ದಿನ ಭವಿಷ್ಯ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ
Published 2 ನವೆಂಬರ್ 2025, 19:09 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಪರ ಸ್ವಭಾವ, ಪರೋಪಕಾರ, ನಿರ್ಲಿಪ್ತತೆಯಿಂದಾಗಿ ವೈಯಕ್ತಿಕ ಸ್ಥಾನಮಾನಗಳು ಲಭಿಸಲಿವೆ. ಕೆಲಸಕಾರ್ಯಗಳಿಗೆ ಅಪೇಕ್ಷಿಸಿದ ಬೆಂಬಲ ದೊರೆಯಲಿದೆ.
ವೃಷಭ
ಸ್ತ್ರೀಸಂಬಂಧಿ ಸಮಸ್ಯೆಗಳು ಕೋರ್ಟು ಕಚೇರಿಗಳ ಮೆಟ್ಟಿಲನ್ನು ಹತ್ತುವಂತೆ ಮಾಡುವುದು. ಎಚ್ಚರವಾಗಿರಿ. ಸಂಘ ಸಂಸ್ಥೆಗಳಲ್ಲಿ ಅಧಿಕಾರ ಹೊಂದಿದವರು ಲೆಕ್ಕಪತ್ರಗಳ ಪರಿಶೋಧನೆ ಮಾಡುವುದು ಉತ್ತಮ.
ಮಿಥುನ
ಕೆಲವೊಂದು ಅನಿರೀಕ್ಷಿತ ಘಟನೆಗಳಿಂದ ಸುತ್ತಮುತ್ತಲಿನ ವಾತಾವರಣವೂ ಧನಾತ್ಮಕವಾಗಿ ಬದಲಾವಣೆಯಾಗುವುದು. ಪಾಲುದಾರಿಕೆಯ ವ್ಯವಹಾರದಲ್ಲಿ ಲಾಭವಾಗಲಿದೆ.
ಕರ್ಕಾಟಕ
ಹಣಕಾಸಿನ ಜವಾಬ್ದಾರಿಯ ಕೆಲಸ ಮಾಡುವವರಿಗೆ ವ್ಯತ್ಯಾಸಗಳಾಗುವ ಸಾಧ್ಯತೆಗಳಿವೆ. ಮಗನ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ.
ಸಿಂಹ
ಮಿತ್ರರೊಬ್ಬರು ಎಲ್ಲ ವಿಧದಲ್ಲಿಯೂ ಕುಟುಂಬದವರಿಗಿಂತಲು ಸಹಾಯವಾಗಲಿದ್ದಾರೆ. ಆತ್ಮೀಯರೊಂದಿಗೆ ವ್ಯವಹಾರಗಳ ಕುರಿತು ಆಳವಾದ ಚರ್ಚೆಯನ್ನು ನಡೆಸಿ.
ಕನ್ಯಾ
ವೈಯಕ್ತಿಕ ವಿಚಾರವನ್ನು ಆಪ್ತರೊಬ್ಬರ ಬಳಿ ಹೇಳಿಕೊಳ್ಳುವುದರಿಂದ ಮಾನಸಿಕ ದುಃಖ ಕಡಿಮೆಯಾಗಲಿದೆ. ಊರಿನ ಅಥವಾ ಪರ ಊರಿನ ಉತ್ಸವದಲ್ಲಿ ಭಾಗವಹಿಸುವುದರಿಂದ ಸಂತುಷ್ಟರಾಗುವಿರಿ.
ತುಲಾ
ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಸ್ವಂತ ಊರಿನಲ್ಲಿ ಬೇಕಾದ ಪ್ರಯತ್ನ ಮಾಡಿ. ಹಲವು ನಿರೀಕ್ಷೆಗಳೊಂದಿಗೆ ಬಂಧುಗಳು ಮನೆಗೆ ಪ್ರಯಾಣ ಬೆಳೆಸುವರು.
ವೃಶ್ಚಿಕ
ಎಲೆಕ್ಟ್ರಿಕಲ್ ಕಂಟ್ರಾಕ್ಟರ್‌ಗಳಿಗೆ ಉತ್ತಮ ಅವಕಾಶಗಳು ಸಿಗಲಿವೆ. ಅದೇ ರೀತಿಯಾಗಿ ಗ್ರಾಹಕರಿಂದ ದೂರುಗಳನ್ನು ಕೇಳುವ ಸಂಭವ ಇದೆ. ಧರ್ಮ ಕಾರ್ಯಗಳಲ್ಲಿ ಮಾರ್ಗದರ್ಶನದಿಂದ ಆಸಕ್ತಿ ಹೆಚ್ಚುವುದು.
ಧನು
ಸ್ವತ್ತು ಮಾರಾಟ ಅಥವಾ ಖರೀದಿಯ ವಿಚಾರದಲ್ಲಿ ಸೋದರರ
ಅಭಿಪ್ರಾಯವನ್ನು ಪಡೆದು ಮುಂದುವರಿಯುವುದು ಉತ್ತಮ. ರೈತರು ಉತ್ತಮ ತಳಿಯ ಬೆಳೆಯಿಂದ ಸಂತೋಷ ಹೊಂದುವರು.
ಮಕರ
ಕೆಲ ನಿರ್ಧಾರಗಳು ಸರಿಯಾಗಿ ಕಂಡು ಬಂದರೂ ಸಭೆಯಲ್ಲಿ ದೃಷ್ಟಿಕೋನವನ್ನು ನೋಡಿ ಬದಲಿಸಿಕೊಳ್ಳಬೇಕಾಗಬಹುದು. ಮೊಮ್ಮಕ್ಕಳ ಬಹಳ ದಿನದ ನಂತರದ ಭೇಟಿ ಸಂತಸ ತರುತ್ತದೆ.
ಕುಂಭ
ನೀತಿ ನಿಯಮಗಳಿಗೆ ಬದ್ಧರಾದರೆ, ಸತ್ಯ ನಿಮ್ಮದಾಗಿದ್ದರೆ ಉದ್ಯೋಗದಲ್ಲಿ ಹೆದರುವ ಅವಶ್ಯಕತೆ ಕಂಡುಬಾರದು. ಬೇರೆ ಬೇರೆ ಕಾರಣಗಳಿಗಾಗಿ ಒಂದೆ ಸ್ಥಳಕ್ಕೆ ಪುನಃ ಭೇಟಿ ನೀಡುವಂತಾಗುತ್ತದೆ.
ಮೀನ
ನಿಕಟ ಸಂಬಂಧಿಗಳೊಂದಿಗೆ ಬದುಕಿನ ದುರ್ಘಟನೆಯ ವಿಷಯಗಳನ್ನು ಹಂಚಿಕೊಳ್ಳುವುದರಿಶದ ಉತ್ತಮ ಸಲಹೆಯನ್ನು ಪಡೆಯುವಿರಿ. ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ದೇವತಾನುಗ್ರಹದಿಂದ ಸಿಗಲಿದೆ.