ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸ್ನೇಹಿತರ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಜಯ
Published 27 ಫೆಬ್ರುವರಿ 2024, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮೇಷ: ಮನೆಯಲ್ಲಿನ ನೆಮ್ಮದಿಯ ವಾತಾವರಣವು ಸಂತಸ ತರಲಿದೆ. ಪಶುಸಂಗೋಪನೆ ಮಾಡುವವರಿಗೆ, ಜೇನು ಕೃಷಿ ಮಾಡುವವರಿಗೆ ಮತ್ತು ಪಾನೀಯ ಮಾರಾಟಗಾರರಿಗೆ ಮಹಾಲಕ್ಷ್ಮಿಯ ಅನುಗ್ರಹ ಸಿಗಲಿದೆ.
ವೃಷಭ
ವೃಷಭ: ತೈಲ, ಇಂಧನಗಳ ವ್ಯಾಪಾರ ಮಾಡುವವರಿಗೆ ಅಧಿಕ ಲಾಭ ಸಿಗಲಿದೆ. ಖಾಸಗಿ ಕಾಗದದ ಕಾರ್ಖಾನೆ ಮಾಲೀಕರಿಗೆ ಲಾಭ ದೊರೆಯುತ್ತದೆ. ಜನರನ್ನು ಆಕರ್ಷಿಸುವ ಕಲೆ ನಿಮಗೆ ಕರಗತವಾಗಿದೆ.
ಮಿಥುನ
ಮಿಥುನ: ಆತ್ಮಗೌರವ ಕಾಪಾಡಿಕೊಳ್ಳಲು ಒಡಹುಟ್ಟಿದವರ ಸಹಾಯ ದೊರೆ ಯಲಿದೆ. ದಿನಸಿ ವರ್ತಕರು ವ್ಯಾಪಾರದಲ್ಲಿ ಮತ್ತು ಬಂಡವಾಳ ಹೂಡಿಕೆಯಲ್ಲಿ ಕಾಳಜಿ ವಹಿಸಬೇಕಾಗುವುದು. ಮನೆಯವರು ನೆರವಿಗೆ ನಿಲ್ಲಲ್ಲಿದ್ದಾರೆ.
ಕರ್ಕಾಟಕ
ಕರ್ಕಾಟಕ: ತೊಂದರೆಗಳೆಲ್ಲಾ ಒಂದೊಂದಾಗಿ ಉಪಶಮನಗೊಳ್ಳುತ್ತಾ ಅಭಿವೃದ್ಧಿ ತೋರಿ ಬರುವುದು. ಬರಬೇಕಾದ ಹಣ ಪಡೆಯಲು ಅಧಿಕಾರಿಗಳ ಹಿಂದೆ ಸುತ್ತುವಿಕೆ ಕೊನೆಯಾಗಲಿದೆ. ಓದಿನಲ್ಲಿ ಅಪರಿಮಿತ ಆಸಕ್ತಿ ತೋರುವಿರಿ.
ಸಿಂಹ
ಸಿಂಹ: ಸ್ನೇಹಿತರ ಸಹಕಾರದಿಂದ ಕೈಗೊಂಡ ಕಾರ್ಯಗಳಲ್ಲಿ ಜಯ ಪ್ರಾಪ್ತಿಯಾಗುವುದು. ಮೃದು ಧೋರಣೆ ಸಿಬ್ಬಂದಿ ವರ್ಗಕ್ಕೆ ಆಶ್ಚರ್ಯವೆನಿಸುವುದು. ಆರೋಗ್ಯಕ್ಕಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಿರಿ.
ಕನ್ಯಾ
ಕನ್ಯಾ: ಆದರ್ಶವಾದಿ ಗುಂಪಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವದಲ್ಲಿ ಒಳ್ಳೆಯ ಬದಲಾವಣೆಗಳಾಗುವುದು. ಸಮಸ್ಯೆಯಿಂದ ಹೊರಬರಲು ಸಂದರ್ಭಕ್ಕನುಗುಣವಾಗಿ ವರ್ತಿಸುವ ತೀರ್ಮಾನ ಕೈಗೊಳ್ಳುವಿರಿ.
