ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕಾರಣವಿಲ್ಲದೆ ಮಾಡಿದ ಕೋಪವೂ ನಷ್ಟ ತರಲಿದೆ
Published 18 ಸೆಪ್ಟೆಂಬರ್ 2025, 19:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ವಯಂ ಬುದ್ಧಿವಂತಿಕೆ ಇದ್ದರೂ ಅನುಭವ ಹೊಂದಿದವರ ಸಲಹೆ ಸಹಕಾರ ಪಡೆಯುವುದರಿಂದ ಲಾಭ ಹೆಚ್ಚುತ್ತದೆ. ಯಾವ ವ್ಯಕ್ತಿಯನ್ನೂ ತಿರಸ್ಕರಿ ಸಬೇಡಿ, ಮುಂದಿನ ದಿನಗಳಲ್ಲಿ ಅವರ ಸಹಾಯವೇ ಮುಖ್ಯವಾಗಬಹುದು.
ವೃಷಭ
ಕುಟುಂಬದವರ ಜೊತೆ ಸಂಭಾಷಿಸಲು ಸಮಯ ಮಾಡಿಕೊಳ್ಳಿ. ಸಾಮಾಜಿಕ ವಲಯದ ಅಭಿವೃದ್ಧಿಗೆ ರಾಜಕೀಯ ವ್ಯಕ್ತಿಯನ್ನು ಸಂಪರ್ಕಿಸಬೇಕಾ ಗುತ್ತದೆ. ತಂದೆ ಆರೋಗ್ಯ ಸುಧಾರಿಸಲು ಆಯುರ್ವೇದ ಔಷಧಿ ನೆರವಾಗಲಿದೆ.
ಮಿಥುನ
ಐಹಿಕ ಸುಖಗಳನ್ನು ಆದಷ್ಟು ಬಿಟ್ಟುಬಿಡುವ ಮನಸ್ಥಿತಿ ಹಿರಿಯ ನಾಗರಿಕರಲ್ಲಿ ಉಂಟಾಗುತ್ತದೆ. ಸಂಧಾನ ಅಥವ ಮಧ್ಯಸ್ಥಿಕೆ ವಹಿಸುವಂತಹ ಕೆಲಸ ಮಾಡುವಿರಿ. ಅಂಥ ವೇಳೆ ವಸ್ತು ನಿಷ್ಠವಾಗಿ ಮತ್ತು ಸತ್ಯದ ಪರವಾಗಿರಿ.
ಕರ್ಕಾಟಕ
ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ ನಿಮ್ಮನ್ನು ರಕ್ಷಿಸಲಿದೆ. ವಿವಾಹದಂತಹ ಶುಭಕಾರ್ಯಗಳ ನಿರೀಕ್ಷೆ ಮಾಡಬಹುದು. ವದಂತಿಗಳಿಗೆ ಕಿವಿಗೊಡದೆ ನಿಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುವುದು ಶುಭ.
ಸಿಂಹ
ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಅಥವಾ ವಿಶೇಷ ಗೌರವಗಳು ಲಭಿಸುವುದು. ನೆರೆ ಹೊರೆಯರಿಗೆ ನೀವು ಕೊಡುವಂತಹ ಅತಿಯಾದ ಸಲುಗೆಯು ದುರುಪಯೋಗಗೊಳ್ಳಬಹುದು.
ಕನ್ಯಾ
ಪ್ರಾಪಂಚಿಕ ಅನುಭವಕ್ಕಾಗಿ ಕಾನೂನಿನ ಬಗ್ಗೆ ಅಧ್ಯಯನ ಮಾಡುವ ಮನಸ್ಸಾಗುತ್ತದೆ. ಇಂದು ನೀವು ಅನುಭವಿಸಬೇಕಾದ ಅಪಾಯವು ಭಗವಂತ ಶ್ರೀ ಮಲ್ಲಿಕಾರ್ಜುನನ ಅನುಗ್ರಹದಿಂದ ಕೂದಲೆಳೆಯಲ್ಲಿ ತಪ್ಪಿಹೋಗುತ್ತದೆ.
