ಶನಿವಾರ, 3 ಜನವರಿ 2026
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ
Published 3 ಜನವರಿ 2026, 0:12 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ದೇಶ ನೆರವೇರಿಸಿಕೊಳ್ಳುವುದಕ್ಕೆ ನಡೆಸಿರುವ ಪ್ರಯತ್ನಗಳು ನಿಧಾನವಾಗಿಯಾದರೂ ಸಿದ್ಧಿಸಲಿವೆ. ಉತ್ತಮ ಕಾರ್ಯದಿಂದ ಗೌರವಾನ್ವಿತ ವ್ಯಕ್ತಿಯಾಗುವಿರಿ. ಆಭರಣಗಳ ಖರೀದಿಯಿಂದ ಸಂತೋಷವಾಗುವುದು.
ವೃಷಭ
ಮನೆಯಲ್ಲಿರುವ ಆಂತರಿಕ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ. ಕೆಲಸಗಳಲ್ಲಿನ ಜವಾಬ್ದಾರಿಗಳು ಹೆಚ್ಚಿ ಆರ್ಥಿಕ ಸ್ಥಿತಿಯು ಸುಧಾರಣೆ ಕಾಣಲಿದೆ. ಹೋರಾಟದಿಂದ ಯಶಸ್ಸು ಲಭಿಸಲಿದೆ.
ಮಿಥುನ
ಮನಸ್ಸಿನಲ್ಲಿ ಹಲವು ದಿನಗಳಿಂದ ಇದ್ದ ಹಂಬಲವು ಮಿತ್ರರ ಸಹಾಯದಿಂದ ನೆರವೇರುವುದು. ಎಲ್ಲಾ ವಿಚಾರಗಳಲ್ಲಿಯೂ ಸಾವಧಾನವಾಗಿ ಮುಂದುವರಿಯಿರಿ. ಕಪ್ಪು ಬಣ್ಣ ಅದೃಷ್ಟವನ್ನು ಬದಲಾಯಿಸಲಿದೆ.
ಕರ್ಕಾಟಕ
ಬದುಕಿನಲ್ಲಿ ಹೊಸ ವ್ಯಕ್ತಿಯ ಪ್ರವೇಶವಾಗಲಿದೆ. ಅವರಿಂದ ಸಿಗುವ ಸಹಕಾರ ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಇರುವುದು. ಸಿಬ್ಬಂದಿ ವರ್ಗದವರು ಸಹಕರಿಸಲಿದ್ದಾರೆ.
ಸಿಂಹ
ಆರ್ಥಿಕತೆಯಲ್ಲಿ ಅಗೌರವವಾಗುವಂಥ ಸನ್ನಿವೇಶ ಎದುರಾಗಿ ಕೊನೆಯ ಕ್ಷಣದಲ್ಲಿ ಹಣಕಾಸಿನ ಹೊಂದಿಕೆಯಾಗುವುದು. ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಬಗ್ಗೆ ಯೋಚಿಸುವವರಿಗೆ ಸುದಿನ.
ಕನ್ಯಾ
ಸಲಹೆ ಸೂಚನೆಗಳನ್ನು ಹೆಚ್ಚು ಚರ್ಚಿಸದೆ, ನಿಮ್ಮ ಮೇಲಿನ ನಂಬಿಕೆಯಿಂದಾಗಿ ಮೇಲಧಿಕಾರಿಗಳು ನಿಮ್ಮ ನಿರ್ಧಾರಗಳನ್ನು ಒಪ್ಪಿಕೊಳ್ಳಲಿದ್ದಾರೆ. ಒಂದು ಘಟನೆ ನಿಮ್ಮನ್ನು ಭಾವುಕರನ್ನಾಗಿ ಮಾಡಲಿದೆ.
