ಭಾನುವಾರ, 26 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ..
Published 25 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬಿಟ್ಟುಹೋದ ಸಂಬಂಧಗಳನ್ನು ಮತ್ತೆ ಬೆಳೆಸುವ ಬಗ್ಗೆ ಕುಟುಂಬದವರೊಂದಿಗೆ ಚರ್ಚಿಸಿ, ಒಮ್ಮತದ ತೀರ್ಮಾನಕ್ಕೆ ಬರುವುದು ಉತ್ತಮ. ಬಾಕಿ ಉಳಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ಬಗ್ಗೆ ಗಮನ ನೀಡಿ.
ವೃಷಭ
ನಿಮ್ಮ ಕಾರ್ಯ ವೈಖರಿಯು ಕೆಲವರಲ್ಲಿ ಮತ್ಸರ ಉಂಟುಮಾಡುತ್ತದೆ. ನಿರೀಕ್ಷಿಸಿದ ಕಾರ್ಯಗಳು ನೆರವೇರಿ ಮನಸ್ಸಿಗೆ ನೆಮ್ಮದಿ ಉಂಟಾಗುವುದು. ಕೆಲಸದ ಅಧಿಕ ಒತ್ತಡದಿಂದ ಬೆನ್ನು ನೋವು ಕಾಡಬಹುದು.
ಮಿಥುನ
ಯೋಜನೆಗಳ ಬಗ್ಗೆ ಸಂಬಂಧಪಟ್ಟವರಲ್ಲಿ ಅಗತ್ಯವಾಗಿ ಚರ್ಚೆ ನಡೆಸಿ. ವ್ಯಾಪಾರಸ್ಥರು ದಿನನಿತ್ಯದ ಆಗುಹೋಗುಗಳ ಬಗ್ಗೆ ಗಮನಹರಿಸಿ. ತಾತ್ಕಾಲಿಕ ಹುದ್ದೆಯಲ್ಲಿರುವವರಿಗೆ ಬದಲಾವಣೆಯ ಸೂಚನೆ ಕಂಡುಬರಲಿದೆ.
ಕರ್ಕಾಟಕ
ನಿಮ್ಮ ಗುಪ್ತ ವಿಷಯಗಳನ್ನು ತಿಳಿದುಕೊಳ್ಳಲು ನಿಮ್ಮೊಡನೆ ಕಪಟ ಸ್ನೇಹವನ್ನು ಮಾಡುವವರ ಬಗ್ಗೆ ಗಮನವಿರಲಿ. ಮೊದಲು ಕೊಟ್ಟ ಮಾತಿನಂತೆಯೆ ನಡೆದುಕೊಳ್ಳಲು ಹರಸಹಾಸವನ್ನು ಪಡುವಂತಾಗಬಹುದು.
ಸಿಂಹ
ದೇಹದಲ್ಲಿನ ಉಷ್ಣತೆಯನ್ನು ನೀವಾಗಿಯೆ ಆಹಾರದ ಮೂಲಕ ನಿವಾರಿಸಿಕೊಳ್ಳದಿದ್ದರೆ ವೈದ್ಯರ ದರ್ಶನ ಅನಿವಾರ್ಯವಾಗುವುದು. ಪ್ರೀತಿ ಪಾತ್ರರೊಂದಿಗೆ ದೂರದ ಊರಿಗೆ ಪ್ರಯಾಣ ಬೆಳೆಸುವ ಯೋಗವಿದೆ.
ಕನ್ಯಾ
ನಿವೇಶನಗಳ ಖರೀದಿಯ ವ್ಯವಹಾರದಲ್ಲಿ ಮತ್ತೊಮ್ಮೆ ದಾಖಲೆಗಳ ಪರೀಕ್ಷೆ ಅನಿವಾರ್ಯ ಎನಿಸಲಿದೆ. ಕುಟುಂಬದ ವತಿಯಿಂದ ವಾರ್ಷಿಕವಾಗಿ ನಡೆಸಬೇಕಾದ ಸತ್ಕಾರ್ಯಗಳನ್ನು ಕುರಿತು ಸಮಾಲೋಚನೆ ನಡೆಸಿ.
