ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು
Published 18 ಸೆಪ್ಟೆಂಬರ್ 2024, 23:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ದೈವಬಲ ಒದಗುವುದರಿಂದ ಪ್ರಯತ್ನ ಕಾರ್ಯಗಳೆಲ್ಲವೂ ಶುಭ ಫಲಗಳನ್ನೇ ನೀಡಲಿದೆ. ತಪ್ಪುಗಳು ಪುನರಾವರ್ತನೆಯಾಗದಂತೆ ಗಮನಿಸಿ. ಸದಾ ತಾಳ್ಮೆಯಿಂದ ವ್ಯವಹರಿಸಿ.
ವೃಷಭ
ಭಾವನಾ ಪ್ರಪಂಚ ಈ ದಿನ ಸೆಳೆಯುತ್ತದೆ. ಕೆಲಸ ಆರಂಭಿಸುವ ಮುನ್ನ ಆಮೂಲಾಗ್ರ ಚಿಂತನೆ ಅಗತ್ಯ ಎಂಬುದನ್ನು ತಿಳಿಯಿರಿ. ವ್ಯವಹರಿಸುವಾಗ ಬುದ್ಧಿವಂತಿಕೆ ಅಗತ್ಯ.
ಮಿಥುನ
ಮನಸ್ಸು ಬೇಡದ ದಿಕ್ಕಿನಲ್ಲಿ ಹರಿಯುವುದನ್ನು ತಡೆಗಟ್ಟುವ ಬಗ್ಗೆ ಅಭ್ಯಾಸ ನಡೆಸಿ. ಮಕ್ಕಳ ವರ್ತನೆ ಸಂತೋಷ ತಂದುಕೊಡಲಿದೆ. ವೈವಾಹಿಕ ಮಾತುಕತೆಗಳು ಪ್ರಗತಿ ಪಥದತ್ತ ಸಾಗುವುದು.
ಕರ್ಕಾಟಕ
ಮಕ್ಕಳು ಮಾಡುವ ಸಣ್ಣ ಪುಟ್ಟ ತಪ್ಪುಗಳನ್ನು ಕ್ಷಮಿಸಿ ತಿಳಿಹೇಳಿ. ಶಿಕ್ಷಿಸಬೇಡಿ. ನೀವು ಇತರರೆಲ್ಲರಿಗಿಂತ ಭಿನ್ನ ಹಾಗೂ ಧನಾತ್ಮಕ ನಿರ್ಧಾರಗಳನ್ನು ತಗೆದುಕೊಳ್ಳುವಿರಿ.
ಸಿಂಹ
ವಿವಾದ ಗೊಡವೆಗಳಿಂದ ದೂರ ಉಳಿಯುವಂಥ ನಿರ್ಧಾರ ಕಾಪಾಡಿಕೊಳ್ಳುವಲ್ಲಿ ಅನುಕೂಲವಾಗುತ್ತದೆ. ಮನೆ ಕಟ್ಟುವ ಸಲುವಾಗಿ ಹಣಕಾಸಿನ ವ್ಯವಸ್ಥೆ ಮಾಡಲು ತಂದೆಯವರಿಗೆ ಸಹಕರಿಸುವಿರಿ.
ಕನ್ಯಾ
ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪಾಠ ಕಲಿಯುವಂತಾಗಲಿದೆ. ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಅಭಿವೃದ್ಧಿ ತೋರಿ ಬರುವುದು.
ತುಲಾ
ಕೆಲಸ ಕಾರ್ಯಗಳಿಗೆ ಅಡ್ಡಿ ಆತಂಕಗಳು ಇರುವುದಿಲ್ಲ. ಆಲಸ್ಯತನ ಕುಟುಂಬದ ಅಭಿವೃದ್ಧಿಯನ್ನು ಹಾಳು ಮಾಡುತ್ತದೆ. ರಾಜಕೀಯದಲ್ಲಿನ ಬದಲಾವಣೆಯ ಲಾಭ ಪಡೆಯುವಿರಿ.
ವೃಶ್ಚಿಕ
ಋಣಬಾಧೆ, ಖರ್ಚು-ವೆಚ್ಚ, ಕುಟುಂಬ ಸ್ಥಾನದಲ್ಲಿ ಮನಸ್ತಾಪಕ್ಕೆ ಕಾರಣವಾಗದಂತೆ ಹೆಚ್ಚಿನ ಜಾಗ್ರತೆ ವಹಿಸಿರಿ. ಕೆಲಸಗಳ ಬಗ್ಗೆ ಅನುಭವಸ್ಥರೊಂದಿಗೆ ಮಾತುಕತೆ ನಡೆಸುವುದರಿಂದ ತಿಳಿವಳಿಕೆ ವೃದ್ಧಿ.
ಧನು
ಕಾನೂನಾತ್ಮಕ ಹೋರಾಟ ಅಥವಾ ಕೋರ್ಟ್‌ ವ್ಯವಹಾರಗಳ ಓಡಾಟಕ್ಕೆ ಮುಕ್ತಾಯ ಸಿಗಲಿದೆ. ಷೇರು ವ್ಯವಹಾರಗಳಿಂದ ನಿರೀಕ್ಷಿಸಿದ ಲಾಭ ಬರುವುದು. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನಾಗಲಿದೆ.
ಮಕರ
ಅಕ್ಕಪಕ್ಕದ ಮನೆಯವರ ಅಥವಾ ಸ್ನೇಹಿತರ ಹೊಗಳಿಕೆಯ ಮಾತು ಗಳಿಗೆ ಮರುಳಾಗಬೇಡಿ. ಕೃಷಿ ಕಾರ್ಮಿಕರಿಗೆ ಕೆಲಸದ ಒತ್ತಡ ಉಂಟಾಗುವುದು. ಪ್ರಯತ್ನಗಳು ಯಾವುದೇ ಕಾರಣಕ್ಕೂ ನಿಷ್ಫಲವೆ ನಿಸುವುದಿಲ್ಲ.
ಕುಂಭ
ಕಚೇರಿಯಲ್ಲಿ ಇದ್ದ ಭಿನ್ನಾಭಿಪ್ರಾಯಗಳು ಬಗೆಹರಿಯುವುದು.ನೆಮ್ಮದಿ ಸಿಗಲಿದೆ. ಮನಸ್ಥಿತಿಯು ಯಾರೊಂದಿಗೂ ಹೆಚ್ಚಾಗಿ ಬೆರೆಯದೆ, ಕೆಲಸ ಕಾರ್ಯಗಳತ್ತಲೇ ಇರುವುದು.
ಮೀನ
ಇತರರ ಮಾತನ್ನು ತಪ್ಪಾಗಿ ಅರ್ಥೈಸಿ ಸಂಬಂಧಿಕರಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಬೇಡಿ. ಹಣಕಾಸು ಪರಿಸ್ಥಿತಿ ಸಂಪೂರ್ಣ ಹಿಡಿತದಲ್ಲಿಡಲು ಪ್ರಯತ್ನಿಸಿ. ಮಕ್ಕಳ ದೈನಂದಿನ ಚಟುವಟಿಕೆ ಕಡೆ ಗಮನ ನೀಡಿ.
ADVERTISEMENT
ADVERTISEMENT