ದಿನ ಭವಿಷ್ಯ: ಈ ರಾಶಿಯವರಿಗೆ ಷೇರು ವ್ಯವಹಾರಗಳಲ್ಲಿ ಲಾಭ ಸಿಗಲಿದೆ
Published 2 ಅಕ್ಟೋಬರ್ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೈಯಕ್ತಿಕ ಕಾರ್ಯದೊತ್ತಡದ ನಡುವೆ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಲು, ರಾಜಕೀಯ ಸೇರಲು ಆಹ್ವಾನ ಬರಲಿದೆ. ಅದರ ಪರಿಣಾಮವಾಗಿ ಮುಂದಿನ ಹಾದಿಯು ಗೊಂದಲಕ್ಕೆ ಒಳಗಾಗುವುದು.
ವೃಷಭ
ಆಫೀಸಿನಲ್ಲಿ ಧನಾತ್ಮಕ ನಿರ್ಣಯಗಳನ್ನು ತೆಗೆದುಕೊಳ್ಳಲು ಉತ್ತಮ ಸಮಯ. ಹೊಸ ಜನರ ಭೇಟಿಯಾಗುವುದು. ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಬಹಳಷ್ಟು ಜಾಣತನ ತೋರಬೇಕಾಗುವುದು.
ಮಿಥುನ
ಸಂಬಂಧಗಳಲ್ಲಿ ನಂಬಿಕೆ ಉಳಿಸಿಕೊಳ್ಳುವುದು ಮುಖ್ಯ. ಆರ್ಥಿಕ ಪರಿಸ್ಥಿತಿಗೆ ಕಾರ್ಯಗಳನ್ನು ಕೈಗೊಳ್ಳುವುದು ಒಳ್ಳೆಯದು. ಆದಾಯ ಹೆಚ್ಚಲು ವಾಮಮಾರ್ಗ ಹಿಡಿಯುವುದು ಭವಿಷ್ಯಕ್ಕೆ ಅಪಾಯ.
ಕರ್ಕಾಟಕ
ವ್ಯವಸಾಯಗಾರರು ಇಲಾಖೆಯವರಿಂದ ಸಹಾಯ ಪಡೆದುಕೊಳ್ಳುವುದು ಅನಿವಾರ್ಯ. ನಿರ್ದಿಷ್ಟ ಕೆಲಸಗಳಿಗೆ ಗಮನ ಕೊಡುವುದು ಒಳ್ಳೆಯದು. ಆಟೊಮೊಬೈಲ್ ಎಂಜಿನಿಯರ್‌ಗಳಿಗೆ ವಿಶೇಷ ಲಾಭ ಪ್ರಾಪ್ತಿ.
ಸಿಂಹ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಆಸಕ್ತಿಯಿಂದ ಯಶಸ್ಸು ಪಡೆಯುವಿರಿ. ವೃತ್ತಿ ಜೀವನ ಹಾಗೂ ದಿನಚರಿಯು ಎಂದಿನಂತೆ ವ್ಯವಸ್ಥಿತವಾಗಿರುವುದು. ರಾಜಕೀಯ ವ್ಯಕ್ತಿಗಳು ಹೊಸ ಹುರುಪು ಕಾಣಲಿದ್ದೀರಿ.
ಕನ್ಯಾ
ಕೆಲಸ ಕಾರ್ಯಗಳಲ್ಲಿ ಕಷ್ಟ-ನಷ್ಟಗಳು ಎದುರಾಗಬಹುದು. ಕರ್ತವ್ಯವನ್ನು ನಿರ್ಲಕ್ಷಿಸಬೇಡಿ. ಹಿಮ್ಮುಖ ಚಲನೆಯೂ ಸರಿಯಲ್ಲ. ಬದುಕನ್ನು ಒಂದು ವ್ಯವಸ್ಥೆಗೆ ತರಲು ಮಾರ್ಗದರ್ಶಕರ ಸಲಹೆಯನ್ನು ಪಡೆಯಿರಿ.
