ದಿನ ಭವಿಷ್ಯ: ಅನುಕಂಪ ತೋರಿಸುವ ಸಂದರ್ಭದಲ್ಲಿ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ
Published 26 ಸೆಪ್ಟೆಂಬರ್ 2025, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಗ್ರಹಗತಿಗಳು ಉತ್ತಮವಾಗಿದ್ದು ಅದೃಷ್ಟ ಹುಡುಕಿಕೊಂಡು ಬರಲಿದೆ. ಕಾಳಜಿ ಹೊಂದಿದವರ ಸಲಹೆಗಳಿಗೆ ಕಿವಿಗೊಡಿ. ಮಗನಿಂದ ಶುಭ ಸುದ್ದಿ ಬರಲಿದೆ. ಹಲ್ಲಿನ ಸಮಸ್ಯೆ ಇದ್ದಲ್ಲಿ ಬಗೆಹರಿಸಿಕೊಳ್ಳಲು ಸೂಕ್ತ ಸಮಯ.
ವೃಷಭ
ಮೇಧಾವಿ ಜನರೊಂದಿಗಿನ ಸಂಪರ್ಕ ಬೆಳೆಯುವುದರಿಂದ ಕೆಲಸ ಕಾರ್ಯಗಳನ್ನು ಸಾಧಿಸಿ ಕೊಳ್ಳುವುದಕ್ಕೆ ಸುಲಭವಾಗುವುದು. ಅನುಕಂಪ ತೋರಿಸುವ ಸಂದರ್ಭದಲ್ಲಿ ಪ್ರತಿಫಲ ನಿರೀಕ್ಷಿಸುವುದು ಸರಿಯಲ್ಲ.
ಮಿಥುನ
ನೂತನ ವಾಹನ ಖರೀದಿಯ ಯೋಚನೆಗೆ ಪೋಷಕರಿಂದ ಒಪ್ಪಿಗೆ ಸಿಗಲಿದೆ. ಸೋದರಿಯ ವಿಷಯದಲ್ಲಿ ಧಾರಾಳತನ ತೋರುವಿರಿ. ಇವೆಲ್ಲದರಲ್ಲೂ ಆರ್ಥಿಕ ಪರಿಸ್ಥಿತಿಯನ್ನು ನೆನಪಿನಲ್ಲಿಟುಕೊಂಡು ಮುಂದುವರೆಯಿರಿ.
ಕರ್ಕಾಟಕ
ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವುದು ಸಂತೋಷವಾಗುವುದು, ಆದರೆ ಅತಿಯಾಗಿ ಬೀಗದಿರುವುದು ಲೇಸು. ಋಣ ಪರಿಹಾರವಾಗಿ ಕುಟುಂಬದಲ್ಲಿ ನೆಮ್ಮದಿ ಉಂಟಾಗುತ್ತದೆ.
ಸಿಂಹ
ಅನಿರೀಕ್ಷಿತವಾಗಿ ದುರ್ಘಟನೆಗಳು ಎದುರಾಗಲಿವೆ. ಯೋಜನೆಗಳು ಪೂರ್ವನಿಯೋಜಿತವಾಗಿ ವ್ಯವಸ್ಥಿತ ರೂಪದಲ್ಲಿ ಸಾಗುವುದಕ್ಕೆ ಪರಿಸ್ಥಿತಿ ಅಡ್ಡಗಾಲು ಹಾಕಿದಂತೆ ಆಗಬಹುದು. ವೃತ್ತಿಯಲ್ಲಿ ಬದಲಾವಣೆ ಇರುವುದಿಲ್ಲ.
ಕನ್ಯಾ
ಇದ್ದ ಪ್ರತಿಭೆಯನ್ನು ಇತರರು ಗಮನಿಸುವರು. ಆಸ್ತಿ ಖರೀದಿ ಮಾಡುವ ನಿರ್ಧಾರವನ್ನು ಮಾಡುವಿರಿ. ನಿಮ್ಮ ಮೇಲಧಿಕಾರಿಗಳು ಬಯಸಿದ ರೀತಿಯಲ್ಲಿ ನಿಮ್ಮ ಪರಿಶ್ರಮ, ಜವಾಬ್ದಾರಿಯುತವಾದ ನಡುವಳಿಕೆಯಿಂದಾಗಿ ಮೆಚ್ಚುವರು.
