ದಿನ ಭವಿಷ್ಯ: ಹುಸಿ ಜಾಹೀರಾತುಗಳಿಗೆ ಮಾರುಹೋಗದಿರಿ
Published 14 ಸೆಪ್ಟೆಂಬರ್ 2025, 0:03 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೂವಿನ ಗಿಡ ಮಾರಾಟಗಾರರಿಗೆ ಹೆಚ್ಚಿನ ಆದಾಯವಿದೆ. ಸಾಂಸಾರಿಕ ವಿಷಯದಲ್ಲಿ ಹಿರಿಯರ ಮಾತು ಮೀರದಿರುವುದು ಉತ್ತಮ. ಹುಸಿ ಜಾಹೀರಾತುಗಳಿಗೆ ಮಾರುಹೋಗದಿರಿ.
ವೃಷಭ
ನಿಮ್ಮ ಹಿಂದಿನ ಸೂತ್ರಧಾರನು ನಡೆಸುತ್ತಿರುವ ಕೈವಾಡವು ನಿಮಗೆ ಕಷ್ಟವಾಗುತ್ತಿದ್ದರು ಸಹ ಏನೂ ಮಾಡದ ಪರಿಸ್ಥಿತಿ ಎದುರಾಗುತ್ತದೆ. ಕುಟುಂಬದಲ್ಲಿನ ಹಿಂದಿನ ಕಲಹಗಳು ರಾಜಿಯಲ್ಲಿ ತೀರ್ಮಾನಗೊಳ್ಳಲಿವೆ.
ಮಿಥುನ
ಸ್ನೇಹಿತರೊಂದಿಗಿನ ಮಾತುಕತೆ ಉಪಯುಕ್ತ. ಮಗನಿಗೆ ಓದಿನಲ್ಲಿ ಸಹಾಯ ಮಾಡುವಿರಿ. ಕೆಲಸಗಾರರಲ್ಲಿ ಒಮ್ಮತಾಭಿಪ್ರಾಯ ಮೂಡಿಸುವಲ್ಲಿ ಯಶಸ್ವಿಯಾಗುವಿರಿ. ಆಟಿಕೆ ವಸ್ತುಗಳ ಮಾರಾಟಗಾರರಿಗೆ ಶುಭದಿನ.
ಕರ್ಕಾಟಕ
ನೀವು ಭಾಗವಹಿಸುವ ಸಭೆಯಲ್ಲಿ ನಿಮ್ಮ ಪಾಂಡಿತ್ಯಕ್ಕೆ ತಕ್ಕ ಸ್ಥಾನಮಾನ ಸಿಗದಿರಬಹುದು. ನಿಮ್ಮ ಮನಗೆದ್ದ ಸಂಬಂಧ ಮನೆಯವರ ಮನಸ್ಸನ್ನೂ ಮುದಗೊಳಿಸುತ್ತದೆ. ಯಾವುದಕ್ಕೂ ಆತುರಬೇಡ.
ಸಿಂಹ
ದೊಡ್ಡ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಯೋಚಿಸಿ ಅಥವಾ ಮಾರ್ಗದರ್ಶಕರ ಸಲಹೆ ಪಡೆದು ಪರಿಹರಿಸಿಕೊಳ್ಳುವ ಮಾರ್ಗವನ್ನು ಕಂಡುಕೊಳ್ಳಿ. ಶಸ್ತ್ರವೈದ್ಯರಿಗೆ ವೃತ್ತಿಗೆ ಸಂಬಂಧಿಸಿದಂತೆ ಸೌಲಭ್ಯಗಳು ಹೆಚ್ಚಲಿದೆ.
ಕನ್ಯಾ
ದೇಹಾಲಸ್ಯದಿಂದ ಹಲವು ದಿನಗಳಿಂದ ತಳ್ಳುತ್ತ ಬಂದಿದ್ದ ಕಾರ್ಯಗಳನ್ನು ಇನ್ನು ಮುಂದೆ ಹಾಕುವುದು ಒಳ್ಳೆಯದಲ್ಲ. ಪೋಷಕರ ಮಾತು ಮೀರಿ ಇಂದು ಪ್ರಯಾಣ ಕೈಗೊಳ್ಳಬೇಡಿ. ಆತ್ಮವಿಶ್ವಾಸದ ಕೊರತೆ ಕಾಣಿಸಬಹುದು.
