ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ವೈಜ್ಞಾನಿಕ ಸಂಶೋಧಕರಿಗೆ ಅನಿರೀಕ್ಷಿತ ಫಲಿತಾಂಶ ದೊರೆಯಲಿದೆ
Published 17 ಜನವರಿ 2024, 23:25 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಈ ದಿನ ಅನಿರೀಕ್ಷಿತ ರೀತಿಯಲ್ಲಿ ಫಲಿತಾಂಶ ದೊರೆಯಲಿದೆ. ಪ್ರಾಮಾಣಿಕ ಪ್ರಯತ್ನಬಲ ಹಾಗೂ ಒಳ್ಳೆಯತನ ಈ ದಿನದಂದು ಉಪಯೋಗಕ್ಕೆ ಬರದು.
ವೃಷಭ
ಯಾವುದೇ ವಾದ ವಿವಾದಗಳು ನಡೆದರೂ ಈ ದಿನದ ನಿಮ್ಮ ಕಾರ್ಯ ಸಾಧನೆಗೆ ಅಡ್ಡಿಯಾಗದು. ಬಂಗಾರದಂಥ ಬೆಲೆಬಾಳುವ ವಸ್ತು ಕಳೆದು ಹೋಗುವ ಸಾಧ್ಯತೆಯಿದೆ ಜಾಗ್ರತರಾಗಿರಿ. ಗೃಹದಲ್ಲಿ ಶಾಂತಿ ವರ್ಧಿಸುತ್ತದೆ.
ಮಿಥುನ
ಜನರನ್ನು ಆಕರ್ಷಿಸುವ ಕಲೆ ನಿಮ್ಮಲ್ಲಿದೆ. ತಂತ್ರಗಾರಿಕೆಯನ್ನು ಬಳಸಿಕೊಳ್ಳುವುದರಿಂದ ವ್ಯವಹಾರದಲ್ಲಿ ಲಾಭ ಗಳಿಸುವಿರಿ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಬದಲಾವಣೆ ಕಾಣುವಿರಿ.
ಕರ್ಕಾಟಕ
ದೇವರ ಕೆಲಸಗಳಿಗಾಗಿ ಹಣ ವ್ಯಯವಾದರೂ ಆದಾಯದಲ್ಲಿ ಕೊರತೆಯೇನು ಬರಲಾರದು. ತಂತ್ರಜ್ಞರಿಗೆ ಮತ್ತು ಕುಶಲ ಕಾರ್ಮಿಕರಿಗೆ ಬೇಡಿಕೆಗಳು ಹೆಚ್ಚುವುದು. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯುವುದು.
ಸಿಂಹ
ತೆಗೆದುಕೊಂಡ ನಿರ್ಧಾರದ ಬಗ್ಗೆ ಅನುಮಾನಗಳು ಎದುರಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟವಿರುವುದು. ನಿಮ್ಮ ಸ್ವಲ್ಪ ಪರಿಶ್ರಮ ಕೂಡ ಕಾರ್ಯಸಾಧನೆಯಲ್ಲಿ ಹೆಚ್ಚಿನ ಫಲ ನೀಡಲಿದೆ.
ಕನ್ಯಾ
ಕೆಲಸದಲ್ಲಿ ನಿಮ್ಮ ಗಮನಕ್ಕೆ ಬರುವ ತಪ್ಪುಗಳನ್ನು ಪುನರಾವರ್ತನೆಯಾಗದಂತೆ ಗಮನಿಸಿದರೆ ಯಶಸ್ಸಿನ ದಾರಿ ಕಾಣಬಹುದು. ವಿದ್ಯಾರ್ಜನೆಯಲ್ಲಿ ಉತ್ತಮವಾದ ಹಂತ ತಲುಪಲು ಸಾಧ್ಯ.
ತುಲಾ
ನಾಲ್ಕಾರು ದಿನದ ಹಿಂದೆ ಪ್ರಾರಂಭಿಸಿದ್ದ ಒಂದು ಯೋಜನೆ ಈ ದಿನ ನಿಶ್ಚಿತ ಹಂತ ತಲುಪಿ ಮನಸ್ಸಿಗೆ ಹೆಚ್ಚಿನ ಸಮಾಧಾನವಾಗುವುದು. ಪತ್ರಿಕೋದ್ಯಮದವರಿಗೆ ಕೆಲಸದ ಹೊರೆ ಅತಿ ಎನಿಸುವುದು.
ವೃಶ್ಚಿಕ
ನೀವು ಮಾಡುತ್ತಿರುವ ಪರೋಪಕಾರದ ಕೆಲಸಗಳಿಗೆ ಸಕಾರಾತ್ಮಕ ಪ್ರತಿಫಲ ಕಟ್ಟಿಟ್ಟ ಬುತ್ತಿ. ಆಭರಣಗಳ ಖರೀದಿ ನಡೆಸುವುದರಿಂದ ಸಂತೋಷ ವಾಗುವುದು. ಎಣ್ಣೆ ಮತ್ತು ಬೇಳೆ ಕಾಳು ವ್ಯಾಪಾರ ಉತ್ತಮವಾಗಿರುವುದು.
ಧನು
ವೃತ್ತಿಯಲ್ಲಿ ಅನುಸರಿಸುತ್ತಿರುವ ಮಾರ್ಗದ ಬಗ್ಗೆ ಇನ್ನೊಮ್ಮೆ ಪರಿಶೀಲನೆ ನಡೆಸಿ ಮುಂದೆ ಸಾಗುವುದು ಉತ್ತಮ. ಸ್ವಯಂ ಉದ್ಯೋಗಸ್ಥರಿಗೆ ಇನ್ನೊಬ್ಬರ ಸಹಾಯ ಅನಿವಾರ್ಯ. ಅಧಿಕಾರಕ್ಕಾಗಿ ಹೋರಾಟ ನಡೆಸುವಿರಿ.
ಮಕರ
ತಮ್ಮನ ಕೆಲಸಕ್ಕಾಗಿ ಉನ್ನತ ಅಧಿಕಾರಿಗಳನ್ನು ಕಾಣಲು ದಿನವಿಡೀ ಓಡಾಟ ನಡೆಸುವಿರಿ. ದೇಹದಲ್ಲಿ ಪಿತ್ತಾಧಿಕ್ಯದಿಂದ ಅಥವಾ ನಿದ್ದೆಯ ಅಭಾವದಿಂದ ಅನಾರೋಗ್ಯ ಉಂಟಾಗಬಹುದು.
ಕುಂಭ
ಅಧಿಕ ಕೆಲಸಗಳ ಬಗ್ಗೆ ಗಮನ ಹರಿಸುವುದು ಉತ್ತಮ. ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಬದುಕಿನ ಧನ್ಯತೆಗೆ ಅಚಲವಾದ ನಂಬಿಕೆಯೇ ಮುಖ್ಯವೆಂದು ಅನಿಸುವುದು.
ಮೀನ
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ಮಾಡುವ ಆಲೋಚನೆಯನ್ನು ಕಾರ್ಯರೂಪಕ್ಕೆ ತನ್ನಿರಿ. ಸ್ವಾದಿಷ್ಟ ಭೋಜನದ ಯೋಗ ನಿಮಗೆ ಪ್ರಾಪ್ತವಾಗುವುದು. ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಪ್ರಗತಿ ಕಂಡು ಬರುವುದು. See also: