ಇನ್ನೊಬ್ಬರಿಗೆ ಗೌರವವನ್ನು ಕೊಟ್ಟು ನೀವು ಗೌರವವನ್ನು ಅಪೇಕ್ಷಿಸುವ ಮನಸ್ಥಿತಿ ಇಟ್ಟುಕೊಳ್ಳಿರಿ. ರಾಜಕೀಯ ವರ್ಗದವರಿಗೆ ದೇವತಾನುಗ್ರಹದಿಂದ ಅದೃಷ್ಟ ಖುಲಾಯಿಸಲಿದೆ. ಶುಭವಾರ್ತೆಗಳು ನೆಮ್ಮದಿಗೆ ಕಾರಣವಾದೀತು.
ಮಿಥುನ
ಖಾದಿ ಉದ್ಯಮದವರಿಗೆ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದ ರೀತಿಯಲ್ಲಿ ವ್ಯವಹಾರ ನಡೆಯುವುದು. ಸಂಬಂಧಿಕರ ವಲಯದಲ್ಲಿದ್ದ ತಪ್ಪು ಅಭಿಪ್ರಾಯಗಳು ದೂರಾಗುವುದು.
ಕರ್ಕಾಟಕ
ಬಾಲ್ಯದ ಸ್ನೇಹಿತರ ಆಶ್ಚರ್ಯಕರ ಭೇಟಿಯು ಮನಸ್ಸಿಗೆ ಸಂತೋಷ ಉಂಟುಮಾಡಲಿದೆ. ಕೆಲಸಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ದೊರೆಯಲಿದೆ. ಆಡಿದ ಮಾತುಗಳು ನಿಮಗೆ ಮುಳ್ಳಾಗುವ ದಿನ.
ಸಿಂಹ
ವೃತ್ತಿಯನ್ನು ಅಭಿವೃದ್ಧಿ ಮಾಡುವ ಸಂಕಲ್ಪದಿಂದ ಈ ದಿನವನ್ನು ಪ್ರಾರಂಭಿಸಿ, ದೇವತಾನುಗ್ರಹದಿಂದ ಅಭಿವೃದ್ಧಿಯಾಗುವುದು. ಸ್ನೇಹಿತರ ಸಂಪರ್ಕದಿಂದ ಜೀವನ ನಡೆಸಲು ಬೇಕಾದ ಉಪಾಯ ಹೊಂದುವಿರಿ.
ಕನ್ಯಾ
ಜೀವನೋಪಾಯಕ್ಕೆ ಹಲವಾರು ಅವಕಾಶಗಳು ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ. ಕಾರ್ಮಿಕ ವರ್ಗದವರಿಗೆ ಪರಿಶ್ರಮದಿಂದ ಹೆಚ್ಚಿನ ಆದಾಯ ಉಂಟಾಗಲಿದೆ. ಕುಲದೇವರ ಸೇವೆಯಿಂದ ಹೆಚ್ಚಿನ ಫಲ ಲಭಿಸಲಿದೆ.
ತುಲಾ
ಸಾಮಾಜಿಕ ಕ್ಷೇತ್ರದಲ್ಲಿನ ಸಮರ್ಥ ಕಾರ್ಯನಿರ್ವಹಣೆಯು ಕೆಟ್ಟ ಜನರ ದೃಷ್ಟಿ ದೋಷಕ್ಕೆ ಕಾರಣವಾಗುವುದು. ವೃತ್ತಿಯ ಮತ್ತು ಮುಂದಿನ ಬದುಕಿನ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ.
ವೃಶ್ಚಿಕ
ಯಶಸ್ಸಿಗೆ ಇನ್ನೊಂದಿಷ್ಟು ಪೂರಕವಾದ ವಾತಾವರಣ ಮೂಡಿ ಬರಲಿದೆ. ಯಾವುದೇ ಕೆಲಸಗಳಿಗೂ ಅಳುಕುವ ಪ್ರಮೇಯ ಈ ದಿನ ಇರುವುದಿಲ್ಲ. ನೂತನ ವಸ್ತುಗಳ ಖರೀದಿಗೆ ಈ ದಿನ ಸಮಯವಲ್ಲ.
ಧನು
ಮರಕೆಲಸ ಮಾಡುವ ವಿಶ್ವಕರ್ಮರಿಗೆ ಉದ್ಯೋಗದಲ್ಲಿ ಕೀರ್ತಿ, ಲಾಭ ಹಾಗೂ ಸಮಾಜದಲ್ಲಿ ಹೆಸರು ಸಂಪಾದನೆಯಾಗುವುದು. ತ್ಯಾಗದ ಮನೋಭಾವ ಬೆಳೆಸಿಕೊಳ್ಳುವಿರಿ. ಶಿರೋವೇದನೆ ಕಾಡಲಿದೆ.
ಮಕರ
ತೆರೆಮರೆಯಲ್ಲಿ ನಡೆಸಿದ ಕೆಲಸಗಳಿಂದ ಹಾಗೂ ಪಕ್ಷನಿಷ್ಠೆ, ಸೇವಾಮನೋಭಾವದಿಂದ ಅಧಿಕಾರ ಪಡೆದುಕೊಳ್ಳುವಿರಿ. ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆ ಆಗಾಗ ಕಾಡಲಿದೆ. ನೀಲಿ ಬಣ್ಣ ಶುಭ ತರಲಿದೆ.
ಕುಂಭ
ಪರಸ್ಪರ ಕಾಳಜಿಗಳ ಬಗ್ಗೆ ಪಾಲುದಾರರು ಸಂತಸದ ಒಪ್ಪಿಗೆ ನೀಡು ತ್ತಾರೆ. ಕ್ರೀಡಾಪಟುಗಳಿಗೆ, ಉಪನ್ಯಾಸಕರಿಗೆ ಮತ್ತು ಕಲಾವಿದರಿಗೆ ಹೆಚ್ಚಿನ ಅವಕಾಶ ಲಭಿಸಲಿದೆ. ಶುಭಫಲಗಳ ಪ್ರಾಪ್ತಿಗಾಗಿ ನವಗ್ರಹಗಳನ್ನು ಆರಾಧಿಸಿ.
ಮೀನ
ವ್ಯವಹಾರಿಕ ಜೀವನದ ಕೆಲವು ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಇಂದು ಸೂಕ್ತ ದಿನವಾಗಿದೆ. ದಾನ-ಧರ್ಮ ಪ್ರವೃತ್ತಿಯಿಂದ ಕೆಲವು ಶುಭ ಫಲಗಳು ಅನುಭವಕ್ಕೆ ಬರಲಿವೆ.