ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ | ಡಿ.7 – ಈ ರಾಶಿಯವರ ವೃತ್ತಿಯಲ್ಲಿ ಸಂಚಾರದಿಂದ ಅಧಿಕ ಲಾಭ
Published 6 ಡಿಸೆಂಬರ್ 2023, 22:56 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಧ್ಯಾನ ಮಾಡುವುದರಿಂದ ಮನಸ್ಸು ನಕಾರಾತ್ಮಕ ಭಾವನೆಯಿಂದ ಹೊರ ಬರಲಿದೆ. ವೃತ್ತಿ ಪ್ರಾಮಾಣಿಕತೆಗೆ ನೀರಿಕ್ಷೆ ಮೀರಿದ ಗೌರವ ಲಭ್ಯವಾಗುವುದು. ಸಾಂಸಾರಿಕ ಜೀವನದಲ್ಲಿ ನೆಮ್ಮದಿ ಇರುವುದು.
ವೃಷಭ
ಕುಟುಂಬಕ್ಕೆ ಸಂಬಂಧಿಸಿದಂತೆ ಶುಭ ವಾರ್ತಾ ಶ್ರವಣದ ಭಾಗ್ಯ ಒದಗಿಬರುವುದು. ಮನೆ ನಿರ್ಮಾಣ ಕಾರ್ಯವನ್ನು ಅಡೆತಡೆಯಿಲ್ಲದೆ ಸಂಪೂರ್ಣಗೊಳಿಸುವಿರಿ. ನಿಮ್ಮ ಗುರಿ ತಲುಪಲು ಬಹಳ ಶ್ರಮ ಪಡಬೇಕಾಗುತ್ತದೆ.
ಮಿಥುನ
ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚಿನ ಪ್ರಗತಿಯು ಹಿರಿಯರ ಅಥವಾ ಗುರುಗಳ ಸಲಹೆಗಳ ಸ್ವೀಕಾರದಿಂದ ಕಂಡುಬರಲಿದೆ. ಕ್ರೀಡಾಪಟುಗಳಿಗೆ ಸಂತಸದ ದಿನವಾಗಿದೆ. ಭೂ ವ್ಯವಹಾರಗಳು ನಿಧಾನವಾಗಿ ಕೈಗೂಡುವುದು.
ಕರ್ಕಾಟಕ
ಧವಸ ಧಾನ್ಯಗಳ ವ್ಯಾಪಾರಸ್ಥರು ಹೆಚ್ಚಿನ ಎಚ್ಚರಿಕೆಯಿಂದಿದ್ದರೆ ಬಂಡವಾಳದ ಮೂಲಧನವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಂದು ರಾಜಕೀಯ ಚಟುವಟಿಕೆಗಳಲ್ಲಿ ಬಿರುಸಿನ ಓಡಾಟವಿರುವುದು.
ಸಿಂಹ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ವಸ್ತ್ರ ವಿನ್ಯಾಸಗಾರರಿಗೆ ವಿಶೇಷವಾದ ಪರಿಣಿತಿಯು ಅಗತ್ಯವೆನಿಸಲಿದೆ. ಮಕ್ಕಳಿಗಾಗಿ ವಿಶೇಷ ವಸ್ತು ಕೊಳ್ಳುವಿರಿ.
ಕನ್ಯಾ
ಬಹಳ ದಿನಗಳಿಂದ ಸ್ಥಗಿತಗೊಂಡ ಕಾರ್ಯಕ್ಕೆ ಪುನಃ ಚಾಲನೆ ದೊರೆತು ಸಂತಸ ಹೊಂದುವಿರಿ. ಮಹಿಳೆಯರಿಗೆ ಉದ್ಯೋಗದಲ್ಲಿ ಅದೃಷ್ಟ ಹುಡುಕಿಕೊಂಡು ಬರಲಿದೆ. ವ್ಯವಹಾರದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ.
ತುಲಾ
ವೃತ್ತಿರಂಗದಲ್ಲಿ ರಚನಾತ್ಮಕ ಕಾರ್ಯಗಳ ನಿರ್ವಹಣೆಯಿಂದ ಮುಂದಿನ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗಲಿದೆ. ಉದ್ಯೋಗಕ್ಕಾಗಿ ಹೊರ ದೇಶದ ಪ್ರಯಾಣದ ಅವಕಾಶಗಳು ಸಹ ಸಿಗಬಹುದು.
ವೃಶ್ಚಿಕ
ರಾಜಕೀಯ ವಲಯದಲ್ಲಿ ನಿರೀಕ್ಷಿತ ಕಾರ್ಯಗಳು ಸರಾಗವಾಗಿ ನೆರವೇರುವುದು. ಸಾಹಿತ್ಯ ಕ್ಷೇತ್ರದಲ್ಲಿ ಭಾಗಿಯಾಗಿ ಸಂತೋಷವಾಗುವುದು. ಹೆಚ್ಚಿನ ಪರಿಶ್ರಮದಿಂದ ಎಲ್ಲಾ ಕೊರತೆಯನ್ನು ಹೋಗಲಾಡಿಸಿಕೊಳ್ಳಬಹುದು.
ಧನು
ಉದ್ಯೋಗಾಕಾಂಕ್ಷಿಗಳಿಗೆ ಪ್ರಭಾವಿ ವ್ಯಕ್ತಿಗಳ ಆಶ್ವಾಸನೆಯಿಂದ ಸಮಾಧಾನ ಸಿಗಲಿದೆ. ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಮನೆಯವರಿಂದ ಒತ್ತಡ. ವೃತ್ತಿಯಲ್ಲಿ ಸಂಚಾರದಿಂದ ಅಧಿಕ ಲಾಭ.
ಮಕರ
ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಿಂದ ಹೆಚ್ಚಿನ ಆದಾಯದ ಜತೆ ಸಾಗಾಣಿಕೆಯಲ್ಲಿ ಸಣ್ಣ ಸಮಸ್ಯೆಗಳೂ ಕಾಡಬಹುದು. ಉತ್ತಮ ಅವಕಾಶಗಳು ನಿಮ್ಮೆಡೆಗೆ ಬರಲಿದೆ. ಅವುಗಳನ್ನು ಉಪಯೋಗಿಸಿಕೊಳ್ಳಿ.
ಕುಂಭ
ಸಂಘ ಸಂಸ್ಥೆಗಳ ವಿಚಾರವನ್ನು ಚರ್ಚಿಸಿ ನಂತರದಲ್ಲಿ ಕೆಲಸಗಳನ್ನು ಕಾರ್ಯರೂಪಕ್ಕೆ ತರುವುದು ಉತ್ತಮ. ಸಾಲ ತೆಗೆದುಕೊಂಡ ಹಣವನ್ನು ಹಿಂದಿರುಗಿಸುವ ಬಗ್ಗೆ ಯೋಚಿಸಿ. ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಕೆಲಸ ಇರಲಿದೆ.
ಮೀನ
ಕಾಫಿ, ಕಾಳುಮೆಣಸು ಹಾಗೂ ಏಲಕ್ಕಿ ಬೆಳೆಗಾರರು ಉತ್ತಮ ಫಸಲನ್ನು ಎದುರು ನೋಡಬಹುದು. ವೈಯಕ್ತಿಕ ವಿಚಾರಗಳಲ್ಲಿ ಸೃಷ್ಟಿಯಾದ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