ತುಲಾ
ಸಾಮಾಜಿಕ ಸೇವೆಯಲ್ಲಿ ಸಮಯ ವ್ಯರ್ಥವಾಗದಂತೆ ಜಾಗರೂಕತೆ ವಹಿಸಿ. ಸಾಧ್ಯವಾದಷ್ಟೂ ಉಳಿತಾಯ ಮಾಡುವ ಪ್ರಯತ್ನ ರೂಢಿಸಿಕೊಳ್ಳಿ. ಯೋಜನೆಗಳು ಪೂರ್ವವ್ಯವಸ್ಥಿತ ರೂಪದಲ್ಲಿ ಸಾಗಲಿವೆ.
ವೃಶ್ಚಿಕ
ಪರಿಸ್ಥಿತಿಗಳನ್ನು ಅನುಕೂಲಕ್ಕೆ ತಕ್ಕಂತೆ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ಸಫಲರಾಗುವಿರಿ. ಬೋಧನೆಯಲ್ಲಿ ಗಣಿತಕ್ಕೆ ಸಂಬಂಧಿಸಿದಂತೆ ವಿಶೇಷವಾಗಿ ಪರಿಣತೆಯನ್ನು ಹೊಂದಿರುವ ನಿಮಗೆ ಶಿಷ್ಯರ ಸಂಖ್ಯೆ ವೃದ್ಧಿಯಾಗಲಿದೆ.
ಧನು
ಮಕ್ಕಳ ವಿಷಯದಲ್ಲಿ ಅಸಡ್ಡೆ ತೋರಿಸಬಾರದು ಎಂಬುವುದು ಅರಿವಾಗಲಿದೆ. ಕುಟುಂಬದಲ್ಲಿ ಹಿಂದೆ ನಡೆದ ಕೆಟ್ಟ ವಿಚಾರಗಳ ಬಗ್ಗೆ ಮಾತನಾಡುವುದರಿಂದ ಸಹೋದರರಲ್ಲಿ ಭಿನ್ನಾಭಿಪ್ರಾಯ ಉಂಟಾಗುತ್ತದೆ.
ಮಕರ
ಆಹಾರ ಪದಾರ್ಥದ ವ್ಯಾಪಾರಸ್ಥರಿಗೆ ಶ್ರಮಕ್ಕೆ ತಕ್ಕಷ್ಟು ಆದಾಯ ಲಭಿಸಲಿದೆ. ಸಂಘ ಸಮೂಹದ, ಸಜ್ಜನರ ಸಹವಾಸದಿಂದ ಪ್ರಾಪಂಚಿಕ ಜ್ಞಾನ ವೃದ್ಧಿಯಾಗುತ್ತದೆ. ದುರ್ಗಾದೇವಿಯಲ್ಲಿ ಶರಣಾಗುವುದರಿಂದ ಶುಭ ಪ್ರಾಪ್ತಿ.
ಕುಂಭ
ಒಂಟಿತನ ಹೋಗಲಾಡಿಸಿಕೊಳ್ಳಲು ಮನಸ್ಸನ್ನು ಅಧಿಕ ಸಮಯ ಕೆಲಸಗಳತ್ತ ಹರಿಸುವಿರಿ. ಉದ್ಯೋಗದಲ್ಲಿ ಒತ್ತಡಗಳಿಗೆ ಸಿಲುಕಬೇಡಿ. ರಾಜಕೀಯ ಧುರೀಣರಿಗೆ ಈ ದಿನವು ಮೋಡ ಮುಸುಕಿದಂತಿರುವುದು.
ಮೀನ
ಚಿನ್ನಾಭರಣದ ಖರೀದಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಸಿಗುವುದು. ಸರಕು ಸಾಗಾಣಿಕೆದಾರರಿಗೆ ಮತ್ತು ಬಂದರು ಕಾರ್ಮಿಕರಿಗೆ ಉತ್ತಮವಾದ ಪ್ರತಿಫಲ ದೊರೆಯಲಿದೆ.
ADVERTISEMENT
ADVERTISEMENT