ಬೆಂಗಳೂರು: ಮಹಿಳೆಯರ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕಿಯಾಗಿದ್ದ ನಿಕಿ ಪ್ರಸಾದ್ ಅವರು ಇಲ್ಲಿ ನಡೆಯಲಿರುವ ಚೊಚ್ಚಲ ಕೆಎಸ್ಸಿಎ ಮಹಾರಾಣಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ಮೌಲ್ಯ ಗಳಿಸಿದರು.

ಮಂಗಳವಾರ ಇಲ್ಲಿ ನಡೆದ ಆಟಗಾರ್ತಿಯರ ಹರಾಜು ಪ್ರಕ್ರಿಯೆಯಯಲ್ಲಿ ನಿಕಿ ಪ್ರಸಾದ್ ಅವರನ್ನು ₹ 3.70 ಲಕ್ಷಕ್ಕೆ ಬೆಂಗಳೂರು ಬ್ಲಾಸ್ಟರ್ಸ್ ಖರೀದಿಸಿತು.

ಟೂರ್ನಿಯಲ್ಲಿ ಭಾಗವಹಿಸುವ ಒಟ್ಟು ಐದು ತಂಡಗಳೂ ತಲಾ 16 ಆಟಗಾರ್ತಿಯರನ್ನು ಖರೀದಿಸಿದವು. ಪ್ರತಿ ಫ್ರ್ಯಾಂಚೈಸಿಯು ತಲಾ ₹ 10 ಲಕ್ಷದ ಪರ್ಸ್ ಹೊಂದಿದ್ದವು. ಆಗಸ್ಟ್ 4ರಿಂದ 10ರವರೆಗೆ ಮಹಾರಾಣಿ ಟ್ರೋಫಿ ಟೂರ್ನಿಯು ನಡೆಯಲಿದೆ. ಲೀಗ್ ಹಂತದ ಪಂದ್ಯಗಳು ಆಲೂರಿನಲ್ಲಿರುವ ಕೆಎಸ್ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಫೈನಲ್ ಪಂದ್ಯ (ಆ 10) ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದೆ.

ಭಾರತ ತಂಡದಲ್ಲಿ ಆಡಿರುವ ಶುಭಾ ಸತೀಶ್ ಅವರನ್ನು ಮೈಸೂರು ವಾರಿಯರ್ಸ್ ತಂಡವು ₹ 3.10 ಲಕ್ಷ ಮತ್ತು ಮಿಥಿಲಾ ವಿನೋದ್ ಅವರನ್ನು ಶಿವಮೊಗ್ಗ ಲಯನೆಸ್ ತಂಡವನ್ನು ₹ 3 ಲಕ್ಷಕ್ಕೆ ಖರೀದಿಸಿದವು.

ಉಳಿದಂತೆ; ಬೆಂಗಳೂರು ಬ್ಲಾಸ್ಟರ್ಸ್ ತಂಡವು ನಿಕಿ ಅವರಲ್ಲದೇ, ಅದಿತಿ ರಾಜೇಶ್ (₹ 1.50 ಲಕ್ಷ), ಕಂಡಿಕುಪ್ಪಾ ಕಾಶ್ವಿ (₹ 1.55 ಲಕ್ಷ), ಚಾಂದಸೀ ಕೃಷ್ಣಮೂರ್ತಿ (₹ 70 ಸಾವಿರ) ಮತ್ತು ಪುಷ್ಪಾ ಕಿರೇಸೂರ್ (₹ 40 ಸಾವಿರ) ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಹುಬ್ಬಳ್ಳಿ ಟೈಗರ್ಸ್ ತಂಡವು; ಬಿ.ಜಿ. ತೇಜಸ್ವಿನಿ (₹1.50 ಲಕ್ಷ), ಭಾವಿಕಾ ರೆಡ್ಡಿ (₹ 1.10 ಲಕ್ಷ) ಹಾಗೂ ರಾಜೇಶ್ವರಿ ಗಾಯಕವಾಡ, ಶ್ರೇಯಾ ಚವ್ಹಾಣ ಮತ್ತು ಕೃಷಿಕಾ ರೆಡ್ಡಿ ಅವರಿಗೆ ತಲಾ ₹ 1ಲಕ್ಷ ನೀಡಿತು.

ಮಂಗಳೂರು ಡ್ರ್ಯಾಗನ್ಸ್ ಫ್ರ್ಯಾಂಚೈಸಿಯು ಲಿಯಾಂಕಾ ಶೆಟ್ಟಿ (₹ 2. 25 ಲಕ್ಷ), ಪ್ರತ್ಯೂಷಾ ಕುಮಾರ್ (₹1.80ಲಕ್ಷ) ಮತ್ತು ಸಿ.ಯು. ಇಂಚರಾ (₹1.55 ಲಕ್ಷ), ಕಾರ್ಣಿಕಾ ಕಾರ್ತಿಕ್ (₹ 1.25ಲಕ್ಷ) ಮತ್ತು ಪಿ. ಸಲೋನಿ (₹ 85 ಸಾವಿರ) ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಮೈಸೂರು ವಾರಿಯರ್ಸ್ ತಂಡವು ಶುಭಾ ಸತೀಶ್ (₹3.10 ಲಕ್ಷ), ಎನ್.ಜಿ. ಪ್ರಕೃತಿ (₹1.20 ಲಕ್ಷ), ಎಂ. ಪೂಜಾ ಕುಮಾರಿ (₹ 1.05ಲಕ್ಷ), ಸಹನಾ ಎಸ್ ಪವಾರ್ (₹ 1ಲಕ್ಷ) ಮತ್ತು ರಚಿತಾ ಹತ್ವಾರ್ (₹ 85 ಸಾವಿರ) ಅವರನ್ನು ಖರೀದಿಸಿತು.

ಶಿವಮೊಗ್ಗ ಲಯನೆಸ್ ತಂಡವು ಮಿಥಿಲಾ ವಿನೋದ್ (₹ 3 ಲಕ್ಷ), ಲಾವಣ್ಯ ಚಲನಾ (₹1.45 ಲಕ್ಷ), ರೋಶಿನಿ ಕಿರಣ್ (₹ 1.30ಲಕ್ಷ) ಮತ್ತು ಸೌಮ್ಯ ವರ್ಮಾ (₹ 1.05 ಲಕ್ಷ), ಶ್ರೀನಿಥಿ ಪಿ ರೈ (₹ 80 ಸಾವಿರ) ಅವರನ್ನು ಸೇರ್ಪಡೆ ಮಾಡಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.