ತುಲಾ
ವೈದ್ಯರ ಸಲಹೆಯಂತೆ ದೇಹಾರೋಗ್ಯಕ್ಕಾಗಿ ಆಹಾರ ಸೇವನೆಯಲ್ಲಿ ಕೆಲವು ನಿರ್ಬಂಧಗಳನ್ನು, ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಬಹುದು. ಅವಿವಾಹಿತರಿಗೆ ವಿವಾಹಯೋಗ ಕೂಡಿ ಬರುವುದು.
ವೃಶ್ಚಿಕ
ನೇರ, ದಿಟ್ಟ ಮಾತುಗಳು ಇತರರ ಮನಸ್ಸಿಗೆ ನೋವು ಆಗದಿರುವ ರೀತಿಯಲ್ಲಿ ಇರಲಿ. ಮಕ್ಕಳ ಹಿತಾಸಕ್ತಿಯ ಕುರಿತು ಹೆಚ್ಚಿನ ಗಮನವಿರಲಿ. ಸ್ನೇಹಿತರಿಬ್ಬರ ವಾದ-ವಿವಾದದಲ್ಲಿ ಮೌನ ಕಾಯ್ದುಕೊಳ್ಳುವುದೇ ಒಳಿತು.
ಧನು
ರಾಜಕೀಯ ವಲಯದಲ್ಲಿ ಗೌಪ್ಯತೆ ಮುಖ್ಯ ಮಾತುಕತೆ ನಡೆಸಬೇಕಾಗುವುದು. ಕಲಾವಿದರಿಗೆ ಮುಂಬರುವ ಸ್ಪರ್ಧೆಗಳಿಗೆ ತಯಾರಿ ಮಾಡಿಕೊಳ್ಳಲು ಶುಭದಿನ. ಷೇರು ವ್ಯವಹಾರಗಳಿಂದ ಲಾಭಾಂಶ ಪಡೆದುಕೊಳ್ಳುವಿರಿ.
ಮಕರ
ವಿಪರೀತ ಕೆಲಸಗಳಿಂದ ದೇಹಾಲಸ್ಯ ತೋರಿ ವಿಶ್ರಾಂತಿ ಬಯಸುವಿರಿ. ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳುವ ಪ್ರಸಂಗ ಬರಬಹುದು. ದೇಹದಲ್ಲಿ ಕಫ ಅಧಿಕ್ಯವಾಗಿರುವುದರಿಂದ ಅನಾರೋಗ್ಯ ಉಂಟಾಗಬಹುದು.
ಕುಂಭ
ಹಲವು ದಿನಗಳಿಂದ ಅನುಭವಿಸುತ್ತಿರುವ ಅನಾರೋಗ್ಯ ಸಮಸ್ಯೆ ಉಪಶಮನವಾಗುವುದು. ಸಾಂಸಾರಿಕವಾಗಿ ಪತಿ–ಪತ್ನಿಯ ಅನ್ಯೋನ್ಯತೆ ಕನಸು ನನಸಾಗಲಿದೆ. ಕಾಫಿ ಬೆಳೆಗಾರರಿಗೆ ಲಾಭ ಇರಲಿದೆ.
ಮೀನ
ಅನ್ಯರನ್ನು ಉದಾಹರಣೆಯಾಗಿ ತೆಗೆದುಕೊಂಡು ನೈಜತೆ ಬದಲು ಮಾಡಿಕೊಳ್ಳುವುದು ಸರಿಯಲ್ಲ. ಆಹಾರದಲ್ಲಿ ಹಿತ-ಮಿತವಿರಲಿ. ಅಜೀರ್ಣದ ಸಮಸ್ಯೆ ಕಾಡಬಹುದು. ಸಮಯ ವ್ಯರ್ಥ ಮಾಡಿದರೆ ಧನ ನಷ್ಟವಾಗಬಹುದು.