ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರೆಯಲಿದೆ
Published 26 ಡಿಸೆಂಬರ್ 2023, 23:54 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿರುದ್ಯೋಗಿ ಯುವಕರಿಗೆ ಖಾಸಗಿ ಸಂಸ್ಥೆಗಳಲ್ಲಿ ಉತ್ತಮ ಉದ್ಯೋಗ ದೊರೆಯಲಿದೆ. ಸಿಹಿ ಪದಾರ್ಥಗಳ ಮಾರಾಟಗಾರರಿಗೆ ಉತ್ತಮವಾದ ಆದಾಯ ಇರಲಿದೆ. ಹಾಲು ಮಾರಾಟಗಾರರಿಗೆ ಅಧಿಕ ಆದಾಯ ಇರುವುದು.
ವೃಷಭ
ಅನಿವಾರ್ಯ ಕಾರಣಗಳಿಂದ ನಿಮ್ಮ ದಿನನಿತ್ಯದ ಆಚರಣೆಯಲ್ಲಿ ಕೆಲವು ಬದಲಾವಣೆಯನ್ನು ಅನುಭವಿಸುವಿರಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಹೆಚ್ಚಿನ ಲಾಭ ಪಡೆದುಕೊಳ್ಳುವಿರಿ.
ಮಿಥುನ
ನಿಮ್ಮ ಅಚ್ಚುಕಟ್ಟಾದ ಕೆಲಸಗಳಿಂದ ಬೇರೆ ಜನರಿಗೆ ನಿಮ್ಮ ಮೇಲಿನ ಅಭಿಪ್ರಾಯಗಳು ಬದಲಾಗುವುದು. ನಿಮ್ಮ ಪ್ರಯತ್ನಗಳು ಫಲಕಾರಿಯಾಗಿ ಆರ್ಥಿಕಾನುಕೂಲ ಉಂಟಾಗುವುದು. ಮಾನಸಿಕ ಸ್ಥೈರ್ಯ ಹೆಚ್ಚಲಿದೆ.
ಕರ್ಕಾಟಕ
ತೆಂಗು ಬೆಳೆಗಾರರಿಗೆ ಉತ್ತಮ ಬೆಳೆಯ ಜೊತೆಗೆ ಹೆಚ್ಚಿನ ಲಾಭ ಸಿಗುವುದು. ಬಂಧುಗಳಲ್ಲಿ ಅನಗತ್ಯ ವಾದ ವಿವಾದಗಳು ಬೇಡ ಹಾಗೂ ಕಳೆದುಕೊಂಡಿರುವ ವಿಶ್ವಾಸವನ್ನು ಪುನಃ ಸಂಪಾದಿಸುವ ಬಗ್ಗೆ ಗಮನಹರಿಸಿ.
ಸಿಂಹ
ಜವಳಿ ವ್ಯಾಪಾರಿಗಳು ರಿಯಾಯಿತಿ ಮಾರಾಟಗಳಿಂದ ಹೆಚ್ಚು ಲಾಭ ಪಡೆಯಬಹುದು. ಇಂದು ಪ್ರವೃತ್ತಿಯಿಂದಲೂ ಹೆಸರು ಸಂಪಾದನೆ ಮಾಡುವಂತಾಗಲಿದೆ. ನೂತನ ವಾಹನ ಕೊಳ್ಳುವ ಯೋಗವಿದೆ.
ಕನ್ಯಾ
ರಾಜಕೀಯ ಪ್ರವೇಶ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲು ಅತಿಯಾದ ಚಿಂತನೆ ನಡೆಸುವಿರಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯಾಗಿ ಮನಸ್ಸಿಗೆ ನೆಮ್ಮದಿ ಸಿಗುವುದು. ಪಾರಮಾರ್ಥಿಕ ವಿಷಯಗಳತ್ತ ಮನಸ್ಸು ಹರಿಯುವುದು.
