ದಿನ ಭವಿಷ್ಯ: ಆಗಸ್ಟ್ 19 ಮಂಗಳವಾರ 2025– ಅವಿವಾಹಿತ ಹೆಣ್ಣು ಮಕ್ಕಳಿಗೆ ಕಂಕಣಬಲ!
Published 18 ಆಗಸ್ಟ್ 2025, 18:33 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅವಿವಾಹಿತ ಹೆಣ್ಣು ಮಕ್ಕಳಿಗೆ ಅನಿರೀಕ್ಷಿತವಾಗಿ ಕಂಕಣಬಲ ಕೂಡಿಬರುವುದು. ಸ್ನೇಹಿತರಲ್ಲಿ ಅನಗತ್ಯ ಮಾತನಾಡುವುದಕ್ಕಿಂತ ಮೌನವಾಗಿ ಇರುವುದು ಲೇಸು. ಸ್ವವಿಮರ್ಶೆಯಿಂದ ತಪ್ಪುಗಳು ಗೋಚರವಾಗಲಿವೆ.
ವೃಷಭ
ಎಂಥ ಅನಿವಾರ್ಯ ಪರಿಸ್ಥಿತಿಯಲ್ಲಿಯೂ ಯಾರಿಗೂ ಸಾಲ ಕೊಡದಿರಲು ನಿಶ್ಚಯಿಸುವುದು ಉತ್ತಮ. ಪ್ರಯತ್ನಗಳು ವ್ಯರ್ಥವಲ್ಲ ಎಂಬುದು ತಿಳಿಯಿರಿ. ನಿಧಾನವಾಗಿಯಾದರೂ ಲಾಭ ಬಂದು ಕೈ ಸೇರಲಿದೆ.
ಮಿಥುನ
ಸಮಯವನ್ನು ಯಾಚಿಸುತ್ತಿರುವುದರಿಂದ ಸ್ವಂತ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿವೆ. ಗೃಹದಲ್ಲಿ ಶುಭ ಸಮಾರಂಭಗಳು ನಡೆಯಲಿವೆ. ಕುಟುಂಬದಲ್ಲಿ ಉತ್ತಮ ವಾತಾವರಣವಿದ್ದು ಸಂತಸ ತರಲಿದೆ.
ಕರ್ಕಾಟಕ
ವ್ಯಾಪಾರ ವ್ಯವಹಾರಗಳಲ್ಲಿ ತುಸು ಚೇತರಿಕೆ ಕಂಡುಬಂದು ಮುಂದುವರಿಯಲು ಸಹಾಯವಾಗುತ್ತದೆ. ಹಂತಹಂತವಾಗಿ ಸುಧಾರಿಸಲಿರುವ ಪರಿಸ್ಥಿತಿ ನಿರಾಶೆಯನ್ನು ತರದು. ಮಕ್ಕಳ ಅಗತ್ಯಗಳನ್ನು ಪೂರೈಸಿ.
ಸಿಂಹ
ಆಲಸ್ಯತನ ದೂರಮಾಡಿ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಕಂಪ್ಯೂಟರ್ ಅಧ್ಯಯನ ಮಾಡುವ ಬಗ್ಗೆ ಅಥವಾ ಬೇರೆ ಬೇರೆ ಭಾಷೆ ಕಲಿಯುವ ಬಗ್ಗೆ ಯೋಚಿಸಿ. ಭವಿಷ್ಯಕ್ಕೆ ಅನುಕೂಲ ಮಾಡಿಕೊಡುವುದು.
ಕನ್ಯಾ
ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಕೆಲಸವಿರಲಿದೆ. ನ್ಯಾಯಾಲಯದ ಮೆಟ್ಟಿಲೇರಿದ ನಿಮ್ಮ ಸಮಸ್ಯೆಗಳನ್ನು ರಾಜಿ ಒಪ್ಪಂದದ ಮೂಲಕ ಬಗೆಹರಿಸಿ ಕೊಳ್ಳಿ. ಅಶ್ವತ್ಥ ವೃಕ್ಷದ ಪ್ರದಕ್ಷಿಣೆ ಶುಭ ತರಲಿದೆ.
ತುಲಾ
ಸ್ತ್ರೀವರ್ಗದಿಂದ ಸಹಾಯ ಪ್ರಾಪ್ತ. ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಅನುಭವಕ್ಕೆ ಬರಲಿದೆ. ಮಕ್ಕಳ ಯಶಸ್ಸನ್ನು ಕಂಡು ಸಂಭ್ರಮಿಸುವಿರಿ.
ವೃಶ್ಚಿಕ
ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ವರ್ಧಿಸಲಿದೆ. ಪ್ರಾಪಂಚಿಕ ವಿಷಯಗಳಲ್ಲಿ ಮಹತ್ವಾಕಾಂಕ್ಷೆ ಇರುವವರಿಗೆ ಶುಭ ದಿನ. ಕೌಟುಂಬಿಕ ವಿಷಯಗಳಲ್ಲಿ ಬದಲಾವಣೆ ಕಾಣಲಿದೆ.
ಧನು
ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವುದರ ಪ್ರಯೋಜನ ಅನುಭವಕ್ಕೆ ಬರಲಿದೆ. ನಿಮ್ಮ ಸುತ್ತಲಿನ ವಾತಾವರಣ ಸಂತಸದಾಯಕ. ಬ್ಯಾಂಕ್ ಅಧಿಕಾರಿಗಳಿಗೆ ಎದುರಾಗುವ ವರ್ಗಾವಣೆ ತಲೆನೋವು ತರಿಸಬಹುದು.
ಮಕರ
ವೈಯಕ್ತಿಕ ಜೀವನದ ಸಮಸ್ಯೆ ಬಗೆಹರಿದು ಮನಸ್ಸಿಗೆ ನೆಮ್ಮದಿ ಮೂಡಲಿದೆ. ಮಕ್ಕಳೊಡನೆ ಉಪಯುಕ್ತ ಸಮಯ ಕಳೆಯುವಿರಿ. ಅಪರೂಪದ ಹಾಗೂ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ.
ಕುಂಭ
ಕೌಟುಂಬಿಕ ನೆಮ್ಮದಿ ಸಮೃದ್ಧಿಯಾಗಿದ್ದರೂ ಕಿರಿಕಿರಿ ತಪ್ಪದಂತಾಗಲಿದೆ. ಅನಾರೋಗ್ಯ ಸ್ಥಿತಿಯು ಎದುರಾಗಿ ಆರ್ಥಿಕವಾಗಿ ಧನ ವ್ಯಯವಾಗಲಿದೆ. ಸತ್ಫಲಗಳಿಗೆ ಶ್ರೀಲಕ್ಷ್ಮಿನರಸಿಂಹನ ಸೇವೆಯು ಅನುಕೂಲವಾಗಲಿದೆ.
ಮೀನ
ಆದಷ್ಟು ಮೌನವಾಗಿರಲು ನಿಶ್ಚಯಿಸಿ. ಮಕ್ಕಳ ಓದಿಗಾಗಿ ಗಮನ ಹರಿಸ ಬೇಕಾಗುವುದು. ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಕಮಿಷನ್ ಸಿಗಲಿದೆ. ದೂರ ಸಂಚಾರದಲ್ಲಿ ಜಾಗ್ರತೆ ವಹಿಸಿರಿ.