ತುಲಾ
ತುಲಾ: ಸಂಕಲ್ಪಿತ ಯೋಜನೆಗಳಿಗೆ ನಿರ್ದಿಷ್ಟ ರೂಪ ದೊರೆತು ಸಂತೋಷ ವಾಗುವುದು. ನ್ಯಾಯಾಲಯ ಅಥವಾ ಸರ್ಕಾರಿ ಕಚೇರಿಗಳ ಅಲೆ ದಾಟವೂ ವ್ಯರ್ಥವಾಗುವುದು. ಕೃಷಿಕರಿಗೆ ಕೆಲಸದಲ್ಲಿ ತೊಡಕುಗಳು ಉಂಟಾಗಬಹುದು.
ವೃಶ್ಚಿಕ
ವೃಶ್ಚಿಕ: ಹಿತ ಶತ್ರುಗಳು ಜತೆಯಲ್ಲೇ ಇದ್ದಂಥ ಅನುಭವ ಈ ದಿನ ನಿಮಗಾಗುವುದು. ಸ್ವಂತವಾಗಿ ಹೋಟೆಲ್ ವ್ಯಾಪಾರ ಪ್ರಾರಂಭ ಮಾಡುವ ಯೋಚನೆಯು ಫಲಪ್ರದವಾಗುತ್ತದೆ. ಜ್ಞಾನವನ್ನು ಹಂಚಿಕೊಳ್ಳಿ.
ಧನು
ಧನು: ಕಾರ್ಯಕ್ಷೇತ್ರದಲ್ಲಿ ಉತ್ತಮ ಸ್ಥಾನಮಾನ ತೋರಿಬರುವುದರ ಜತೆಯಲ್ಲಿ ಕೆಲಸದ ಅತಿ ಒತ್ತಡವು ದೇಹದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಸಮಾಜಸೇವೆಯ ನಿಮಿತ್ತ ಓಡಾಟ ಹೆಚ್ಚುವುದು.
ಮಕರ
ಮಕರ: ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಂಡು ಹಿರಿಯರ ಮಾರ್ಗದರ್ಶನದಂತೆ ನಡೆದರೆ ಉತ್ತಮ. ಸಾಹಿತ್ಯಾತ್ಮಕವಾದ ಬಹುದಿನದ ಕನಸು ನನಸಾಗುವುದು. ಅಧ್ಯಯನದ ವಿಷಯಕ್ಕೆ ಇರುವ ಪ್ರಾಮುಖ್ಯ ತಿಳಿಯುವುದು.
ಕುಂಭ
ಕುಂಭ: ಧರ್ಮ-ಕರ್ಮಗಳಲ್ಲಿ ಆಸಕ್ತಿ ತೋರಿದರೆ, ಕಾರ್ಯ ಕ್ಷೇತ್ರದಲ್ಲಿ ಹಾಗೂ ಜೀವನದಲ್ಲಿ ಅಭೀಷ್ಟಫಲವನ್ನು ಪಡೆಯಬಹುದು. ತಂದೆ ತಾಯಿ ಅವರ ಆರೋಗ್ಯ ಉತ್ತಮವಾಗಿದ್ದು , ಮನಸ್ಸು ನಿರಾಳವಾಗಿರಲಿದೆ.
ಮೀನ
ಮೀನ: ಸಾಮರ್ಥ್ಯ, ದಕ್ಷತೆ ಹಾಗೂ ಸೇವಾ ಮನೋಭಾವಗಳಿಂದ ಸಂಘ ಸಂಸ್ಥೆಯಲ್ಲಿ ಜವಾಬ್ದಾರಿಯುತವಾಗಿರುವ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳುವಿರಿ. ಒಳ್ಳೆಯತನ ದುರುಪಯೋಗವಾಗದಂತೆ ನೋಡಿಕೊಳ್ಳಿ.