ಶುಕ್ರವಾರ, 18 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ನಿವೇಶನ ಖರೀದಿ ಯೋಜನೆ ಹಾಕಿಕೊಳ್ಳಬಹುದು
Published 12 ಮೇ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೇವತಾನುಗ್ರಹ ಇದೆ ಎಂಬುವುದು ಅನುಭವಕ್ಕೆ ಬಂದಂತೆ ಆಗುವುದು. ವಿದ್ಯಾಭ್ಯಾಸದ ಪೂರಕ ಪರೀಕ್ಷೆಗಳಿಗೆ ಬೇಕಾದ ತಯಾರಿ ಮಾಡಿಕೊಳ್ಳುವುದು ಒಳ್ಳೆಯದು.
ವೃಷಭ
ಅಕ್ಕಪಕ್ಕದವರ ಪ್ರೀತಿ ವಿಶ್ವಾಸ ಹಿತವೆನಿಸಲಿದೆ. ಮಕ್ಕಳೊಡನೆ ವಿರಸ, ಕಲಹ ಬರದಂತೆ ಪ್ರೀತಿಯಿಂದ ವರ್ತಿಸಿ. ಕಾರ್ಯಪ್ರವೃತ್ತರಾಗಿ ದುಡಿದರೆ ಉತ್ತಮ ಫಲಗಳು ಅನುಭವಕ್ಕೆ ಬರಲಿವೆ.
ಮಿಥುನ
ಅನಿರೀಕ್ಷಿತ ವರ್ಗಾವಣೆಯಿಂದ ಅನುಕೂಲವೇ ಹೊರತಾಗಿ ಪ್ರತಿಕೂಲ ಇರುವುದಿಲ್ಲ. ಮೇಲಧಿಕಾರಿಗಳ ಅಪ್ಪಣೆಯಂತೆ ಹೆಜ್ಜೆಯಿಡಿ. ಕುಟುಂಬ ಅಭಿವೃದ್ಧಿಗೆ ಉತ್ತಮ ಯೋಚನೆಗಳು ಬರಲಿವೆ.
ಕರ್ಕಾಟಕ
ಕ್ರೀಡಾಸಕ್ತರಿಗೆ ಅಥವಾ ಕ್ರೀಡಾಪಟುಗಳಿಗೆ ಇಂದು ಶುಭ ದಿನ. ಕಿರುತೆರೆಯಲ್ಲಿ ಅಭಿನಯಿಸಲು ಒತ್ತಾಯಪೂರ್ವಕ ಅವಕಾಶಗಳು ಲಭಿಸುವುದು. ಅವಿವಾಹಿತರಿಗೆ ವಿವಾಹ ಭಾಗ್ಯವಿರುವುದು.
ಸಿಂಹ
ಎಚ್ಚರದಿಂದ ಕಾರ್ಯ ನಿರ್ವಹಿಸಿ. ಯಂತ್ರಗಳನ್ನು ಬಳಸುವಾಗ ತೊಂದರೆಯಾಗುವ ಸಂಭವವಿದೆ. ತೈಲ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ. ಮನಸ್ಸು ಉಲ್ಲಾಸದಾಯಕವಾಗಿ ಇರುತ್ತದೆ.
ಕನ್ಯಾ
ಇನ್ನೊಬ್ಬ ವ್ಯಕ್ತಿಯಿಂದ ಯಾವುದೇ ರೀತಿಯ ಸಲಹೆ ಅಪೇಕ್ಷಿಸಬೇಡಿ. ವೆಂಕಟರಮಣನ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ಬಾಳು ಹಸನವಾಗುವುದರೊಂದಿಗೆ ವೈವಾಹಿಕ ಜೀವನ ಸುಧಾರಿಸಲಿದೆ.
ತುಲಾ
ಆಭರಣಗಳ ಖರೀದಿ ನಡೆಸುವುದರಿಂದ ಸಂತೋಷವಾಗುವುದು. ವೃತ್ತಿಯಲ್ಲಿ ಸೋಮಾರಿತನ, ದುರಾಸೆಗಳನ್ನು ಬಿಟ್ಟು ಶ್ರಮಪಡುವ ಮನೋಭಾವ ಬೆಳೆಸಿಕೊಳ್ಳಿರಿ. ಸರ್ವರ ಸಂತೋಷಕ್ಕೆ ಕಾರಣವಾಗುತ್ತದೆ.
ವೃಶ್ಚಿಕ
ಆಹಾರದ ಪದ್ದತಿ ನಿಯಂತ್ರಿಸಿಕೊಂಡು ರಕ್ತದೊತ್ತಡ ಸ್ಥಿತಿಯನ್ನು ಸಮತೋಲನಕ್ಕೆ ಬರುವಂತೆ ಮಾಡಿಕೊಳ್ಳಿ. ದೇಹಾಯಾಸ ತೋರಿಬಂದು ತಪ್ಪಾದ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿ ಎದುರಾಗಬಹುದು.
ಧನು
ನವದಂಪತಿಗಳು ಪರಸ್ಪರ ಬೇಕು ಬೇಡಗಳನ್ನು ಅರಿತು ಬಹಳ ಎಚ್ಚರಿಕೆ ವಹಿಸಿ ಪ್ರತಿ ಹೆಜ್ಜೆ ಇಡಿ. ಸ್ಥಾನಮಾನ ಮತ್ತು ಅತಿ ಪರಿಶ್ರಮದ ದುಡಿಮೆ ಜನರ ಅಸೂಯೆಯ ದೋಷದ ನೋಟಕ್ಕೆ ಗುರಿಯಾಗುವುದು.
ಮಕರ
ಕೌಟುಂಬಿಕ ಮಾತುಕತೆಯಲ್ಲಾಗಲಿ ಅಥವಾ ಆಫೀಸಿನ ಸಭೆಯಲ್ಲಾಗಲಿ ಸಂದರ್ಭಕ್ಕೆ ಸರಿಯಾದ ಮಾತುಗಳನ್ನು ಆಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುವುದು. ಸಾಮಾಜಿಕವಾಗಿ ಬದುಕಿನಲ್ಲಿ ಹುರುಪನ್ನು ಕಾಣಲಿದ್ದೀರಿ.
ಕುಂಭ
ನಿಶ್ಚಿತ ಕಾರ್ಯಗಳು ಪ್ರಕೃತಿಯಲ್ಲಿನ ಅನಿಶ್ಚಿತ ಬದಲಾವಣೆಗಳಿಂದಾಗಿ ಹಿಂದುಮುಂದಾಗಬಹುದು. ಹೊಸ ಕೆಲಸವನ್ನು ಆರಂಭ ಮಾಡುವುದು ಸರಿಯಲ್ಲ . ರಾಜಕೀಯ ರಂಗದಲ್ಲಿ ಉತ್ತಮ ಅನುಕೂಲಗಳ ಸಂಭವವಿದೆ.
ಮೀನ
ಅಣ್ಣ-ತಮ್ಮಂದಿರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಮನೆಯಲ್ಲಿ ಆಗಾಗ ಅಶಾಂತಿಯ ವಾತಾವರಣ ಸೃಷ್ಟಿಯಾಗಬಹುದು. ನಿವೇಶನ ಖರೀದಿ ಯೋಜನೆ ಹಾಕಿಕೊಳ್ಳಬಹುದು.
ADVERTISEMENT
ADVERTISEMENT