ದಿನ ಭವಿಷ್ಯ | ಕೃಷಿ ಮೂಲದಿಂದ ಆರ್ಥಿಕವಾಗಿ ಮುನ್ನಡೆ ಸಾಧಿಸುವಿರಿ
Published 19 ಜುಲೈ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಪಾಲುದಾರಿಕೆ ವ್ಯವಹಾರ ನಡೆಸಲು ಇಚ್ಛಿಸುವವರು ನಿಯಮಗಳ ಕುರಿತಾಗಿ ಇನ್ನೊಮ್ಮೆ ಮಾತನಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಸ್ನೇಹ ಸಂಬಂಧ ಉಳಿಯುತ್ತದೆ. ಸನ್ಮಾರ್ಗದಲ್ಲಿ ಹಣ ವಿನಿಯೋಗವಾಗುವುದು.
ವೃಷಭ
ದೇವತಾನುಗ್ರಹದಿಂದ ಮತ್ತು ಅಪಾರವಾದ ಆತ್ಮ ವಿಶ್ವಾಸದಿಂದ ಕೆಲಸ ಆರಂಭಿಸಿ, ವಿಘ್ನಗಳು ದೂರವಾಗುವುದು. ನಿರೀಕ್ಷಿತ ಮೂಲಗಳಿಂದ ಬರಬೇಕಿದ್ದ ಹಣದ ವಿಚಾರದಲ್ಲಿ ಅಡ್ಡಿ ಆತಂಕ ಎದುರಾಗುವುದು.
ಮಿಥುನ
ಹೆಚ್ಚುವರಿ ಆದಾಯದ ಬಗ್ಗೆ ದೀರ್ಘವಾದ ಆಲೋಚನೆ ಮಾಡುವಿರಿ. ಕನಸನ್ನು ಸಾಕಾರಗೊಳಿಸುವ ಮನಸ್ಸು ನಿಮಗೀಗ ಬರಲಿದೆ. ನಿಯಮ ಉಲ್ಲಂಘನೆ ಸರಿಯಲ್ಲ. ಸಾಲ ಮರುಪಾವತಿಗೆ ಅವಕಾಶ ಇದೆ.
ಕರ್ಕಾಟಕ
ರೈತಾಪಿ ವರ್ಗದವರಿಗೆ ಪ್ರಾಕೃತಿಕ ವಾತಾವರಣ ಮತ್ತು ಕೂಲಿ ಕಾರ್ಮಿಕರಿಂದ ಸಹಕಾರ ಹೆಚ್ಚಿನ ಲಾಭವನ್ನು ಉಂಟುಮಾಡಲಿದೆ. ಕುಟುಂಬ ವ್ಯವಹಾರಗಳಲ್ಲಿ ಸಾಕಷ್ಟು ಸಂಯಮ ವಹಿಸುವುದು ಒಳ್ಳೆಯದು.
ಸಿಂಹ
ಮೇಲ್ನೋಟಕ್ಕೆ ಕಾಣುವುದೇ ಸತ್ಯವೆಂದು ನಂಬಬೇಡಿ, ಆಳವಾದ ಅಧ್ಯಯನ ನಡೆಸಿ ತೀರ್ಮಾನಿಸಿರಿ. ದೈನಂದಿನ ಕೆಲಸದ ಹೊರತಾಗಿ ಹೆಚ್ಚುವರಿ ಕೆಲಸದಿಂದ ಮನಸ್ಸಿಗೆ ಸಂತೋಷ ಉಂಟಾಗುತ್ತದೆ.
ಕನ್ಯಾ
ವ್ಯವಹಾರಗಳಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಇರುವುದು. ವಿದ್ಯಾಭ್ಯಾಸ ದಲ್ಲಿ ಹೆಚ್ಚಿನ ಉತ್ಸಾಹ ಉಂಟಾಗಲಿದೆ. ತರಕಾರಿ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಸಮಾಧಾನದ ಜೊತೆಯಲ್ಲಿ ಆರ್ಥಿಕವಾಗಿ ಭದ್ರವಾಗುವಿರಿ.
