ಮಂಗಳವಾರ, 15 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಸ್ವತಂತ್ರವಾಗಿ ವ್ಯವಹಾರ ಮಾಡುವವರಿಗೆ ಉತ್ತಮ
Published 15 ಮೇ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇತರರ ಭಾವನೆಗಳಿಗೆ ಬೆಲೆ ಕೊಡುವುದು ಮತ್ತು ಸಹನೆಯಿಂದ ಕೇಳುವುದನ್ನು ರೂಢಿಸಿಕೊಳ್ಳುವಿರಿ. ಕಂದಾಯ ಇಲಾಖೆಯವರಿಗೆ ಬಿಡುವಿಲ್ಲದ ಕೆಲಸಗಳು ಇರಲಿವೆ. ಅಭಿರುಚಿಗೆ ತಕ್ಕ ಜನರೊಂದಿಗೆ ಒಡನಾಟ ಬೆಳೆಸಿಕೊಳ್ಳಿರಿ.
ವೃಷಭ
ಕಲೆ, ಸಾಹಿತ್ಯವನ್ನು ಪ್ರವೃತ್ತಿಯಾಗಿ ಹೊಂದಿದವರಿಗೆ ಹಿನ್ನಡೆ ತೋರಿ ಬಂದರೂ ಸ್ಥಾನ-ಮಾನ, ಗೌರವಕ್ಕೆ ಚ್ಯುತಿ ಬರುವುದಿಲ್ಲ. ಸಾಂಸಾರಿಕ ಬದುಕಿನಲ್ಲಿ ನೆಮ್ಮದಿ ಇರಲಿದೆ. ಧರ್ಮ-ಕರ್ಮದಂತಹ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುವುದು.
ಮಿಥುನ
ಕೆಲಸ ಕಾರ್ಯಗಳ ಬಗ್ಗೆ ಹೆಚ್ಚಿನ ನಿಗಾ ಕೊಡುವಂತೆ ಅಧಿಕಾರಿಗಳಿಂದ ಆದೇಶವಾಗುವುದು. ಕೆಂಪು ಬಣ್ಣವು ಜಯ ತರಲಿದೆ. ಶುಭ ಕಾರ್ಯಗಳಿಗೆ ಅಡ್ಡಿ ಬಾರದಂತೆ ದೇವರ ಸೇವೆ ಮಾಡುವುದು ಉತ್ತಮ.
ಕರ್ಕಾಟಕ
ನೀವೇ ಮಿಶ್ರ ಮಾಡಿದ ಸುಣ್ಣದ ನೀರನ್ನು ನೀವೇ ಹಾಲೆಂದು ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ನಿಮ್ಮದಾಗಿರುತ್ತದೆ. ಕೆಲಸ ಕಾರ್ಯಗಳಿಗೆ ಅಧಿಕಾರಿ ವರ್ಗಗಳ ವಿರೋಧ ವ್ಯಕ್ತವಾಗಲಿದೆ.
ಸಿಂಹ
ಕೌಟುಂಬಿಕ ವಿಚಾರಗಳ ಹೊಸ ಚಿಂತನೆಗೆ ಪೂರಕ ವಾತಾವರಣ ಮೂಡುತ್ತದೆ. ತಾಂತ್ರಿಕ ವಿದ್ಯಾರ್ಥಿಗಳು ಯಶಸ್ಸು ಸಾಧಿಸಲು ಅಧಿಕ ಪರಿಶ್ರಮ ಹಾಕಿದ್ದರೂ ಅದೃಷ್ಟವು ಕೈ ಕೊಡಲಿದೆ. ಅನಾರೋಗ್ಯವನ್ನು ನಿರ್ಲಕ್ಷಿಸಬೇಡಿ.
ಕನ್ಯಾ
ಬ್ಯಾಂಕ್ ಉದ್ಯೋಗಿಗಳಿಗೆ ಶುಭಸುದ್ದಿ ಕೇಳಿಬರಲಿದೆ. ಆಫೀಸಿನ ಕೆಲಸ ದಲ್ಲಿ ಅಧಿಕಾರಿಗಳ ಮಾತನ್ನು ತಾಳ್ಮೆಯಿಂದ ಕೇಳಿರಿ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವುದು. ವನಸ್ಪತಿ ವಸ್ತುಗಳ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.