ತುಲಾ
ನಿಮಗೆಎದುರಾಗುವ ಎಲ್ಲಾ ಸವಾಲುಗಳನ್ನು ಬುದ್ಧಿವಂತಿಕೆಯಿಂದ ಎದುರಿಸಿ, ಇನ್ನಷ್ಟು ಮನೋಬಲವನ್ನು ಹೆಚ್ಚಿಸಿಕೊಳ್ಳಿರಿ. ಮಹಾಗಣಪತಿಯನ್ನು ಪೂಜಿಸಿ ಪುಣ್ಯ ಸಂಪಾದನೆ ಮಾಡಿ. ಶುಭ ಸುದ್ದಿ ಕೇಳಿ ಸಂತೋಷವಾಗುವುದು.
ವೃಶ್ಚಿಕ
ಅಧಿಕಾರಿಯ ಸಹಾಯದಿಂದ ಮುಂಬಡ್ತಿ ಅಥವಾ ವರ್ಗಾವಣೆಯಂಥ ಅವಕಾಶವನ್ನು ಪಡೆದುಕೊಳ್ಳುವಿರಿ. ಕೃಷಿಯನ್ನು ಮಾಡುವವರು ಸಂಬಂಧ ಪಟ್ಟಂಥ ಇಲಾಖೆಯವರಿಂದ ಸಹಾಯವನ್ನು ಪಡೆದುಕೊಳ್ಳಿರಿ.
ಧನು
ಮಕ್ಕಳಿಂದ ಅಹಿತಕರ ಘಟನೆಗಳು ನಡೆದು ಪಾಲಕರಿಗೆ ಭವಿಷ್ಯದ ಬಗ್ಗೆ ಯೋಚನೆಗಳು ಬರಲಿವೆ. ನವವಿವಾಹಿತರಿಗೆ ಸಂತತಿಯ ವಿಚಾರದಲ್ಲಿ ಶುಭ ಸೂಚನೆ ಕಾಣಲಿದೆ. ಆಂತರಿಕ ಸಮಸ್ಯೆ ಸಾಮರಸ್ಯದಿಂದ ಬಗೆಹರಿಯಲಿದೆ.
ಮಕರ
ಜೀವನ ರೂಪಿಸಿಕೊಳ್ಳಲು ನಿರ್ಧರಿಸಿದ ಪ್ರೇಮಿಗಳಿಗೆ ಸಹೋದ ರರಿಂದ ಅಥವಾ ಕುಟುಂಬ ವರ್ಗದವರಿಂದ ಸ್ಪಂದನೆ ಸಿಗುವ ಅವಕಾಶಗಳಿವೆ. ನಿರುದ್ಯೋಗಿಗಳಿಗೆ ನಿರೀಕ್ಷೆಗೂ ಮೀರಿದ ಕೆಲಸ ಸಿಗುವ ಸಾಧ್ಯತೆ ಇದೆ.
ಕುಂಭ
ಆಫೀಸಿನಲ್ಲಿ ವಿನಯದಿಂದ ವರ್ತಿಸಿ ಕೆಲಸಗಳನ್ನು ಸಾಧಿಸಿಕೊಳ್ಳುವಿರಿ ಹಾಗೆಯೇ ಮನೆಯವರ ಮಾತುಗಳಿಗೆ ಸಮಾಧಾನದಿಂದ ಉತ್ತರಿಸಿ. ಎಂಥ ಜವಾಬ್ದಾರಿಗಳನ್ನೂ ನಿಭಾಯಿಸಲು ಸರ್ವಸಿದ್ಧರಾಗಿ.
ಮೀನ
ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದರ ಜೊತೆಯಲ್ಲಿ ಆ ಸಮಾರಂಭದ ಜವಾಬ್ದಾರಿ ಹೊರಬೇಕಾಗುವುದು. ಭೂ ವ್ಯವಹಾರದ ಬಂಡವಾಳದಲ್ಲಿ ಮೋಸಹೋಗುವ ಸ್ಥಿತಿ ಬರಬಹುದು.
ADVERTISEMENT
ADVERTISEMENT