ಶುಕ್ರವಾರ, 18 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಇತರರ ಬಗ್ಗೆ ಗೌರವ ಹಾಗೂ ತಾಳ್ಮೆ ಹೊಂದಿರುವುದು ಮುಖ್ಯ
Published 18 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉತ್ಪತ್ತಿಯನ್ನು ಲೆಕ್ಕಿಸಿ ಅರಸಿ ಬಂದ ಉದ್ಯೋಗವನ್ನು ದೂರ ಮಾಡುವುದು ಮೂರ್ಖತನಕ್ಕೆ ಉದಾಹರಣೆ. ಸಾಯಂಕಾಲದ ವೇಳೆ ಬಾಲ್ಯದ ನೆನಪುಗಳ ಜತೆಯಲ್ಲಿ ಆತ್ಮೀಯರೊಂದಿಗೆ ಕಾಲ ಕಳೆಯುವ ಲಕ್ಷಣಗಳಿದೆ.
ವೃಷಭ
ಮನೆಯಲ್ಲಿ ಸಣ್ಣ ಪ್ರಮಾಣದ ಕಲಹಕ್ಕೆ ಕಾರಣರಾದಿರಿ ಎಂದು ದುಃಖಿಸುವಂತಾಗುತ್ತದೆ. ವಿಮರ್ಶಿಕೊಳ್ಳಬೇಕಾದ ಸ್ಥಿತಿ ಬರಲಿದೆ. ಅನಿರೀಕ್ಷಿತವಾಗಿ ತೋರಿಬರುವ ಅಡ್ಡಿ-ಆತಂಕಗಳಿಗೆ ಧೈರ್ಯಗೆಡದಿರಿ.
ಮಿಥುನ
ಪದವಿ ಹಂತದಲ್ಲಿರುವ ವಿದ್ಯಾರ್ಥಿಗಳಿಗೆ ಕೆಲಸದ ವಿಚಾರವಾಗಿ ದೀರ್ಘ ಶ್ವಾಸವನ್ನು ಬಿಡುವಂಥ ಸಂದರ್ಭ ಎದುರಾಗಲಿದೆ. ಭೇಟಿ ಮಾಡುವಂಥ ವ್ಯಕ್ತಿಯ ಸಾಂಗತ್ಯವು ಸಾರ್ಥಕವೆಂದು ಎನಿಸುವುದು.
ಕರ್ಕಾಟಕ
ಹಿಂದಿನ ಕಹಿ ಘಟನೆಗಳನ್ನು ಮರೆತು ಮುನ್ನಡೆದಲ್ಲಿ ಸಿಹಿ ದಿನ ಗಳನ್ನು ಆನಂದದಿಂದ ಅನುಭವಿಸುವಂತೆ ಆಗಲಿದೆ. ವೈದ್ಯಕೀಯ ಲೋಕದಲ್ಲಿ ಅದರಲ್ಲೂ ಆಯುರ್ವೇದ ತಿಳಿದವರಿಗೆ, ನಾಟಿ ವೈದ್ಯರಿಗೆ ಬೇಡಿಕೆ ಹೆಚ್ಚಾದೀತು.
ಸಿಂಹ
ದಿನಗೂಲಿ ಕೆಲಸದಲ್ಲಿ ಇರುವವರಿಗೆ ಕೆಲಸದಲ್ಲಿ ಹೊಸತನ ಕಂಡುಕೊಳ್ಳುವಿರಿ. ಸಿವಿಲ್ ಎಂಜಿನಿಯರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಪ್ರಗತಿಯ ಹಾದಿಯನ್ನು ಸ್ಪರ್ಶಿಸಲಿದ್ದೀರಿ.
ಕನ್ಯಾ
ಅಕ್ಕ ಪಕ್ಕದಲ್ಲಿನ ಭಿನ್ನಾಭಿಪ್ರಾಯಗಳಿಗೆ ಪ್ರತಿಕ್ರಿಯಿಸುವುದು ಸಮಂಜಸವಲ್ಲ. ಭಾರದ ವಸ್ತುಗಳನ್ನು ಎತ್ತಿ ಇಳಿಸುವಂಥ ಕೆಲಸ ಮಾಡಲು ಹೋಗಿ ದೇಹದ ಭಾಗಗಳನ್ನು ಉಳುಕಿಸಿಕೊಳ್ಳುವಂತೆ ಆಗಬಹುದು ಎಚ್ಚರ.
