ದಿನ ಭವಿಷ್ಯ: ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶ ಸಿಗಲಿದೆ
Published 9 ಜುಲೈ 2025, 23:34 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಬದುಕಿನ ಮೇಲೆ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ದುಡಿದು ಯಶಸ್ಸನ್ನು ಹೊಂದುವಿರಿ. ಜೀವನದ ಮುಂದಿನ ದಿನಗಳಿಗೆ ದೀರ್ಘಕಾಲೀನ ಯೋಜನೆಗಳನ್ನು ಮಾಡುವಿರಿ. ವಾಹನ ಚಾಲಕರು ಎಚ್ಚರವಿರಲಿ.
ವೃಷಭ
ಸರ್ಕಾರಿ ನೌಕರರಿಗೆ ಕೆಲಸದ ವಿಚಾರದಲ್ಲಿ ನಾನಾ ರೀತಿಯಲ್ಲಿ ಅಡ್ಡಿ-ಆತಂಕ ಕಾಡಬಹುದು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅನೇಕ ಅವಕಾಶಗಳು ಒದಗಿ ಬರುತ್ತವೆ. ಶನೈಶ್ಚರನ ಆರಾಧನೆ ಮಾಡಿ.
ಮಿಥುನ
ನಿವೇಶನ ಖರೀದಿ ಹಾಗೂ ಕಟ್ಟಡ ನಿರ್ಮಾಣದಂಥ ಕೆಲಸಗಳಿಗೆ ಪೂರಕ ವಾತಾವರಣ ದೊರೆಯಲಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಅತ್ಯಗತ್ಯ. ಕುಟುಂಬದ ಅಭಿವೃದ್ಧಿಯಲ್ಲಿ ಅವಿರತ ಪ್ರಯತ್ನ ಫಲಕಾರಿ.
ಕರ್ಕಾಟಕ
ಅತ್ತೆ-ಸೊಸೆ, ತಾಯಿ-ಮಗಳು ಸಣ್ಣ ಪುಟ್ಟ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳದೆ ಸಾಮರಸ್ಯದ ಜೀವನ ನಡೆಸಿ. ಮಹಿಳೆಯರಿಗೆ ಮನ್ನಣೆ ಹೆಚ್ಚಲಿದ್ದು, ರಾಜಕೀಯವಾಗಿ ಲಾಭ ಪಡೆದುಕೊಳ್ಳುವಿರಿ.
ಸಿಂಹ
ಯಾವ ವಿಷಯದಲ್ಲಿ ಹಿಂದುಳಿದಿರುವಿರಿ ಎಂದು ಕಂಡುಕೊಂಡು ತಜ್ಞರಿಂದ ಅದಕ್ಕೆ ಪರಿಹಾರ ಕಂಡುಕೊಳ್ಳಿರಿ. ತಪ್ಪು ಮಾಡುವುದು ಮಕ್ಕಳ ಸ್ವಾಭಾವಿಕ ಗುಣವೆಂಬುವುದು ಅರಿತು ಅವರನ್ನು ಕ್ಷಮಿಸಿ ತಿದ್ದಿ.
ಕನ್ಯಾ
ಸಮಾಜದಲ್ಲಿ ಬೆರೆಯುವುದರಿಂದ ಅಥವಾ ಅಕ್ಕ-ಪಕ್ಕದವರಲ್ಲಿ ಮಾತನಾಡುವುದರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನುಕೂಲವಾಗುವುದು. ಪತ್ರಿಕೋದ್ಯಮದವರಿಗೆ ವೃತ್ತಿಯಲ್ಲಿ ನಾಯಕತ್ವ ಹೊಂದುವ ಅವಕಾಶ ಸಿಗಲಿದೆ.
ತುಲಾ
ಕುಟುಂಬದೊಡನೆ ನಡೆದ ವೈಮನಸ್ಯನ್ನು ಕ್ಷಮಾಯಾಚಿಸಿ, ಬಗೆಹರಿಸಿಕೊಳ್ಳಿ. ಸ್ನೇಹಿತರೊಂದಿಗೆ ಮರೆಯಲಾಗದ ಕ್ಷಣಗಳನ್ನು ಕಳೆಯುವಿರಿ. ವಿದ್ಯಾರ್ಥಿಗಳಿಗೆ ಪ್ರಯತ್ನ ಅತ್ಯಗತ್ಯವಾಗುವುದು.
ವೃಶ್ಚಿಕ
ಇಚ್ಚಾಶಕ್ತಿಯೊಂದಿಗೆ ಪ್ರಯತ್ನವೂ ಉತ್ತಮವಾಗಿರುವುದರಿಂದ ನೀವಂದುಕೊಂಡ ಕಾರ್ಯ ಅದ್ಭುತವಾಗಿ ನಡೆಯಲಿದೆ. ಉತ್ತಮ ಅವಕಾಶ ಲಭಿಸುವುದು.
ಧನು
ಸ್ವತಂತ್ರ ಆಲೋಚನೆಯಿಂದ ಮಾಡಿದ ಕೆಲಸಗಳೇ ಗುಣಮಟ್ಟದ್ದಾಗಿರುವುದರಿಂದ ಬೇರೆಯವರ ಕೆಲಸವನ್ನು ನಕಲುಪಡಿಸುವ ಪ್ರಯತ್ನ ಮಾಡದಿರಿ. ಸಂಪಾದಿಸಿದ ಹಣವನ್ನು ಸನ್ಮಾರ್ಗದಲ್ಲಿ ಬಳಸಿ.
ಮಕರ
ಪ್ರತಿದಿನವೂ ಒಂದೇ ರೀತಿಯ ದಿನಚರಿಯನ್ನು ಪಾಲಿಸುತ್ತಿರುವವರು ಅದರಿಂದ ಬೇಸತ್ತು ಹೋಗುವಿರಿ. ಬೇರೆಯವರ ಸಂಸಾರವನ್ನು ಟೀಕಿಸುವ ಮೊದಲು ಸಂಸಾರದ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಿ.
ಕುಂಭ
ಬದಲಾಗುತ್ತಿರುವ ಮನಃಸ್ಥಿತಿಯಿಂದಾಗಿ ನಿಕಟವರ್ತಿಗಳಿಗೆ ಗೋಳೆನ್ನಿಸಬಹುದು. ಪೋಷಕರಾದ ನೀವು ಮಕ್ಕಳ ಅಗತ್ಯಗಳನ್ನು ಪೂರೈಸಿ. ಮನೆಯ ಹಿರಿಯರಿಗೆ ಸರಿಯಾದ ಗೌರವ ಸಲ್ಲಿಸಿ.
ಮೀನ
ದೇವರನ್ನು ಸ್ತುತಿಸಿದ ಅದರ ಪುಣ್ಯಫಲಗಳ ಅನುಭವ ಮಕ್ಕಳ ಮೂಲಕ ತಿಳಿಯುತ್ತದೆ. ಒಪ್ಪಂದ ವ್ಯವಹಾರಗಳಿಂದ ವರಮಾನ ಹೆಚ್ಚಲಿದೆ. ಬಡ ವಿದ್ಯಾರ್ಥಿಗೆ ಕೈಲಾದ ಸಹಾಯ ಮಾಡಿ.