ದಿನ ಭವಿಷ್ಯ: ಈ ರಾಶಿಯವರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ
Published 1 ಜೂನ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಯಾವುದೇ ರೀತಿಯ ಒಪ್ಪಂದಗಳನ್ನು ಮಾಡಿಕೊಳ್ಳದಿರಲು ತೀರ್ಮಾನಿಸುವುದು ಲೇಸು. ದೇವರಲ್ಲಿನ ಶ್ರದ್ಧಾ ಭಕ್ತಿ ಅಧಿಕಗೊಳ್ಳಲಿದೆ. ವ್ಯವಹಾರಗಳಲ್ಲಿ ನುರಿತವರ ಸಲಹೆಗಳನ್ನು ಪಡೆದುಕೊಳ್ಳುವಿರಿ.
ವೃಷಭ
ಹೆಚ್ಚಿನ ಹೊಣೆಗಾರಿಕೆಯನ್ನು ಹೊರಲು ಸಿದ್ಧರಾಗಿರುವಿರಿ ಮತ್ತು ಶಕ್ತರಾಗಿರುವಿರಿ. ಕೌಶಲವನ್ನು ತೋರಲು ಹೆಚ್ಚಿನ ಅವಕಾಶಗಳು ಸಿಗಲಿವೆ. ತೆರಿಗೆಗೆ ಸಂಬಂಧಿತ ಕೆಲಸಗಳೆಲ್ಲವನ್ನೂ ಪೂರ್ಣಗೊಳಿಸಲು ಪ್ರಯತ್ನಿಸಿ.
ಮಿಥುನ
ಆಫೀಸಿನಲ್ಲಿಂದು ಕೆಲಸದ ವೇಗವನ್ನು ಹೆಚ್ಚಿಸಿಕೊಳ್ಳುವಿರಿ. ಸಮಯ ಮತ್ತು ಅನುಕೂಲತೆಯ ಮೇಲೆ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವಿರಿ. ಉತ್ಸಾಹದಿಂದ ಕಾರ್ಯ ಪ್ರವೃತ್ತರಾಗುವಿರಿ.
ಕರ್ಕಾಟಕ
ಸುಗಂಧ ದ್ರವ್ಯಗಳ ವ್ಯಾಪಾರದಿಂದ ಲಾಭ ಪಡೆಯುವಿರಿ. ಧೈರ್ಯದಿಂದ ಮುನ್ನಡೆದಲ್ಲಿ ಕಾರ್ಯಸಾಧನೆಯಾಗುತ್ತದೆ. ರಾಜಕೀಯ ದಲ್ಲಿರುವ ಮಹಿಳೆಯರು ಬಲಾಢ್ಯರಾಗಿ ಅಧಿಕಾರ ಪಡೆಯುವಂತಾಗಲಿದೆ.
ಸಿಂಹ
ಧಾರ್ಮಿಕವಾಗಿ ಇರುವವರಿಗೆ, ವೇದಾಧ್ಯಯನದಲ್ಲಿ ತೊಡಗಿರುವವರಿಗೆ ಇಂದು ಮಂತ್ರಸಿದ್ಧಿ ಆಗಬಹುದು. ಬೆಳ್ಳಿ ವಸ್ತುಗಳ ಮಾರಾಟಗಾರರು ಹೆಚ್ಚಿನ ಆದಾಯ ಗಳಿಸುವಿರಿ. ಮಕ್ಕಳಿಂದ ಅನಾವಶ್ಯಕ ಖರ್ಚು ಸಂಭವಿಸಲಿದೆ.
ಕನ್ಯಾ
ಮನೆಯಲ್ಲಿ ಸಂತೋಷ ತರುವಂತಹ ಶುಭ ಸಮಾರಂಭಗಳು ನಡೆಯುವುದು. ಎಲ್ಲವನ್ನೂ ಕಷ್ಟಪಟ್ಟು ಅಥವಾ ಇತರರ ಸಹಾಯದಿಂದ ಸಂಪಾದಿಸಿಕೊಳ್ಳಬೇಕಾಗುತ್ತದೆ. ಮಾನಸಿಕ ಖಿನ್ನತೆಯನ್ನು ದೂರಮಾಡಿ.