ತುಲಾ
ಅಭಿಪ್ರಾಯಗಳಿಗೆ ಮನ್ನಣೆ ಇದೆ ಎಂಬುದನ್ನು ಮೊದಲು ಖಚಿತಪಡಿಸಿಕೊಂಡು ಹಿತವಚನಗಳನ್ನು ಹೇಳಲು ಮುಂದುವರಿಯುವುದು ಉತ್ತಮ. ಸ್ವತಂತ್ರವಾಗಿ ವ್ಯವಹಾರ ಮಾಡುವವರಿಗೆ ಉತ್ತಮ.
ವೃಶ್ಚಿಕ
ರಾಜಕೀಯ ಚಟುವಟಿಕೆಗಳು ಹೆಚ್ಚಾಗುವುದು. ಸ್ನೇಹಿತರೊಂದಿಗೆ ಅಧ್ಯಾತ್ಮಿಕ ಮಾತುಕತೆಗಳಲ್ಲಿ ತೊಡಗುವಿರಿ. ಕೆಲವು ವೈಯಕ್ತಿಕ ವಿಚಾರಗಳನ್ನು ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇಬೇಕಾದ ಸಂದರ್ಭ ಬರಲಿದೆ.
ಧನು
ಸಹೋದರನ ಮೂಲಕ ಜಮೀನಿನ ಖರೀದಿ ವಿಚಾರದ ಮಾತುಕತೆಗಳು ಜರುಗಲಿವೆ. ಸಮೀಪವರ್ತಿಗಳ ಸಹಾಯದಿಂದ ಬಾಕಿ ಇದ್ದ ಕೆಲಸ ಪೂರ್ತಿ ಗೊಳಿಸುವಿರಿ. ಮನೆಯಲ್ಲಿ ದೇವತಾ ಕಾರ್ಯಗಳನ್ನು ನಡೆಸುವ ಬಗ್ಗೆ ಮಾತಾಡಿ.
ಮಕರ
ಮಕ್ಕಳಿಗೆ ವಿದೇಶದಲ್ಲಿ ಉನ್ನತ ಶಿಕ್ಷಣ ಕೊಡಿಸಲು ಸಂಘ ಸಂಸ್ಥೆಗಳು ನೆರವಾಗುವುದು. ವಾಹನ ಕೊಡು ಕೊಳ್ಳುವಿಕೆಯಲ್ಲಿ ಲೆಕ್ಕ ಪತ್ರಗಳಲ್ಲಿ ಗಮನ ಇರಲಿ. ಮನೆ ಕೊಳ್ಳುವ ಯೋಗ ಅಥವಾ ಭೂಮಿ ಖರೀದಿಯ ಯೋಗವಿದೆ.
ಕುಂಭ
ಮಧ್ಯಾಹ್ನದ ಸಮಯದವರೆಗೆ ಕೆಲಸಗಳು ಕುಂಠಿತವಾಗಿ ಸಾಗಿದರೂ ಉತ್ತರಾರ್ಧದ ವೇಳೆಗೆ ಸಮರ್ಪಕವಾಗಿ ಮಾಡಿ ಮುಗಿಸಿದ ತೃಪ್ತಿ ನಿಮ್ಮಲ್ಲಿ ಉಂಟಾಗಲಿದೆ. ಕ್ರೀಡಾಕ್ಷೇತ್ರದಲ್ಲಿ ಹೆಸರು ಮಾಡುವ ಅವಕಾಶವಿದೆ.
ಮೀನ
ವಾಸ್ತು, ಶಿಲ್ಪಕೆತ್ತನೆಯ ಕೆಲಸಗಾರರಿಗೆ, ಕಟ್ಟಡ ಕಾರ್ಮಿಕರಿಗೆ ಅನುಕೂಲ ಇರಲಿದೆ. ವೃತ್ತಿಯನ್ನು ಅಭಿವೃದ್ಧಿ ಮಾಡುವ ಸಂಕಲ್ಪದಿಂದ ಬಂಡವಾಳ ಹಾಕಿದರೆ ದೇವತಾನುಗ್ರಹದಿಂದ ಅಭಿವೃದ್ಧಿಯಾಗುವುದು.
ADVERTISEMENT
ADVERTISEMENT