ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
Today's Horoscope | ದಿನ ಭವಿಷ್ಯ – 08 ಜೂನ್‌ 2023
Published 7 ಜೂನ್ 2023, 22:35 IST
ಪ್ರಜಾವಾಣಿ ವಿಶೇಷ
author
ಮೇಷ
ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಾಧಿಸಲಿದ್ದೀರಿ. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿದ್ದರೆ ಎಲ್ಲವನ್ನೂ ನಿಭಾಯಿಸಬಹುದು.
ವೃಷಭ
ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಾಧಿಸಲಿದ್ದೀರಿ. ಅವಿವಾಹಿತರು ಅಸ್ಪಷ್ಟ ನಿಲುವನ್ನು ಹೋಗಲಾಡಿಸಿದಲ್ಲಿ ಕಂಕಣಬಲದ ಸಾಧ್ಯತೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದಿದ್ದರೆ ಎಲ್ಲವನ್ನೂ ನಿಭಾಯಿಸಬಹುದು.
ಮಿಥುನ
ವ್ಯವಹಾರಗಳ ವಿಷಯಕ್ಕೆ ಸಂಬಂಧಿಸಿದಂತೆ ಪಾಲುದಾರರೊಂದಿಗೆ ಜರೂರಿನಲ್ಲಿ ಚರ್ಚೆ ನಡೆಸಬೇಕಾದ ಪರಿಸ್ಥಿತಿ ಎದುರಾಗಲಿದೆ. ಖಾಸಗೀ ಗುಮಾಸ್ತ ಕೆಲಸದಲ್ಲಿದ್ದವರಿಗೆ ಪೂರ್ಣ ವಿರಾಮ ಸಿಗುವಂತೆ ಆಗಬಹುದು.
ಕರ್ಕಾಟಕ
ವೃತ್ತಿರಂಗದ ಕೆಲವು ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡರೆ ಉತ್ತಮ. ಕುಟುಂಬ ವರ್ಗದಲ್ಲಿ ಸಲಹೆಗಳಿಗೆ ಆದ್ಯತೆ ದೊರೆಯಲಿದೆ. ಮನೆಯಲ್ಲಿ ಮದುವೆ ಸಮಾರಂಭಗಳು ಜರುಗುವ ಸಾಧ್ಯತೆ ಇದೆ.
ಸಿಂಹ
ಗಣ್ಯ ವ್ಯಕ್ತಿಗಳ ಸಹಾಯದಿಂದ ಬಂದಂಥ ಸಮಸ್ಯೆಗಳನ್ನು ಉತ್ತಮವಾಗಿ ಜಯಿಸುವಿರಿ. ವಂಶಪಾಂಪರಿಕವಾಗಿ ಬಂದ ವ್ಯಾಪಾರ ವ್ಯವಹಾರ ಅಥವಾ ವೃತ್ತಿಯಲ್ಲಿ ಈ ದಿನ ಮತ್ತಷ್ಟು ಏಳಿಗೆ ಕಾಣಲಿದೆ.
ಕನ್ಯಾ
ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭವಿರುವ ಅವಕಾಶಗಳಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ. ಪೋಲಿಸ್ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರದ ಸಂಚಾರ ಕಂಡುಬರಲಿದೆ.
ತುಲಾ
ರಿಯಲ್ ಎಸ್ಟೇಟುದಾರರಿಗೆ ಉತ್ತಮ ಧನಲಾಭವಿರುವ ಅವಕಾಶಗಳಿಂದ ವ್ಯವಹಾರಗಳು ವೃದ್ಧಿಗೊಳ್ಳಲಿದೆ. ಪೋಲಿಸ್ ವೃತ್ತಿಯಲ್ಲಿರುವವರಿಗೆ ಮಹತ್ವದ ಕಾರ್ಯಾಚರಣೆಗಾಗಿ ದೂರದ ಸಂಚಾರ ಕಂಡುಬರಲಿದೆ.
ವೃಶ್ಚಿಕ
ಪ್ರಾರಂಭಿಸಿದ ಎಲ್ಲಾ ಕೆಲಸಗಳಲ್ಲಿಯೂ ಯಶಸ್ಸು, ಅಭಿವೃದ್ಧಿಗಳಿಂದ ಮನಸ್ಸಿಗೆ ಸಂತೋಷ ಸಿಗಲಿದೆ. ಧನಾದಾಯಕ್ಕೆ ಅಡ್ಡಿ ಆತಂಕಗಳು ಇರುವುದಿಲ್ಲ. ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಕೆಲಸವಿರಲಿದೆ.
ಧನು
ಔದ್ಯೋಗಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಬಡ್ತಿ ದೊರೆಯುವ ಸಂಭವವಿದೆ. ಧಾರ್ಮಿಕವಾಗಿ ಹೆಚ್ಚಿನ ಏಕಾಗ್ರತೆ ಹಾಗೂ ಉತ್ತಮ ರೀತಿಯಲ್ಲಿನ ಧ್ಯಾನಗಳಿಂದ ಮಾನಸಿಕವಾಗಿ ಸದೃಢರಾಗುವಿರಿ.
ಮಕರ
ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನ, ಗೌರವ ತೋರಿಬರುವುದು. ಆಸ್ತಿ ಕೊಳ್ಳುವುದರಲ್ಲಾಗಲೀ, ಮನೆ ಕಟ್ಟುವ ವಿಚಾರದಲ್ಲಾಗಲೀ ಅದೃಷ್ಟವು ನಿಮ್ಮ ಪಾಲಿಗೇ ಇರುತ್ತದೆ. ಒಪ್ಪಂದ ಬಹಳ ಸುಲಭವಾಗುವುದು.
ಕುಂಭ
ಕೆಲಸದ ಒತ್ತಡದಿಂದ ದೇಹಾಯಾಸ ಎದುರಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನೀವು ಮಾಡುವ ಕೆಲಸ ಕಾರ್ಯಗಳಿಂದ ಗೌರವಕ್ಕೆ ಚ್ಯುತಿ ಬಾರದಂತೆ ಕಾಪಾಡಿಕೊಳ್ಳಿ.
ಮೀನ
ಆಭರಣ ಖರೀದಿ ಅಥವಾ ಆಸ್ತಿ ಖರೀದಿ ಮಾಡುವ ವಿಚಾರದ ಬಗ್ಗೆ ಹೆಂಡತಿ ಮಕ್ಕಳೊಂದಿಗೆ ಚರ್ಚೆ ನಡೆಯಲಿದೆ. ಸಂಸಾರ ನಿರ್ವಹಣೆ ಮಾಡುವುದು ಸುಲಭವಲ್ಲ ಎಂದು ಅನಿಸಲಿದೆ. ಉಪಹಾರ ಗೃಹಗಳಿಂದ ಲಾಭ.
ADVERTISEMENT
ADVERTISEMENT