ಭಾನುವಾರ, 13 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರು ಶುಭ ಸಮಾಚಾರಗಳನ್ನು ಕೇಳುವಿರಿ
Published 8 ಏಪ್ರಿಲ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಆಲೋಚನೆಯ ಹೊಸ ಕಾರ್ಯಗಳು ಸ್ವಲ್ಪ ತಡವಾಗಿ ಪ್ರಾರಂಭವಾದರೂ, ದಿನದ ಸ್ವಲ್ಪ ಸಮಯ ಕಳೆದ ಹಾಗೇ ಎಲ್ಲವೂ ಆಸೆಗೆ ತಕ್ಕಂತೆ ನಡೆಯಲಿದೆ. ಶುಭ ಕಾರ್ಯ ನಡೆಸಿಕೊಡುವಲ್ಲಿ ಪಾತ್ರ ವಹಿಸುವಿರಿ.
ವೃಷಭ
ಸರ್ಕಾರಿ ಅಧಿಕಾರಿಗಳಿಗೆ ಸಹೋದ್ಯೋಗಿಗಳಿಂದ ನಿರೀಕ್ಷೆಗೆ ಮೀರಿದ ಸಹಾಯ ದೊರೆಯುವುದು. ನಿಧಾನಗತಿಯಲ್ಲಿ ತಂದೆಯವರ ಆರೋಗ್ಯ ಉತ್ತಮ ಆಗಲಿದೆ. ದೇವತಾ ಉಪಾಸನೆಯಿಂದ ಉನ್ನತಿ ಒದಗಿಬರಲಿದೆ.
ಮಿಥುನ
ಮಗನ ಕೆಲಸದ ವಿಚಾರದಲ್ಲಿ ವಿದೇಶದಲ್ಲಿರುವ ಸ್ನೇಹಿತ ನೆರವಿಗೆ ಬರಲಿದ್ದಾರೆ. ಯುವ ಕಲಾವಿದರಿಗೆ ಹೆಚ್ಚು ಅವಕಾಶಗಳು ಲಭಿಸುವುದು. ಅಧ್ಯಾಪಕ ವರ್ಗದವರಿಗೆ ಕೆಲಸ ಅನಿವಾರ್ಯವಾಗಬಹುದು.
ಕರ್ಕಾಟಕ
ಶುಭ ಸಮಾಚಾರಗಳನ್ನು ಕೇಳುವುದಲ್ಲದೆ ಪ್ರಯತ್ನಿಸಿದ ಎಲ್ಲಾ ಕಾರ್ಯಗಳಲ್ಲಿ ಯಶಸ್ಸು ಪಡೆಯುವಿರಿ. ಆರೋಗ್ಯದ ವಿಚಾರವಾಗಿ ದೇಹ ಪ್ರಕೃತಿಗೆ ಅನುಗುಣವಾಗಿ ವೈದ್ಯರು ನೀಡಿರುವ ಸಲಹೆ ಚಾಚೂ ತಪ್ಪದೆ ಪಾಲಿಸಿ.
ಸಿಂಹ
ಎರಡು ದೋಣಿಗೆ ಕಾಲು ಹಾಕಿರುವ ನಿಮ್ಮ ಜೀವನಶೈಲಿಯಿಂದ ಸಮಸ್ಯೆಗಳು ಎದುರಾಗಬಹುದು. ಆರ್ಥಿಕ ವಿಚಾರದಲ್ಲಿ ಅತ್ಯಂತ ಉದಾರತೆ ತೋರಿ ಸಮಸ್ಯೆಯನ್ನು ಸೃಷ್ಟಿಸಿಕೊಳ್ಳಬೇಡಿ.
ಕನ್ಯಾ
ಸಹೋದ್ಯೋಗಿಗಳು ಸಹಕಾರ ನೀಡಿದರೂ ಸ್ವಾರ್ಥ ಮನೋಭಾವವನ್ನು ಹೊಂದಿರುತ್ತಾರೆ. ತರಕಾರಿ ಮತ್ತು ಹಣ್ಣು ವ್ಯಾಪಾರಿಗಳಿಗೆ ಜೋರಿನ ವ್ಯಾಪಾರ ಇರುವುದು. ವ್ಯವಹಾರಿಕ ಒಪ್ಪಂದ ಮುರಿದು ಬೀಳದಂತೆ ಎಚ್ಚರವಹಿಸಿ.
