ಲಂಡನ್: ಭಾರತ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಇಂಗ್ಲೆಂಡ್ನ ಜೋ ರೂಟ್, ತವರಿನಲ್ಲಿ ಅಪರೂಪದ ದಾಖಲೆ ಬರೆದಿದ್ದಾರೆ.

ಪ್ರಸ್ತುತ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವು ಲಂಡನ್ನ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.

ಟೂರ್ನಿಯಲ್ಲಿ ಐದೂ ಪಂದ್ಯಗಳಲ್ಲಿ ಆಡಿರುವ 'ಟೆಸ್ಟ್ ಪರಿಣತ' ರೂಟ್, 8 ಇನಿಂಗ್ಸ್ಗಳಿಂದ 432 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಅವರು, ಭಾರತದ ವಿರುದ್ಧ ಇಂಗ್ಲೆಂಡ್ನಲ್ಲಿ ಆಡಿದ ಪಂದ್ಯಗಳಲ್ಲಿ ಗಳಿಸಿದ ಮೊತ್ತವನ್ನು 2,000ಕ್ಕೆ ಏರಿಸಿಕೊಂಡಿದ್ದಾರೆ. ಈ ಮೊದಲು ಯಾವುದೇ ಆಟಗಾರ ಟೀಂ ಇಂಡಿಯಾ ವಿರುದ್ಧ ಒಂದೇ ದೇಶದಲ್ಲಿ ಇಷ್ಟು ರನ್ ಗಳಿಸಿರಲಿಲ್ಲ.

ಭಾರತದ ವಿರುದ್ಧ ಮಾಜಿ ಕ್ರಿಕೆಟಿಗ ರಿಕಿ ಪಾಂಟಿಂಗ್ ಆಸ್ಟ್ರೇಲಿಯಾದಲ್ಲಿ 1,893 ರನ್ ಗಳಿಸಿದ್ದರು. ಅವರು ಸದ್ಯ ರೂಟ್ ನಂತರದ ಸ್ಥಾನಕ್ಕೆ ಜಾರಿದ್ದಾರೆ. ಶಿವನಾರಾಯಣ್ ಚಂಸ್ರಪಾಲ್ ವೆಸ್ಟ್ ಇಂಡೀಸ್ನಲ್ಲಿ 1,547 ರನ್, ಜಹೀರ್ ಅಬ್ಬಾಸ್ ಪಾಕಿಸ್ತಾನದಲ್ಲಿ 1,427 ರನ್ ಹಾಗೂ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾದಲ್ಲಿ 1,396 ರನ್ ಗಳಿಸಿದ್ದಾರೆ.

ತವರಿನಲ್ಲಿ ಹೆಚ್ಚು ರನ್; ಸಚಿನ್ ಹಿಂದಿಕ್ಕಿದ ರೂಟ್
ಟೆಸ್ಟ್ ಕ್ರಿಕೆಟ್ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್ಗಳ ಸಾಲಿನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿರುವ ರೂಟ್, ಓವಲ್ ಟೆಸ್ಟ್ನಲ್ಲಿ ಮತ್ತೊಂದು ಸಾಧನೆ ಮಾಡಿದ್ದಾರೆ.

ತವರಿನ ಕ್ರೀಡಾಂಗಣಗಳಲ್ಲಿ ಗಳಿಸಿದ ಮೊತ್ತವನ್ನು 7,220ಕ್ಕೆ ಹೆಚ್ಚಿಸಿಕೊಂಡಿರುವ ಅವರು, ದಿಗ್ಗಜ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಸಚಿನ್, ಭಾರತದಲ್ಲಿ 7,216 ರನ್ ಕಲೆಹಾಕಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ 'ಕಾಂಗರೂ' ನೆಲದಲ್ಲಿ 7,578 ರನ್ ಗಳಿಸಿದ್ದು, ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
.ಆರಂಭಿಕನಾಗಿ ಗರಿಷ್ಠ ರನ್: ಗವಾಸ್ಕರ್ ದಾಖಲೆ ಮುರಿಯುವ ಅವಕಾಶ ಕೈಚೆಲ್ಲಿದ ರಾಹುಲ್.IND vs ENG 5th Test: ಇಂಗ್ಲೆಂಡ್ಗೆ ಭಾರತದ ವೇಗಿಗಳ ತಿರುಗೇಟು.
ಮುನ್ನಡೆ ಸಾಧಿಸಿದ ಭಾರತ
ಅಂತಿಮ ಟೆಸ್ಟ್ನ ಮೊದಲ ಇನಿಂಗ್ಸ್ನಲ್ಲಿ 23 ರನ್ಗಳ ಅಲ್ಪ ಹಿನ್ನಡೆ ಅನುಭವಿಸಿದ್ದ ಭಾರತ, ಇದೀಗ 52 ರನ್ ಮುನ್ನಡೆಯೊಂದಿಗೆ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ. ಎರಡನೇ ಇನಿಂಗ್ಸ್ನಲ್ಲಿ 2 ವಿಕೆಟ್ಗೆ 75 ರನ್ ಗಳಿಸಿದ್ದು, ಯಶಸ್ವಿ ಜೈಸ್ವಾಲ್ (51 ರನ್) ಮತ್ತು ಆಕಾಶ್ ದೀಪ್ (4 ರನ್) ಕ್ರೀಸ್ನಲ್ಲಿದ್ದಾರೆ.

ಶುಭಮನ್ ಗಿಲ್ ಬಳಗ ಮೊದಲ ಇನಿಂಗ್ಸ್ನಲ್ಲಿ 224 ರನ್ ಗಳಿಸಿ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಆತಿಥೇಯ ತಂಡ 247 ರನ್ ಕಲೆಹಾಕಿತ್ತು.

ಇನ್ನೂ ಮೂರು ದಿನಗಳ ಬಾಕಿ ಇದ್ದು, ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.

ಆತಿಥೇಯ ತಂಡ ಸರಣಿಯಲ್ಲಿ ಈಗಾಗಲೇ 2–1 ಅಂತರದ ಮುನ್ನಡೆಯಲ್ಲಿದೆ. ಹೀಗಾಗಿ, ಈ ಪಂದ್ಯದಲ್ಲಿ ಜಯ ಇಲ್ಲವೇ ಡ್ರಾ ಸಾಧಿಸಿದರೆ, ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದೆ. ಆದರೆ, ಸರಣಿ ಕಳೆದುಕೊಳ್ಳದಿರಲು ಗೆಲ್ಲಲೇಬೇಕಾದ ಪರಿಸ್ಥಿತಿಯಲ್ಲಿ ಭಾರತ ತಂಡವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.