ತುಲಾ
ಅಧಿಕಾರಿಗಳಿಂದ ಹೊಗಳಿಕೆ ಪಡೆಯಲು ಪರಿಸ್ಥಿತಿ ಅವಲೋಕಿಸಿ ಮುಂದಿನ ಹೆಜ್ಜೆ ಇಡಿ. ಇಂದಿನ ನಿಮ್ಮ ನಡೆಯಲ್ಲಿ ಮೂಲ ಉದ್ದೇಶ ಬಿಡದೇ ಇರುವುದು ಕಷ್ಟ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ನಿರ್ಲಕ್ಷಿಸಬೇಡಿ. ‌
ವೃಶ್ಚಿಕ
ಮನೆ ಸಮಸ್ಯೆ ತನ್ನಂತಾನೇ ಬಗೆಹರಿಯುವುದು ಎಂದುಕೊಂಡರೆ ಒಂದಕ್ಕೆ ಎರಡಾಗುತ್ತದೆ. ಅದರ ಬಗ್ಗೆ ಕಾರ್ಯ ಪ್ರವೃತ್ತರಾಗಿ ಪರಿಹರಿಸಿ. ಸರ್ಕಾರಿ ಗುತ್ತಿಗೆ ಪಡೆದು ಕೊಳ್ಳಲು ನಾನಾ ಉಪಾಯಗಳು ಬೇಕಾಗುತ್ತವೆ.
ಧನು
ಹೊಸ ಉದ್ಯೋಗ ಹುಡುಕುವ ನಿಮ್ಮ ಆಲೋಚನೆ ಇಂದು ಸರಿಯಲ್ಲ. ವೃತ್ತಿಗೆ ಸಂಬಂಧ ಪಟ್ಟ ವಿಷಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಮುನ್ನ ಚರ್ಚೆ ನಡೆಸುವುದು ಉಚಿತವೆನಿಸಲಿದೆ. ಅಡಿಗೆ ಎಣ್ಣೆ ವ್ಯಾಪಾರಿಗಳಿಗೆ ಲಾಭ.
ಮಕರ
ಕ್ರೀಯಾಶೀಲ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳಿದೆ. ಜೀವನದ ಪ್ರಯಾಣದಲ್ಲಿ ವಿಘ್ನಗಳು ಬಂದರೂ ಧೈರ್ಯದಿಂದ ಮುನ್ನಡೆದರೆ ಯಶಸ್ಸು ಸಾಧಿಸುತ್ತೀರಿ. ಕಾರಣವಿಲ್ಲದೆ ಮಾಡಿದ ಕೋಪವೂ ನಷ್ಟ ತರಲಿದೆ.
ಕುಂಭ
ಅನಿರೀಕ್ಷಿತವಾಗಿ ನಡೆದ ಕೆಟ್ಟ ಘಟನೆಗೆ ಹೆಚ್ಚು ಪ್ರಾಶಸ್ತ್ಯ ಕೊಡುವ, ಭಯ ಪಡುವ ಅಗತ್ಯವಿಲ್ಲ. ವೃತ್ತಿ ತರಬೇತಿ ಪಡೆದವರಿಗೆ ವಿಶೇಷವಾಗಿ ನರ್ಸಿಂಗ್ ಟ್ರೈನಿಂಗ್‌ ಮುಗಿಸಿದವರಿಗೆ ಉದ್ಯೋಗ ದೊರಕಿದ್ದಕ್ಕೆ ಸಂತೋಷವಾಗಲಿದೆ.
ಮೀನ
ನಿಶ್ಚಿತವಾದ ಗುರಿ ತಲುಪುವ ವಿಚಾರದಲ್ಲಿ ಅಡೆತಡೆ, ವಿಘ್ನ ಎದುರಾಗು ತ್ತದೆ. ಷೇರು ವ್ಯಾಪಾರ, ವ್ಯವಹಾರದಲ್ಲಿ ಲಾಭವಾಗಲಿದೆ. ಅನಿವಾರ್ಯವಾಗಿ ಕೂಡಿಟ್ಟ ಹಣ ವಿನಿಯೋಗ ಮಾಡಬೇಕಾದ ಸ್ಥಿತಿ ಬರಲಿದೆ.
ADVERTISEMENT
ADVERTISEMENT