ತುಲಾ
ಸಂಶೋಧನಾ ಕಾರ್ಯಗಳಲ್ಲಿ ಆಸಕ್ತಿ ವೃದ್ಧಿಯಾಗುವುದು ಅಥವಾ ಸಂಶೋಧನಾ ವೃತ್ತಿಯಲ್ಲಿರುವವರಿಗೆ ಅಧ್ಯಯನಕ್ಕೆ ಸುಸಮಯ. ಸಜ್ಜನರ ಒಡನಾಟದಿಂದ ಮನಸ್ಸಿಗೆ ನೆಮ್ಮದಿ ಇರುವುದು.
ವೃಶ್ಚಿಕ
ಬಿರುಕು ಬಿಟ್ಟಿರುವ ಸಂಬಂಧಗಳನ್ನು ಸರಿಪಡಿಸುವ ಆಲೋಚನೆಯ ಮಾರ್ಗಕ್ಕೆ ಪುನಃ ಅಡೆತಡೆ ಉಂಟಾಗಬಹುದು. ಪ್ರೀತಿ ಪಾತ್ರರೊಂದಿಗೆ ಕಳೆಯುವ ಸಮಯವು ಹಿಂದಿನ ಲವಲವಿಕೆಯನ್ನು ಪುನಃ ಮೂಡಿಸುತ್ತದೆ.
ಧನು
ದಿನಸಿ ವರ್ತಕರಿಗೆ ಉತ್ತಮ ಲಾಭ ಪ್ರಾಪ್ತಿಯಾಗುವುದರ ಜೊತೆಗೆ ಹೊಸ ವ್ಯಾಪಾರಿಗಳ ಬಳಕೆಯಾಗುವುದು. ಸ್ನೇಹಿತರ ಹಾಗೂ ಕುಟುಂಬದವರ ಸಲಹೆ ಮೇರೆಗೆ ಕೆಲವು ಉತ್ತಮ ಬದಲಾವಣೆಗಳನ್ನು ಮಾಡಿಕೊಳ್ಳುವಿರಿ.
ಮಕರ
ನ್ಯಾಯಾಲಯದ ಮೆಟ್ಟಿಲನ್ನು ಏರುವ ವಿಚಾರಗಳು ನಡೆಯದಂತೆ ಎಚ್ಚರವಹಿಸಿ. ಬದುಕಿನಲ್ಲಿ ನಡೆಯುತ್ತಿರುವ ಅನೇಕ ಸಮಸ್ಯೆಗಳಿಗೆ ಮೂಲ ಏನೆಂಬುದನ್ನು ಕಂಡುಕೊಂಡರೆ ಪರಿಸ್ಥಿತಿಯು ಸುಧಾರಿಸುವುದು.
ಕುಂಭ
ನೀರಿಗೆ ಸಂಬಂಧಿಸಿದ ಸರ್ಕಾರದ ಬೃಹತ್ ಯೋಜನೆಗಳ ಗುತ್ತಿಗೆ ಕೆಲಸಗಳನ್ನು ಪಾಲುದಾರಿಕೆಯಲ್ಲಿ ಪಡೆಯುವುದಕ್ಕೆ ಪ್ರಯತ್ನ ಮಾಡಿ. ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾದಾಗ ಭವಿಷ್ಯದ ಬಗ್ಗೆ ದೃಷ್ಟಿ ಇರಲಿ.
ಮೀನ
ವೈಯಕ್ತಿಕ ವಿಚಾರಗಳನ್ನು ಸಮಾಧಾನಕ್ಕಾಗಿ ಆಪ್ತರೊಬ್ಬರಲ್ಲಿ ಹೇಳಿಕೊಳ್ಳಲೇ ಬೇಕಾದ ಸಂದರ್ಭ ಎದುರಾಗುವುದು. ವೃತ್ತಿ ಜೀವನಕ್ಕೆ ಸಂಬಂಧಿಸಿದಂಥ ಗುರಿಗಳನ್ನು ಈಡೇರಿಸಿಕೊಳ್ಳುವಲ್ಲಿ ಸಫಲರಾಗುವಿರಿ.
ADVERTISEMENT
ADVERTISEMENT