ತುಲಾ
ಪ್ರತಿಯೊಂದು ವಿಷಯವನ್ನು ತುಂಬಾ ಗಹನವಾಗಿ ಚಿಂತಿಸುತ್ತಾ ಕುಳಿತಲ್ಲಿ ಎಲ್ಲಾ ವಿಷಯಗಳಲ್ಲೂ ದೋಷಗಳು ಕಂಡು ಬರುವವು. ಸ್ನೇಹಿತನ ವಿಷಯದಲ್ಲಿ ಈ ದಿನ ಹೆಚ್ಚಿನ ಆಸಕ್ತಿಯನ್ನು ವಹಿಸಲಿದ್ದೀರಿ.
ವೃಶ್ಚಿಕ
ಮಧುರವಾದ ನಿಮ್ಮ ಸಾಂತ್ವನ ನುಡಿಗಳು ಬೇಸರಗೊಂಡ ವ್ಯಕ್ತಿಗೆ ಆಸರೆಯಾಗುತ್ತದೆ. ಸಮಾಜ ಸೇವೆಯಲ್ಲಿ ಪುತ್ರರ ಘನತೆ ಗೌರವ ಹೆಚ್ಚಳವಾಗುವುದು. ಉಸಿರಾಟ ಸಂಬಂಧಿ ಸಮಸ್ಯೆಗಳಾಗಬಹುದು, ಜಾಗ್ರತೆ ವಹಿಸಿರಿ.
ಧನು
ಮಕ್ಕಳ ಅಗತ್ಯವನ್ನು ಪೂರೈಸುವುದರಲ್ಲಿ ಆಸಕ್ತರಾದ ನೀವು ಸಂಜೆ ಮಕ್ಕಳೊಂದಿಗೆ ತಿರುಗಾಟ ಮಾಡುವಿರಿ. ಕಷ್ಟಗಳಿಂದ ಮುಕ್ತರಾಗುವ ಸಂದರ್ಭ ದೇವತಾನುಗ್ರಹದಿಂದ ತುಂಬಾ ಸನಿಹದಲ್ಲಿದೆ.
ಮಕರ
ಮುಕ್ತ ಮಾತುಕತೆ ಮೂಲಕ ಕಾರ್ಮಿಕರ ಸಮಸ್ಯೆಗಳನ್ನು ಅಥವಾ ಬೇಡಿಕೆಯನ್ನು ಪೂರ್ಣಗೊಳಿಸಿ. ಕಾರ್ಮಿಕರು ಮನಸ್ಸಿನ ಆಲೋಚನೆಯಂತೆ ಮಾತನಾಡಿದಲ್ಲಿ ಬೇಕಾದ ಸೌಲಭ್ಯಗಳು ದೊರೆಯಲಿವೆ.
ಕುಂಭ
ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡರೆ ಉತ್ತಮ. ನಿಮ್ಮನ್ನು ಆಡಿಕೊಳ್ಳಲೆಂದೆ ಜನರಿರುವರು, ನಿಮ್ಮ ಗೌರವವನ್ನು ಕಾಪಾಡಿಕೊಳ್ಳಲು ನಿಮ್ಮ ಸಭ್ಯತೆಯೇ ಮುಖ್ಯ ಕಾರಣವಾಗುವುದು.
ಮೀನ
ನಿಮ್ಮ ನಿಯತ್ತಿನ ಮುಂದೆ ಯಾರ ಕುತಂತ್ರಗಳು ನಡೆಯುವುದಿಲ್ಲ. ಯೋಜನೆ ಸರಿಯಾಗಿದ್ದಲ್ಲಿ ಆದಾಯ ಹೆಚ್ಚಾಗಿರುತ್ತದೆ. ಕೇವಲ ಅದೃಷ್ಟವನ್ನೇ ನೆಚ್ಚಬೇಡಿ, ಅದೃಷ್ಟದ ಜೊತೆಯಲ್ಲಿ ಪರಿಶ್ರಮವೂ ಬೇಕಾಗುವುದು.