ತುಲಾ
ಹೊರ ದೇಶದಲ್ಲಿ ಉದ್ಯೋಗದ ಅನ್ವೇಷಣೆ ಮಾಡುವುದಕ್ಕೆ ಒಳ್ಳೆಯ ದಿನ. ರಾಜಕೀಯ ವ್ಯಕ್ತಿಗಳು ಇಂದು ಸಾಮಾಜಿಕ ಕಾರ್ಯಕ್ರಮದಿಂದ ಮತ್ತು ಮಾಧ್ಯಮದಿಂದ ದೂರ ಉಳಿಯುವ ಬಗ್ಗೆ ತೀರ್ಮಾನಿಸುವುದು ಒಳ್ಳೆಯದು.
ವೃಶ್ಚಿಕ
ಪ್ರಯಾಣ ಅಂದುಕೊಂಡಂತೆ ಸುಗಮವಾಗಿರುವುದಿಲ್ಲ, ಜೋಪಾನವಾಗಿರಿ. ಹಿಡಿತಕ್ಕೆ ಸಿಕ್ಕದೆ ಇರುವ ಕೆಲಸ ಗಳನ್ನು ಸಮರ್ಥವಾಗಿ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರುವಲ್ಲಿ ಯಶಸ್ವಿಯಾಗುವಿರಿ.
ಧನು
ಯಾವುದೇ ಕಾರಣಕ್ಕೂ ಸಾಲದ ರೂಪದಲ್ಲಿ ಹಣ ತೆಗೆದುಕೊಳ್ಳುವುದು ಸರಿಯಲ್ಲ. ಕಾರ್ಯದೊತ್ತಡ ಸದ್ಯಕ್ಕೆ ಕಡಿಮೆಯಾಗಿರುವಂತೆ ತೋರಿ ಮನಸ್ಸಿಗೆ ನಿರಾಳ. ರೈತರು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯುವಿರಿ.
ಮಕರ
ಸ್ವಂತ ಪ್ರಯತ್ನದಿಂದ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕಾರ್ಯ ನಿರ್ವಹಿಸುವ ಸದವಕಾಶ ಈ ದಿನ ಪ್ರಾಪ್ತಿಯಾಗಲಿದೆ. ಸದಾ ಕಾಲ ನಿಮ್ಮ ಸಕಾರಾತ್ಮಕ ನಡವಳಿಕೆಗಳಿಂದಾಗಿ ಲಾಭ ಕಂಡುಕೊಳ್ಳಲಿದ್ದೀರಿ.
ಕುಂಭ
ನಿಮ್ಮ ಅಭಿವೃದ್ಧಿಯನ್ನು ಸಹಿಸಲಾಗದ ಜನರ ಮಧ್ಯದಲ್ಲಿ ಜೀವನ ನಡೆಸಬೇಕಾಗುತ್ತದೆ. ಕೃಷಿಗೆ ಹೆಚ್ಚಿನ ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ನಿಮ್ಮ ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಮೀನ
ಹೊಸ ಕಟ್ಟಡ ನಿರ್ಮಾಣ ಕಾರ್ಯಗಳ ಒಪ್ಪಂದ ಏರ್ಪಟ್ಟು ಬಹಳ ಸಂತೋಷವಾಗುವುದು. ಮಾರ್ಗದರ್ಶನಕ್ಕೆ ಕೊರತೆ ಇರುವುದಿಲ್ಲ. ಮನೆಯಲ್ಲಿ ಹಣಕಾಸಿನ ವಿಷಯದಲ್ಲಿ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಿರಿ.