ದಿನ ಭವಿಷ್ಯ | ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು
Published 13 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಕಾನೂನಾತ್ಮಕ ಹೋರಾಟ ಅಥವಾ ಕೋರ್ಟು ವ್ಯವಹಾರಗಳ ಓಡಾಟಕ್ಕೆ ಮುಕ್ತಾಯ ಸಿಗಲಿದೆ. ಗೃಹೋಪಯೋಗಿ ವಸ್ತುಗಳನ್ನು ಕೊಳ್ಳುವ ಬಗ್ಗೆ ಚರ್ಚಿಸುವಿರಿ. ವೃತ್ತಿರಂಗದಲ್ಲಿ ಅದೃಷ್ಟ ಪಾಲಿಗಿರುವುದು.
ವೃಷಭ
ರಾಜಕೀಯವಾಗಿ ಪ್ರಬಲಗೊಳ್ಳುವ ಅವಕಾಶಗಳು ಹೆಚ್ಚಲಿವೆ. ಸಾಮಾಜಿಕ ವಲಯದಲ್ಲಿ ವರ್ಚಸ್ಸು ಬೆಳೆಯಲಿದೆ. ಧಾರ್ಮಿಕ ಕೆಲಸಗಳನ್ನು ಮಾಡಿಸುವಿರಿ. ಆಫೀಸಿನ ಆಗು ಹೋಗುಗಳ ಬಗ್ಗೆ ಗಮನವಿಟ್ಟುಕೊಳ್ಳಿ.
ಮಿಥುನ
ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂಥ ಕೆಲಸವನ್ನು ಮಾಡುವುದು ಸಮಂಜಸವಲ್ಲ. ಮುಖ್ಯ ಕೆಲಸವೊಂದು ದಿನದ ಅಂತ್ಯದ ವೇಳೆಗೆ ನೆರವೇರುವುದು.
ಕರ್ಕಾಟಕ
ಹೊಸ ವಾಹನ ಕೊಳ್ಳುವ ಸಂಭವವಿದೆ. ಜನರ ಭಾವನೆಗಳಿಗೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬೇಕೆಂಬುದು ಚೆನ್ನಾಗಿ ತಿಳಿದಿದೆ. ಸುಖ ಶಾಂತಿ ಹಾಗೂ ನೆಮ್ಮದಿಗಾಗಿ ಮನೆಯಲ್ಲಿ ಚಂಡಿಕಾ ಪಾರಾಯಣ ಮಾಡಿಸಿ.
ಸಿಂಹ
ಬಹುದಿನದ ನಂತರದಲ್ಲಿ ಷೇರುಪೇಟೆಯಿಂದ ಲಾಭ ಗಳಿಸುವಿರಿ. ಮಕ್ಕಳಿಂದ ಅಹಿತ ಕಾರ್ಯಗಳು ಸಂಭವಿಸಬಹುದು. ಅಕ್ಕಪಕ್ಕದವರ ಎದುರು ಗೌರವಕ್ಕೆ ಚ್ಯುತಿ ಬಂದಂತೆ ಆಗಲಿದೆ.
ಕನ್ಯಾ
ಸುಪ್ತವಾಗಿ ಅಡಗಿರುವ ಪ್ರತಿಭೆ, ಕೌಶಲಗಳನ್ನು ಹೊರ ತೆಗೆಯಲು ಹೊಸದನ್ನು ಕಲಿಯಲು ಮುಂದಾಗುವಂತಾಗಲಿದೆ. ನೂತನವಾಗಿ ಆರಂಭಿಸಿದ ವ್ಯವಹಾರದಲ್ಲಿನ ನಷ್ಟ ಸುಧಾರಿಸಿಕೊಂಡು ಹೋಗುವ ಧೈರ್ಯ ಬೆಳೆಸಿಕೊಳ್ಳಿ.
ತುಲಾ
ವಾಗ್ದಾನಗಳನ್ನು ಮಾಡುವಾಗ ಯೋಚಿಸಿ, ಉಳಿಸಿಕೊಳ್ಳಲು ಕಷ್ಟವಾಗುವಂಥ ಮಾತುಗಳನ್ನು ಕೊಡದಿರಿ. ಕುಟುಂಬದಲ್ಲಿ ಸೌಖ್ಯವಿದ್ದು ಮನರಂಜನೆ ಪಡೆಯುವಿರಿ.
ವೃಶ್ಚಿಕ
ಕಾನೂನು ಸಮಸ್ಯೆಗಳೆಲ್ಲಾ ಸುಸೂತ್ರವಾಗಿ ಬಗೆಹರಿಯಲಿವೆ. ಪರಿಚಯವಾದರೂ ಪರೀಕ್ಷಿಸದೇ ನಂಬಬೇಡಿ. ಲೋಹವಸ್ತುಗಳ ವ್ಯಾಪಾರಿಗಳಿಗೆ ಸಂಪಾದನೆ ಹೆಚ್ಚಳವಾಗಲಿದೆ.
ಧನು
ಮಕ್ಕಳ ಆಟೋಪಚಾರಗಳನ್ನು ನೋಡಿದ ನಿಮಗೆ ಬಾಲ್ಯವು ಅತಿಯಾಗಿ ಕಾಡಲಿದೆ. ಬಹಳ ದಿನಗಳ ನಂತರ ಕ್ರೀಡೆಗಳಲ್ಲಿ ಸಮಯ ಕಳೆಯುವಿರಿ. ನಾಗ ದೇವರ ಆರಾಧನೆ ಶುಭವನ್ನು ಉಂಟುಮಾಡುತ್ತದೆ.
ಮಕರ
ಆಕ್ರೋಶಗಳನ್ನು ವ್ಯಕ್ತಪಡಿಸಲು ಅದಕ್ಕೆ ಕಾರಣರಲ್ಲದ ವ್ಯಕ್ತಿಗಳನ್ನು ಆರಿಸಿಕೊಳ್ಳಬೇಡಿ. ಶಿಕ್ಷಣವನ್ನು ಮುಗಿಸಿರುವ ಉದ್ಯೋಗಾಭಿಲಾಷಿಗಳು ಉತ್ತಮ ವಿಚಾರ ಕೇಳುವಿರಿ. ಮುಖ್ಯ ವ್ಯಕ್ತಿಗಳ ಭೇಟಿಯ ಸಾಧ್ಯತೆ ಇದೆ.
ಕುಂಭ
ಉತ್ತಮ ವ್ಯವಹಾರಗಳ ಫಲದಿಂದ ಕೈಬಿಟ್ಟ ಹಳೆಯ ಆಸ್ತಿಯು ನಿಮ್ಮ ಕೈಸೇರುವ ಯೋಗವಿದೆ. ಖರ್ಚು ವೆಚ್ಚಗಳ ಮೇಲೆ ಗಮನವಿದ್ದರೆ ಒಳ್ಳೆಯದು. ಸರಕು ಸಾಗಾಟದಿಂದ ಉತ್ತಮ ಲಾಭ ಪಡೆಯುವಿರಿ.
ಮೀನ
ಕ್ಷಿಪ್ರ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನೀವು ಮತ್ತೊಮ್ಮೆ ಮರುಪರಿಶೀಲಿಸಲು ಹೋಗಿ ದಾರಿ ತಪ್ಪಬೇಡಿ. ಖರ್ಚು ಕಡಿಮೆ ಗಳಿಕೆ ಹೆಚ್ಚಿರುವುದರಿಂದ ಸಂಪಾದನೆಯ ಹೆಚ್ಚಿನದ್ದನ್ನು ಉಳಿಸಬಹುದು.