ದಿನ ಭವಿಷ್ಯ: ಹೆಚ್ಚಿನ ಇಷ್ಟಾರ್ಥ ಸಿದ್ಧಿಯೋಗ ನಿಮ್ಮ ಪಾಲಿಗಿರುತ್ತದೆ
Published 26 ಅಕ್ಟೋಬರ್ 2024, 18:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒಳ್ಳೆಯ ಮಿತ್ರರಿಂದ ಕಂಪನಿಯ ಮುಖ್ಯವಾದ ವ್ಯಕ್ತಿಯ ಪರಿಚಯ ಹಾಗೂ ಅಭಿವೃದ್ಧಿಯ ಮಾಹಿತಿ ನಿಮಗೆ ಈ ದಿನ ದೊರಯುತ್ತದೆ. ಹೆಚ್ಚಿನ ಇಷ್ಟಾರ್ಥ ಸಿದ್ಧಿಯೋಗ ನಿಮ್ಮ ಪಾಲಿಗಿರುತ್ತದೆ. ಹಣದ ಬಗ್ಗೆ ಚಿಂತೆ ಬೇಡ.
26 ಅಕ್ಟೋಬರ್ 2024, 18:30 IST
ವೃಷಭ
ದೈಹಿಕ ಕೆಲಸವನ್ನು ಮಾಡಿ ದುಡಿಮೆ ಮಾಡುತ್ತಿರುವವರು ದೇಹಕ್ಕೆ ಸ್ವಲ್ಪಮಟ್ಟಿನ ವಿಶ್ರಾಂತಿ ನೀಡಬೇಕಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಉನ್ನತವಾದ ಸ್ಥಾನಮಾನ ಪ್ರಾಪ್ತಿಯಾಗಲಿದೆ.
26 ಅಕ್ಟೋಬರ್ 2024, 18:30 IST
ಮಿಥುನ
ಸಾಂಸಾರಿಕವಾಗಿ ಸಮಸ್ಯೆಗಳನ್ನು ಪರಿಹಾರಿಸುತ್ತಿದ್ದಂತೆ ಇನ್ನೊಂದು ಮತ್ತೊಂದು ಎಂಬಂತೆ ಒಂದೊಂದೇ ಸಮಸ್ಯೆಗಳು ಬರುತ್ತಿವೆ. ಶಿವನ ಆರಾಧನೆಯಿಂದಾಗಿ ಅಭೀಷ್ಟ ಪ್ರಾಪ್ತಿಯಾಗಿ ಶುಭವಾಗಲಿದೆ.
26 ಅಕ್ಟೋಬರ್ 2024, 18:30 IST
ಕರ್ಕಾಟಕ
ಹಿರಿಯ ಅಧಿಕಾರಿಗಳ ಸಹಾಯ ಪಡೆದು ವರ್ಗಾವಣೆ ರದ್ದು ಮಾಡಿಸಿಕೊಳ್ಳುವಲ್ಲಿ ಸಫಲರಾಗುವಿರಿ. ಮನೋರಂಜನೆಗಾಗಿ ಹಣ ವ್ಯಯ ಮಾಡುವುದು ಸರಿಯಲ್ಲ. ಕೃಷಿಕರಿಗೆ ಕೆಲಸ ಕಾರ್ಯಗಳು ಹೆಚ್ಚಲಿದೆ.
26 ಅಕ್ಟೋಬರ್ 2024, 18:30 IST
ಸಿಂಹ
ನಿಮ್ಮ ಚಾಣಾಕ್ಷತನ ಮತ್ತು ಸರಳತೆಗೆ ಹಿರಿಯರಿಂದ ಮೆಚ್ಚುಗೆ ದೊರೆಯಲಿದೆ. ಸಂಸ್ಥೆಯೊಂದರ ಸಲಹೆಗಾರರಾಗಿರುವ ನಿಮಗೆ ಹೆಚ್ಚಿನ ಒತ್ತಡ ಮತ್ತು ಸಂದಿಗ್ಧ ಪರಿಸ್ಥಿತಿ ಎದುರಾಗುತ್ತದೆ. ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ಇರಲಿ.
26 ಅಕ್ಟೋಬರ್ 2024, 18:30 IST
ಕನ್ಯಾ
ಅಪರಿಚಿತ ಜಾಗದಲ್ಲಿ, ಅಪರಿಚಿತ ವ್ಯಕ್ತಿಗಳೊಂದಿಗೆ ಉದ್ವೇಗಗೊಳ್ಳದೆ ತಾಳ್ಮೆಯಿಂದಿದ್ದರೆ, ನಿಮ್ಮ ಹಾದಿ ಸುಗಮವಾಗಿ ಸಾಗುತ್ತದೆ. ತರಕಾರಿ ವ್ಯಾಪಾರಸ್ಥರಿಗೆ ಲಾಭ ಕಡಿಮೆಯಿದೆ.
