ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಕೃಷಿ ಕಾರ್ಯ ಚುರುಕುಗೊಂಡು ರೈತಾಪಿ ವರ್ಗದವರಲ್ಲಿ ಸಂತಸ
Published 16 ಆಗಸ್ಟ್ 2024, 23:55 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಾಹನಗಳ ಬಿಡಿ ಭಾಗಗಳ ಮಾರಾಟಗಾರರಿಗೆ ಮತ್ತು ಕಥೆ, ಕವನದ ಬರಹಗಾರರಿಗೆ ಅವಕಾಶಗಳ ಸುರಿಮಳೆ ಎದುರಾಗುವುದು. ಗುತ್ತಿಗೆ ಕೆಲಸದ ವಿಫುಲ ಅವಕಾಶಗಳು ಒದಗಿ ಬರುವ ಸೂಚನೆ ಕಾಣುವಿರಿ.
ವೃಷಭ
ಕೃಷಿ ಕಾರ್ಯ ಚುರುಕುಗೊಂಡು ರೈತಾಪಿ ವರ್ಗದವರಲ್ಲಿ ಸಂತಸ. ಕೆಲಸ ಮಾಡುವ ಮೊದಲು ಅದರ ಬಗ್ಗೆ ಸಾಕಷ್ಟು ಯೋಚಿಸಿ ನಂತರ ತೀರ್ಮಾನಿಸಿ. ಮನೆಯಲ್ಲಿ ಮಂಗಳ ಕಾರ್ಯದ ತಯಾರಿ ನಡೆಯುವುದು.
ಮಿಥುನ
ಆರನೆಯ ಇಂದ್ರಿಯದ ಸೂಚನೆಯ ಸಹಾಯ ಉಪಯುಕ್ತವಾಗಲಿದೆ. ನಿರ್ದಿಷ್ಟ ಕೆಲಸಗಳಿಗೆ ಮಾತ್ರ ಗಮನ ಕೊಡುವುದು ಒಳ್ಳೆಯದು. ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿಯೇ ಇರುತ್ತದೆ.
ಕರ್ಕಾಟಕ
ದೇವತಾನುಗ್ರಹದಿಂದ ಆರ್ಥಿಕ ಖರ್ಚು-ವೆಚ್ಚಗಳ ಸಮತೋಲನ, ಕುಟುಂಬದಲ್ಲೂ ತೃಪ್ತಿ ಇರುವುದು. ಅನಿರೀಕ್ಷಿತ ಪ್ರಯಾಣವು ಬದುಕಿನ ಹೊಸ ದಾರಿಗೆ ಕಾರಣವಾಗಲಿದೆ. ಉದ್ಯಮಗಳಲ್ಲಿ ಸ್ವಂತ ಶ್ರಮ ಅಗತ್ಯವಾಗುವುದು.
ಸಿಂಹ
ಪತಿ ಪತ್ನಿಯರ ಮುಸುಕಿನ ಗುದ್ದಾಟವು ಮೂರನೆ ವ್ಯಕ್ತಿಯ ಸಹಾಯ ದಿಂದಾಗಿ ನಿವಾರಣೆಯಾಗುತ್ತದೆ. ಗ್ರಹಗಳ ಚಲನೆ ಸುಖಮಯವಾಗಿ ಜೀವನ ನಡೆಸಲು ಅನುಕೂಲವಾಗಿದೆ. ಪ್ರತಿಷ್ಠಿತ ಅಧಿಕಾರಕ್ಕಾಗಿ ಹೋರಾಟ ನಡೆಸುವಿರಿ.
ಕನ್ಯಾ
ನಡವಳಿಕೆಯು ಮನೆಯವರಲ್ಲಿ ಸಂತಸವನ್ನು ಮೂಡಿಸುತ್ತದೆ. ಟ್ರಾವೆಲ್ ಏಜೆನ್ಸಿಯವರಿಗೆ ಆರ್ಥಿಕ ಮುನ್ನಡೆ ಇದ್ದು, ಹೆಚ್ಚಿನ ಅವಕಾಶಗಳನ್ನು ಕಾಣುವಿರಿ. ನಿಮ್ಮ ಮುಂದಿನ ನಡೆಯ ಬಗ್ಗೆ ಗಮನಹರಿಸಿ.