ತುಲಾ
ಬರವಣಿಗೆ, ಮುದ್ರಣ ಕೆಲಸ ಮಾಡುತ್ತಿರುವವರಿಗೆ ಲಾಭದಾಯಕ ಅವಕಾಶ ಸಿಗಲಿದೆ. ಆದಾಯದಲ್ಲಿ ಗಣನೀಯ ವ್ಯತ್ಯಾಸವಾಗುವುದು. ಕಾರ್ಮಿಕ ವರ್ಗದವರಿಗೆ ಬಿಡುವಿಲ್ಲದ ಕೆಲಸ ಅನಾರೋಗ್ಯವನ್ನು ಉಂಟುಮಾಡಲಿದೆ.
ವೃಶ್ಚಿಕ
ನಾಟಕೀಯ ಬುದ್ಧಿ ಬಿಟ್ಟು ಪ್ರಾಮಾಣಿಕವಾಗಿರಿ. ನಿಜವಾದ ಭಾವನೆಗಳಿಂದ ಪ್ರಾಮಾಣಿಕವಾಗಿರಲು ಸಾಧ್ಯ. ವೃತ್ತಿ ಕೌಶಲ ಹಾಗೂ ಜಾಣ್ಮೆ ಮೆಚ್ಚುಗೆಗೆ ಪಾತ್ರವಾಗುವುದು. ಸಾಕಷ್ಟು ಹಣ ಹೂಡಿಕೆ ಮಾಡುವಿರಿ.
ಧನು
ಹಳೆಯ ಸಮಸ್ಯೆಗಳನ್ನು ಕೆದಕುವ ಬದಲು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿ. ನಿಮಗೆ ವೃತ್ತಿ ಜೀವನದ ಬಗ್ಗೆ ಇರುವ ಸಂಶಯವನ್ನು ಬಿಟ್ಟು ನೆಮ್ಮದಿಯಿಂದ ಜೀವನ ನಡೆಸಿ. ಬೇಳೆಕಾಳು ಸಗಟು ವ್ಯಾಪಾರಿಗಳಿಗೆ ಲಾಭವಿದೆ.
ಮಕರ
ಕನಸುಗಳನ್ನು ನನಸು ಮಾಡಲು ಸಾಕಷ್ಟು ಶ್ರಮ ಅನಿವಾರ್ಯ. ಸಮಸ್ಯೆಗಳಿಗೆ ಉತ್ತಮ ಪರಿಹಾರಗಳು ದೊರೆಯುವವು. ವೃತ್ತಿಯ ಜೊತೆಜೊತೆಗೆ ಉನ್ನತ ವಿದ್ಯಾಭಾಸ ಮಾಡುವ ಮನಸ್ಸಾಗಲಿದೆ.
ಕುಂಭ
ಮಕ್ಕಳ ಓದಿನ ವಿಚಾರದಲ್ಲಿ ಕಠಿಣ ಕ್ರಮ ಅಗತ್ಯವಾಗುವುದು. ದೈನಂದಿನ ಕೆಲಸಗಳಲ್ಲಿ ಬದಲಾವಣೆ ಇರುವುದಿಲ್ಲ. ಯಾವುದೇ ಪರಿಸ್ಥಿತಿಯಲ್ಲಿ ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕಿರುವರು.
ಮೀನ
ಕುಟುಂಬದ ಸದಸ್ಯರಲ್ಲಿ ಉತ್ತಮ ಆರೋಗ್ಯವಿರುವುದು ಮನಸ್ಸಿಗೆ ನೆಮ್ಮದಿ ತರಲಿದೆ. ಕೃಷಿ ಮೂಲದಿಂದ ಆರ್ಥಿಕವಾಗಿ ಮುನ್ನಡೆ ಸಾಧಿಸುವಿರಿ. ಸ್ನೇಹಿತರ ಕೆಲಸಕಾರ್ಯಗಳಿಗಾಗಿ ಓಡಾಟ ನಡೆಸಬೇಕಾಗುವುದು.