26 ಅಕ್ಟೋಬರ್ 2024, 18:30 IST
ತುಲಾ
ನೀವು ಬಯಸಿದ ಪ್ರಗತಿಯು ದೇವತಾನುಗ್ರಹದಿಂದ ಪ್ರಾಪ್ತಿಯಾಗಲಿದೆ. ಕೌಟುಂಬಿಕವಾಗಿ ಎಷ್ಟೇ ಕಷ್ಟ ಬಂದರೂ ಹಿಡಿದ ದಾರಿಯನ್ನು ಬಿಡಬಾರದೆಂಬ ನಿಮ್ಮ ಮನೋಭಾವ ದೇಹಾಯಾಸ ಮೂಲಕ ಗುರಿ ತಲುಪಲಿದೆ.
26 ಅಕ್ಟೋಬರ್ 2024, 18:30 IST
ವೃಶ್ಚಿಕ
ಧೈರ್ಯ ಮತ್ತು ಪ್ರೇರಣಾ ಶಕ್ತಿಯ ಭಾವವನ್ನು ಹೊಂದುವುದರಿಂದ ಸಮಸ್ಯೆಯನ್ನು ಸುಲಭವಾಗಿ ಎದುರಿಸಬಹುದು. ಚಿತ್ರ ವಿತರಕರಿಗೆ ಹೆಚ್ಚಿನ ವರಮಾನ ಅಥವಾ ಪ್ರಶಸ್ತಿ ಹಾಗೂ ಪುರಸ್ಕಾರ ದೊರೆಯಲಿದೆ.
26 ಅಕ್ಟೋಬರ್ 2024, 18:30 IST
ಧನು
ನೀವೇ ನಡೆಸಬೇಕಾದ ವಿವಾಹದಂತಹ ಸಮಾರಂಭದ ವಿಚಾರದಲ್ಲಿ ನಿಮ್ಮ ಬಹುದಿನದ ಪ್ರಯತ್ನಗಳು ನಿಷ್ಫಲವೆನಿಸುವುದಿಲ್ಲ. ವೃತ್ತಿಯಲ್ಲಿ ಉನ್ನತ ಸ್ಥಾನಕ್ಕೆ ಏರಲು ಬೇಕಾದ ತಯಾರಿಯನ್ನು ಮಾಡಿಕೊಳ್ಳಿ.
26 ಅಕ್ಟೋಬರ್ 2024, 18:30 IST
ಮಕರ
ಶತ್ರುಗಳ ಉಪಟಳವನ್ನು ಎದುರಿಸುವ ಸಾಮರ್ಥ್ಯ ನಿಮಗೆ ಭಗವಂತ ನೀಡಲಿದ್ದಾನೆ. ಕಿರುತೆರೆ ಕಲಾವಿದರಿಗೆ ವಿಫುಲ ಅವಕಾಶಗಳು ಒದಗಲಿದೆ. ನ್ಯಾಯವಾದಿಗಳಿಗೆ ಜಯ ಪ್ರಾಪ್ತಿಯಾಗಲು ಸತ್ಯ ಮಾರ್ಗದಲ್ಲಿದ್ದರಷ್ಟೇ ಸಾಧ್ಯ.
26 ಅಕ್ಟೋಬರ್ 2024, 18:30 IST
ಕುಂಭ
ಧಾರ್ಮಿಕ ಕೆಲಸ ಕಾರ್ಯಗಳನ್ನು ಮಾಡುವ ಅವಕಾಶ ಸಿಗುವುದು. ಅದರ ಫಲವಾಗಿ ಪುಣ್ಯ ಸಂಪಾದನೆ ಆಗುತ್ತದೆ. ಶಾರೀರಿಕ ಆಯಾಸ ಇತ್ಯಾದಿ ತೋರಿ ಬಂದರೂ ದಿನಾಂತ್ಯದಲ್ಲಿ ಹಂತಹಂತವಾಗಿ ಪ್ರಗತಿ ದೊರೆಯಲಿದೆ.
26 ಅಕ್ಟೋಬರ್ 2024, 18:30 IST
ಮೀನ
ಮಕ್ಕಳ ಜೊತೆ ಸಂತೋಷದಿಂದ ಕಾಲ ಕಳೆಯಲು ಕೆಲ ನಿರ್ಧಾರಗಳನ್ನು ಕೈಗೊಳ್ಳಬೇಕಾಗುವುದು. ನಿಮ್ಮ ದೈನಂದಿನ ಬದುಕಿಗೆ ವಿಶ್ರಾಂತಿ ಮಾಡಬೇಕಾಗುತ್ತದೆ. ಲಲಿತ ಕಲೆಗಳಲ್ಲಿ ಸಫಲತೆಯ ದಾರಿಗಳು ಒದಗಲಿವೆ.
26 ಅಕ್ಟೋಬರ್ 2024, 18:30 IST