ತುಲಾ
ಪಿತ್ತಕೋಶಕ್ಕೆ ಸಂಬಂಧಿಸಿದಂತೆ ಅನಾರೋಗ್ಯಗಳು ಎದುರಾಗಬಹುದು. ಹೊಸ ಉದ್ಯೋಗ ದೊರೆತು ಮನೆಯವರಿಗೆ ಸಮಾಧಾನವಾಗುವುದು. ಖಾಸಗಿ ಸಂಸ್ಥೆಗಳ ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿ.
ವೃಶ್ಚಿಕ
ಮಕ್ಕಳ ಮದುವೆಯಂಥ ವಿಚಾರವನ್ನು ತಿಳಿ ಮನಸ್ಸಿನಿಂದ ಆಲೋಚಿಸಿ, ಸಮಸ್ಯೆಗಳಿಗೆ ಉತ್ತರ ಸಿಗುವುದು. ಮನೆಯ ಪಿತ್ರಾರ್ಜಿತ ಆಸ್ತಿಯ ವ್ಯವಹಾರಗಳು ಒಂದು ಹಂತ ತಲುಪಿದ್ದಕ್ಕೆ ಸಮಾಧಾನವಾಗುವುದು.
ಧನು
ಮಗನ ನೂತನ ಕೆಲಸದ ವಿಚಾರವಾಗಿ ಆಪ್ತರೊಬ್ಬರಲ್ಲಿ ಸಲಹೆ ಕೇಳಿಕೊಳ್ಳುವಿರಿ. ಶುಭ ಸಮಾರಂಭದ ಸಡಗರದಲ್ಲಿ ವಸ್ತ್ರಾಭರಣ ಖರೀದಿಗೆ ಹೆಚ್ಚಿನ ಹಣ ವಿನಿಯೋಗ ಮಾಡುವಿರಿ. ಕಪ್ಪು ಬಣ್ಣ ಶುಭ ತರುವುದು.
ಮಕರ
ಚಾಣಾಕ್ಷತನದ ನಿರ್ಧಾರಗಳು ಊರಿನ ತೂಕದ ವ್ಯಕ್ತಿಯನ್ನಾಗಿ ಮಾಡಲಿದೆ. ಪರಿಸರದ ಸನ್ನಿವೇಶವೂ ಇದಕ್ಕೆ ಪೂರಕವಾಗಿರುವುದು. ನೆಮ್ಮದಿಯ ವಿಷಯವೇನೆಂದರೆ ಧನಾಗಮದಲ್ಲಿ ಚಿಂತೆ ಇರದು.
ಕುಂಭ
ಕಾರ್ಮಿಕರ ಬೇಜವಾಬ್ದಾರಿತನದಿಂದಾಗಿ ನಿಮ್ಮ ಲಾಭಕ್ಕೆ ತೊಂದರೆ ಉಂಟಾಗಬಹುದು. ಕಾರ್ಯವನ್ನು ಜನರ ಎದುರು ಸಮರ್ಥಿಸಿಕೊಳ್ಳಲು ಸಾಕಷ್ಟು ಕಾರಣ ಸಿಗಲಿವೆ. ಆಸ್ತಿ ವಿಷಯ ನಿರಾತಂಕವಾಗಿ ಬಗೆಹರಿಯುವುದು.
ಮೀನ
ಆತಂಕ ತುಂಬಿದ ಕೆಲಸಕಾರ್ಯದಲ್ಲಿರುವವರ ಮನೆಯಲ್ಲಿ ನೆಮ್ಮದಿ ತುಂಬುವುದು. ಭೋಜನದ ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವಿರಿ. ಸಿನೆಮಾ ವ್ಯವಹಾರಗಳಿಂದ ಭರ್ಜರಿ ಲಾಭ ಪಡೆಯುವಿರಿ.
ADVERTISEMENT
ADVERTISEMENT