ದಿನ ಭವಿಷ್ಯ: ಈ ರಾಶಿಯವರು ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ
Published 21 ಮೇ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಾಧುಸಂತರ ದರ್ಶನದಿಂದ ಮನಸ್ಸಿಗೆ ಸಮಾಧಾನ ಕಂಡುಬರಲಿದೆ. ಆಕಸ್ಮಿಕ ಧನಲಾಭದಿಂದ ಹರ್ಷವಾಗುವುದು. ಪರೀಕ್ಷಾ ಅಧಿಕಾರಿಗಳು ಕಚೇರಿಗೆ ಭೇಟಿ ನೀಡಿ ಪರೀಕ್ಷಿಸಬಹುದು. ಸಿದ್ಧರಾಗಿರಿ.
ವೃಷಭ
ಬಂಧು-ಮಿತ್ರರ ಒಡನಾಟದಿಂದ ಸಂತೋಷ ತೋರಿಬರಲಿದೆ. ಚಿನ್ನ–ಬೆಳ್ಳಿ ವ್ಯಾಪಾರಿಗಳಿಗಿಂದು ವ್ಯಾಪಾರವಾಗುವ ಸಂತೋಷದ ಜತೆಗೆ ಅಂಗಡಿಯಲ್ಲಿ ಬೆಲೆ ಬಾಳುವ ವಸ್ತುಗಳು ಕಾಣೆಯಾಗುವ ಆತಂಕವೂ ಎದುರಾಗಲಿದೆ.
ಮಿಥುನ
ಸತ್ಯನಾರಾಯಣ ಸ್ವಾಮಿಯ ಸೇವೆ ಮಾಡುವುದರಿಂದ ಜಟಿಲ ಸಮಸ್ಯೆಗಳೂ ಸೌಹಾರ್ದಯುತವಾಗಿ ಬಗೆಹರಿಯಲಿವೆ. ತಂತ್ರಗಾರಿಕಾ ಬುದ್ಧಿಯನ್ನು ಬದಲಿಸಿಕೊಳ್ಳುವ ಸಮಯ.
ಕರ್ಕಾಟಕ
ಪತ್ರಿಕೋದ್ಯಮಿಗಳಿಗೆ ಶುಭದಿನ. ಪ್ರಸ್ತುತ ರಾಜಕೀಯ ವಿದ್ಯಮಾನಗಳಿಂದ ಸಾಮಾಜಿಕ ಲಾಭವಾಗಲಿದೆ. ಅಧಿಕಾರ ಪಡೆದುಕೊಳ್ಳಲು ಲಾಬಿ ನಡೆಸಬೇಕಾಗಬಹುದು. ಪಾರಂಪರಿಕ ಹಿತಶತ್ರುಗಳ ಬಗ್ಗೆ ಎಚ್ಚರ ವಹಿಸಿ.
ಸಿಂಹ
ಹೊಸಕೆಲಸಕ್ಕೆ ಕೈ ಹಾಕಲಿಚ್ಛಿಸಿರುವ ನೀವು ಮೊದಲು ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮಗೊಳಿಸಲು ಬೇಕಾಗುವ ಎಲ್ಲಾ ಕಾರ್ಯಗಳನ್ನು ಪ್ರಾರಂಭಿಸಿ. ಇನ್ನೊಬ್ಬರ ಜೀವನದ ಜತೆ ಆಟವಾಡುವುದು ಸರಿಯಲ್ಲ.
ಕನ್ಯಾ
ಪಟ್ಟು ಬಿಡದೆ ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ವೃತ್ತಿ ತರಬೇತಿ ಸಂಸ್ಥೆಗಳಲ್ಲಿ ಉದ್ಯೋಗ ಸಿಗಲಿದೆ. ಮಕ್ಕಳಿಂದ ವಿದ್ಯಾಭ್ಯಾಸದ ವಿಷಯದಲ್ಲಿ ಖರ್ಚು ಸಂಭವವಿರುವುದು. ಉದ್ಯೋಗ ಬದಲಾವಣೆಗೆ ಪ್ರಯತ್ನಿಸಬಹುದು.