ತುಲಾ
ಪ್ರಮುಖ ಕೆಲಸಗಳು ಅನಾಯಾಸವಾಗಿ ಪೂರ್ಣಗೊಳ್ಳುವವು. ಮನೆಯಲ್ಲಿ ಮೃದು ಭಾಷಿಗಳು ಎನಿಸಿಕೊಳ್ಳುವಿರಿ. ದೂರದ ಸಂಬಂಧಿಕರೊಬ್ಬರ ಆಗಮನದಿಂದ ಮನೆಯಲ್ಲಿ ಸಡಗರ ಸೃಷ್ಟಿಸಲಿದೆ.
ವೃಶ್ಚಿಕ
ತಪ್ಪುಗಳು ಸಂಭವಿಸದಂತೆ ಗಮನಹರಿಸಿ. ರಾಸಾಯನಿಕ ವಸ್ತುಗಳ ಮಾರಾಟದಿಂದ ಹೆಚ್ಚಿನ ಆದಾಯ ಸಿಗುತ್ತದೆ. ನಿಮ್ಮ ಸಮಯ ಇಂದು ಅಮೂಲ್ಯವಾಗಿದೆ. ಆರೋಗ್ಯ ಸುಧಾರಿಸಿ ಎಂದಿನಂತೆ ಕೆಲಸಕ್ಕೆ ತೆರಳುವಿರಿ.
ಧನು
ಸ್ನೇಹಿತರು ನಿಮ್ಮ ಯೋಜನೆಗಳನ್ನು ಬೆಂಬಲಿಸಲಿದ್ದಾರೆ. ಉತ್ತಮ ಆಡಳಿತಗಾರರೆಂಬ ಖ್ಯಾತಿಯಿಂದಾಗಿ ಉನ್ನತ ಪದವಿ ಪ್ರಾಪ್ತವಾಗಲಿದೆ. ಶೀತ ಬಾಧೆಯಿಂದ ಮುಕ್ತರಾಗಲು ಆಹಾರದಲ್ಲಿ ನಿಯಮವಿರಲಿ.
ಮಕರ
ಮಂದಗತಿಯಲ್ಲಿ ಸಾಗುತ್ತಿದ್ದ ಕೆಲವು ಕೆಲಸಗಳನ್ನು ಶೀಘ್ರ ಪೂರೈಸಲು ಸಿಬ್ಬಂದಿಗೆ ತಾಕೀತು ಮಾಡಬೇಕಾಗುವುದು. ಜಾಗರೂಕತೆಯಿಂದ ವ್ಯವಹರಿಸಿ. ಈಶ್ವರನ ಸ್ಮರಣೆಯು ಶುಭವನ್ನು ನೀಡುತ್ತದೆ.
ಕುಂಭ
ಪ್ರಚಲಿತ ವಿದ್ಯಮಾನಗಳ ಬಗೆಗೆಗಿನ ಚರ್ಚಾ ವಿಷಯಗಳಲ್ಲಿ ಪಾಲ್ಗೊಳ್ಳುವಿರಿ. ಕಾರ್ಯಗಳನ್ನು ಮುಗಿಸಿಕೊಳ್ಳಲು ಮನೆಯವರಿಗೆಲ್ಲ ಆತುರ ತೋರುವುದು ಸರಿಯಲ್ಲ. ದಿನಸಿ ವರ್ತಕರಿಗೆ ಲಾಭವೂ ಇರುವುದು.
ಮೀನ
ಬದಲಾಗುವ ಬದುಕಿನ ಗತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ವೃತ್ತಿರಂಗದಲ್ಲಿ ಕಾರ್ಯ ನಿರ್ವಹಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗುವುದು. ಮಾರಾಟ ಪ್ರತಿನಿಧಿಗಳಿಗೆ ಕಮಿಷನ್ ದೊರೆಯಲಿದೆ.