ತುಲಾ
ತಂದೆಯ ಅಥವಾ ಹಿರಿಯರ ಮಾತಿಗೆ ಎದುರಾಡಬೇಡಿ, ನಿಮ್ಮ ಶ್ರೇಯಸ್ಸಿಗೆ ಅಡ್ಡಿಯಾಗುವುದು. ಕುಟುಂಬ ವರ್ಗದವರ ಆರೋಗ್ಯ ಉತ್ತಮವಾಗಿರುವುದು. ಪ್ರಯಾಣದಲ್ಲಿ, ವಾಹನ ಚಾಲನೆಯಲ್ಲಿ ಅಧಿಕ ಗಮನವಿರಲಿ.
ವೃಶ್ಚಿಕ
ವ್ಯಾಪಾರ ವ್ಯವಹಾರಗಳಲ್ಲಿ ಆರೋಗ್ಯಕರ ಪೈಪೋಟಿಯನ್ನು ನಡೆಸುವ ಬಗ್ಗೆ ತೀರ್ಮಾನಿಸಿ. ಪಾಲುದಾರರೊಂದಿಗೆ ಹಣಕಾಸಿನ ವಿಷಯದಲ್ಲಿ ಬಿಗಿ ಹಿಡಿತ ಪಡೆಯುವುದು ಅಗತ್ಯವಾಗುವುದು. ಸಂಸಾರದ ಜವಾಬ್ದಾರಿ ಹೆಚ್ಚಲಿದೆ.
ಧನು
ಹಣ ಸಂಪಾದಿಸುವ ಬಗ್ಗೆ ಎಷ್ಟು ಗಮನಹರಿಸುವಿರೋ ಗಳಿಸಿದ ಹಣವನ್ನು ಸದ್ಬಳಕೆ ಮಾಡುವ ಬಗ್ಗೆಯೂ ಅಷ್ಟೇ ಗಮನಹರಿಸಿ. ಹೊಸ ಕೆಲಸಗಳ ಆರಂಭಕ್ಕೆ ಸೂಕ್ತ ಸಮಯವಲ್ಲ. ಮನದ ಗೊಂದಲ ದೂರಾಗಲಿದೆ.
ಮಕರ
ಬೇರೆಯವರ ಅಧೀನದಲ್ಲಿರದೆ, ಸ್ವಉದ್ಯೋಗ ಮಾಡುವ ಆಸೆಯು ನಿಮ್ಮನ್ನು ಕಾಡಲಿದೆ. ಆಹಾರ ನಿಯಮದಿಂದ ಆರೋಗ್ಯದಲ್ಲಿ ಸುಧಾರಣೆ ಕಾಣುವುದು. ಹಣ್ಣಿನ ವ್ಯಾಪಾರಿಗಳಿಗೆ ಉತ್ತಮ ಲಾಭವಿರುವುದು.
ಕುಂಭ
ಆಸ್ತಿಗಾಗಿ ನಿವೇಶನ ಖರೀದಿಸಲು ಇಂದು ಒಳ್ಳೆಯ ಕಾಲವಾಗಿದೆ. ನೂತನ ವಾಹನ ಖರೀದಿಸಬೇಕೆಂಬ ನಿಮ್ಮ ಕನಸು ನನಸಾಗುವುದು. ವೈಯಕ್ತಿಕ ಸಮಸ್ಯೆಗಳು ಬಗೆಹರಿಯುವುದು.
ಮೀನ
ಮಕ್ಕಳ ಶೈಕ್ಷಣಿಕ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ತೋರುವುದು ಉತ್ತಮ. ಶತ್ರುಗಳ ಉಪಟಳವನ್ನು ತಡೆಯಲು ತಂತ್ರಗಾರಿಕೆಯನ್ನು ಮಾಡಬೇಕಾಗುತ್ತದೆ. ಇನ್ನೊಬ್ಬರ ಬಗ್ಗೆ ಕೆಟ್ಟ ಮಾತುಗಳು ಬೇಡ.