ತುಲಾ
ವಾಣಿಜ್ಯೋದ್ಯಮ ಮಂದಿಗೆ ಇಂದು ವ್ಯವಹಾರದಲ್ಲಿ ಬಂಡವಾಳ ತೊಡಗಿಸಲು ಉತ್ತಮ ದಿನ . ಆದರೆ ಹಣದ ಹೊಂದಾಣಿಕೆ ವಿಷಯವಾಗಿ ನಂಬಿದವರಿಂದ ಮೋಸವಾಗಿ ಪರಿಸ್ಥಿತಿ ಕಷ್ಟವಾಗಲಿದೆ.
ವೃಶ್ಚಿಕ
ವೈದ್ಯಕೀಯ ಖರ್ಚಿನ ಹಣವನ್ನು ಸಂಸ್ಥೆಯಿಂದ ಪಡೆದುಕೊಳ್ಳುವಂತಾಗುವುದು. ಕುಟುಂಬ ಕಲಹದಿಂದ ಆದಷ್ಟು ದೂರ ಇರುವುದು ಒಳ್ಳೆಯದು. ಕಾರ್ಯಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಕಿರುಕುಳವು ತೋರಿಬಂದೀತು.
ಧನು
ಕಚೇರಿಗಳಲ್ಲಿ ಸಹೋದ್ಯೋಗಿಗಳ ಸಹಕಾರ ಪಡೆಯುವುದು ಅಗತ್ಯ. ಸುಗಂಧ ದ್ರವ್ಯಗಳ ಉಪಯೋಗದಿಂದ ಅಲರ್ಜಿ ಸಂಭವಿಸಬಹುದು. ನಿಗಾದಿಂದ ಉಪಯೋಗಿಸಿ. ವಿದ್ಯಾ ಕ್ಷೇತ್ರದವರಿಗೆ ಗೌರವ ದೊರಕಲಿದೆ.
ಮಕರ
ಮಂಜುನಾಥನ ದರ್ಶನ ಭಾಗ್ಯದಿಂದ ಕಾರ್ಯಾನುಕೂಲವಾಗಲಿದೆ. ಆದಾಯವೆಚ್ಚಗಳನ್ನು ಸರಿದೂಗಿಸಿಕೊಳ್ಳುವಿರಿ. ಪ್ರತಿಭೆ ಮತ್ತು ಕೌಶಲಗಳು ಬೆಳಕಿಗೆ ಬಂದು ಇತರರಿಗೆ ವಿಶೇಷ ವ್ಯಕ್ತಿ ಎನಿಸುವಿರಿ.
ಕುಂಭ
ಧೈರ್ಯದಿಂದ ದೊಡ್ಡ ಯೋಜನೆ ಕೈಗೊಳ್ಳಬಹುದು. ಆದರೆ, ಹಣದ ವಿಚಾರದಲ್ಲಿ ಎಚ್ಚರವಹಿಸಿ. ಆಪ್ತಸ್ನೇಹಿತರು ಮತ್ತು ನೆರೆಯವರೊಂದಿಗೆ ಬಾಂಧವ್ಯ ಉತ್ತಮಗೊಳ್ಳುವುದು. ವ್ಯಸನಗಳಿಂದ ದೂರವಿರಿ.
ಮೀನ
ಶ್ರಮಜೀವಿಗಳಿಗೆ ಉತ್ತಮ ಆದಾಯವಿರುವುದು. ನಿಮ್ಮ ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತಿರುವುದರಿಂದ ಸಮಾಧಾನ ಇರಲಿದೆ. ಯಶಸ್ಸಿಗಾಗಿ ವಿಶೇಷ ಪರಿಶ್ರಮದ ಆಗತ್ಯವಿದೆ.