ದಿನ ಭವಿಷ್ಯ: ಉದ್ಯೋಗ ತ್ಯಜಿಸಿ ಹಳ್ಳಿಯ ಬದುಕಿಗೆ ಹಿಂದಿರುಗುವ ಯೋಚನೆ ಬರುವುದು
Published 3 ಮೇ 2025, 23:59 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ಯೋಗ ತ್ಯಜಿಸಿ ಹಳ್ಳಿಯ ಬದುಕಿಗೆ ಹಿಂದಿರುಗಲು ಅಥವಾ ಹುಟ್ಟಿದ ಊರಿನಲ್ಲಿ ಕೃಷಿ ಮಾಡಲು ಯೋಚನೆ ಬರುವುದು. ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದುಡುಕಬೇಡಿ. ಸ್ನೇಹಿತರಲ್ಲಿ ವಿಶ್ವಾಸ ವೃದ್ಧಿಯಾಗುವುದು.
ವೃಷಭ
ರಕ್ಷಣಾ ವ್ಯವಸ್ಥೆಯವರಿಗೆ ವೃತ್ತಿಯಲ್ಲಿ ರಾತ್ರಿ ಪಾಳಿ ತಪ್ಪಿದ ಕಾರಣದಿಂದಾಗಿ ಮನಸ್ಸಿಗೆ ಸಮಾಧಾನ ಆಗುವುದು. ಸಮಾರಂಭಗಳಿಗಾಗಿ ಹೊಸ ಬಟ್ಟೆ ತರುವಂತೆ ಮನೆಯವರಿಂದ ಹೆಚ್ಚಿನ ಒತ್ತಾಯ ಬರಲಿದೆ.
ಮಿಥುನ
ರೇಷ್ಮೆ ವ್ಯಾಪಾರಿಗಳಿಗೆ ಸಗಟು ಮಾರಾಟದಿಂದ ಅಧಿಕ ಲಾಭ ದೊರೆಯುವುದು. ದನ ಕರುಗಳ ಅಥವಾ ಮನೆಯಲ್ಲಿ ಸಾಕಿರುವ ಪ್ರಾಣಿಗಳ ಆರೋಗ್ಯ ತಪಾಸಣೆ ಮಾಡಿಸಬೇಕಾಗುವುದು. ವೃಥಾ ಅಲೆದಾಟಗಳು ತಪ್ಪಲಿವೆ.
ಕರ್ಕಾಟಕ
ಇಂದು ಯಾವುದೇ ವ್ಯಕ್ತಿಗಳಿಂದ ಪ್ರಚೋದನೆಗೆ ಒಳಗಾಗದಿರಿ. ಶರೀರದಲ್ಲಿ ಉಲ್ಲಾಸ ಹಾಗೂ ಕಾರ್ಯಪ್ರವೃತ್ತಿಯನ್ನು ಹೊಂದುತ್ತೀರಿ. ನಿಮ್ಮ ಅಭಿವೃದ್ಧಿ ಹೆಜ್ಜೆಗಳು ನಿಮ್ಮ ಸುತ್ತಮುತ್ತಲಿನ ಜನರ ಕಣ್ಣನ್ನು ಕೆಂಪಾಗಿಸುತ್ತದೆ.
ಸಿಂಹ
ಕಮಿಷನ್ ಏಜೆಂಟ್‌ಗಳಿಗೆ ಅದರಲ್ಲೂ ವಿಶೇಷವಾಗಿ ಭೂ ವ್ಯವಹಾರ ನೆಡೆಸುವವರಿಗೆ ಅಧಿಕ ಆದಾಯವಿದೆ. ಮನೆಯಲ್ಲಿ ಹಿತಕರ ವಾತಾವರಣ ಇರುತ್ತದೆ. ನವಗ್ರಹ ಪೀಡಾ ಪರಿಹಾರ ಸ್ತೋತ್ರ ಪಠಿಸಿದರೆ ಉತ್ತಮ.
ಕನ್ಯಾ
ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ನಿಮ್ಮಲ್ಲಿ ಬಂದಿದೆ. ಇದರಿಂದ ಸುಲಭವಾಗಿ ಕೆಲಸ ಪೂರೈಸುವಿರಿ. ನಿಮ್ಮ ಮುಂದಿನ ಮಾರ್ಗವನ್ನು ತಂದೆಯವರಲ್ಲಿ ಚರ್ಚಿಸಿ, ತಂದೆಯ ಅಭಿಪ್ರಾಯಗಳಿಗೆ ಬೆಲೆ ಕೊಡಿ.