ತುಲಾ
ಪರಿಸ್ಥಿತಿ , ಅವಕಾಶಗಳನ್ನು ಜಾಣತನದಿಂದ ಉಪಯೋಗಿಸಿಕೊಂಡಲ್ಲಿ, ಜೀವನದಲ್ಲಿ ಸ್ಥಿರತೆ ಪ್ರಾಪ್ತಿಯಾಗುವುದು. ಏಕಾಗ್ರತೆಯ ಕೊರತೆಯಿಂದ ನೀವು ಮಾಡುವ ಕೆಲಸದಲ್ಲಿ ಏನಾದರೂ ತಪ್ಪುಗಳಾಗುತ್ತಲೇ ಇರುತ್ತವೆ. ‌
ವೃಶ್ಚಿಕ
ಉತ್ತಮ ಕಾರ್ಯವನ್ನು ಅನುಷ್ಠಾನಗೊಳಿಸುವಲ್ಲಿ ವಿಳಂಬ ಬೇಡ. ಕೃಷಿಗೆ ಸಂಬಂಧಿಸಿದಂತೆ ಪ್ರಾಕೃತಿಕ ವಿಕೋಪ, ಕಾಡು ಪ್ರಾಣಿಗಳ ಹಾವಳಿ, ಬೆಳೆರೋಗದಂಥ ಸಮಸ್ಯೆ ಕಾಡಬಹುದು. ಅಪವಾದಗಳಿಗೆ ಕುಗ್ಗಬೇಡಿ.
ಧನು
ಮನೆಯ ನವೀಕರಣ ವಿಷಯದಲ್ಲಿ ಮಾಡುವ ಪ್ರಯತ್ನ ಸಫಲವಾಗುತ್ತದೆ. ಗೆಳೆತನದ ಮಧ್ಯದಲ್ಲಿ ಹಣಕಾಸು ಬಂದು ಸಂಬಂಧ, ಬಾಂಧವ್ಯ ಸ್ಥಾನ ಕಳೆದುಕೊಳ್ಳಲಿವೆ. ಪರೋಪಕಾರದ ಪ್ರತಿಫಲ ಅನುಭವಕ್ಕೆ ಬರುತ್ತದೆ.
ಮಕರ
ಹೊಸ ವ್ಯಕ್ತಿಗಳ ಸ್ನೇಹವನ್ನು ಬೆಳೆಸಿ ವ್ಯವಹರಿಸುವಾಗ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಅತಿಯಾದ ಉಷ್ಣದಿಂದ ಕೆಲವು ಸಮಸ್ಯೆಗಳಾಗಬಹುದು. ನಷ್ಟವಾದ ವಸ್ತು ಮರಳಿ ಕೈ ಸೇರಲಿದೆ.
ಕುಂಭ
ಮಾಡದೆ ಇರುವ ತಪ್ಪುಗಳ ಆಪಾದನೆ ಬಂದು ಅದನ್ನು ನಿವಾರಿಸಿಕೊಳ್ಳಲಾಗದೇ ತೊಳಲಾಡಬೇಕಾಗುವುದು. ಇತರರ ಬಗ್ಗೆ ಗೌರವ ಹಾಗೂ ತಾಳ್ಮೆ ಹೊಂದಿರುವುದು ಮುಖ್ಯ.
ಮೀನ
ವಿದ್ಯುತ್ ಉಪಕರಣಗಳ ಮಾರಾಟ, ರಿಪೇರಿ ಮಾಡುವವರಿಗೆ ಲಾಭ. ವಿದೇಶಿ ವಸ್ತುಗಳ ಖರೀದಿಗಾಗಿ ಧನ ವ್ಯಯವಾಗಲಿದೆ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಪುಸ್ತಕ ಓದುವ ಹವ್ಯಾಸ ಇಮ್ಮಡಿಗೊಳ್ಳುವುದು.
ADVERTISEMENT
ADVERTISEMENT