ತುಲಾ
ನಾನಾ ವಿಧದ ಆದಾಯ ಉಂಟಾಗುವುದರಿಂದ ಆರ್ಥಿಕ ತಳಪಾಯ ಭದ್ರವಾಗುತ್ತದೆ. ವಿದ್ಯಾರ್ಥಿಗಳ ಮನಸ್ಥಿತಿ ವಿದ್ಯಾಭ್ಯಾಸದಿಂದ ದೂರಾಗುವ ಸಾಧ್ಯತೆಗಳಿದೆ. ಆಸೆ-ಆಕಾಂಕ್ಷೆಗಳು ಈ ದಿನ ದೇವತಾನುಗ್ರದಿಂದ ಈಡೇರಲಿದೆ.
ವೃಶ್ಚಿಕ
ಅಕ್ಕ-ತಂಗಿಗಾಗಿ ಹಣ, ಸಮಯವನ್ನು ಖರ್ಚು ಮಾಡಬೇಕಾದ ಸಂದರ್ಭ ಬರುವುದು. ಮಕ್ಕಳಿಗೆ ಜೀವನದ ಪಾಠ ಹೇಳುವಿರಿ. ಅನೇಕ ಅವಕಾಶಗಳು ನಿಮಗೆ ಎದುರಾಗುವುದರಿಂದ ಗೊಂದಲಕ್ಕೆ ಈಡಾಗುವಿರಿ.
ಧನು
ಆರೋಗ್ಯಕ್ಕಾಗಿ ಆಸ್ಪತ್ರೆಯ ಅಲೆದಾಟ ಅನಿವಾರ್ಯವಾಗುವುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಸಾಮರ್ಥ್ಯ, ಜನಬಲ ಹೆಚ್ಚಲಿದೆ. ಆಂಜನೇಯನ ಸೇವೆಯಿಂದ ಗೊಂದಲ ನಿವಾರಣೆಯಾಗುತ್ತದೆ.
ಮಕರ
ವೃತ್ತಿಯಲ್ಲಿ ಅನುಭವಿಗಳಿಂದ ಬೈಗುಳ ಕೇಳಬೇಕಾಗುವುದು. ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ಅಧ್ಯಯನ ಅಗತ್ಯ. ಮಹಿಳೆಯರು ಋಣಾತ್ಮಕ ಚಿಂತನೆ ಮಾಡುವುದರಿಂದಾಗಿ ಆರೋಗ್ಯ ಹಾಳಾಗುವ ಲಕ್ಷಣವಿದೆ.
ಕುಂಭ
ಇನ್ನೊಬ್ಬರಿಗೆ ಮಾದರಿಯಾಗುವಂತೆ ಕೆಲಸಗಳಲ್ಲಿ ದಕ್ಷತೆಯನ್ನು ರೂಢಿಸಿಕೊಳ್ಳಿ. ಕೃಷಿ ಮತ್ತು ಹೈನುಗಾರಿಕೆಯಲ್ಲಿ ಹೊಸ ಪ್ರಯತ್ನ ನೆಡೆಸಿದರೆ ಉತ್ತಮ ಫಲ ಸಿಗುವುದು. ಮಗಳಿಂದ ಶುಭ ಸುದ್ದಿಯೊಂದನ್ನು ತಿಳಿಯುವಿರಿ.
ಮೀನ
ಮಾನಸಿಕ ಶಕ್ತಿ ಬಲಯುತವಾಗಿ ಇಂದು ನಿಮ್ಮ ಯೋಚನೆಗಳನ್ನು ಶೀಘ್ರವೇ ಕಾರ್ಯರೂಪಕ್ಕೆ ಬರಲಿವೆ. ಮಗನ ವಿವಾಹ ಸಿದ್ಧತೆಗಳು ಭರದಿಂದ ಸಾಗಲಿದೆ. ಭೂಮಿ ಖರೀದಿ ಮುಂದಕ್ಕೆ ಹಾಕುವ ಪರಿಸ್ಥಿತಿ ಬರಬಹುದು.