ದಿನ ಭವಿಷ್ಯ: ಈ ರಾಶಿಯವರಿಗೆ ಗಣಪತಿಯ ಆರಾಧನೆಯಿಂದ ವಿಘ್ನ ನಿವಾರಣೆಯಾಗಲಿದೆ
Published 26 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವಿದ್ಯಾರ್ಥಿಗಳ ಮುಂದೆ ಪಾಠ ಮಾಡಲು ತೆರಳಿ ವಿಷಯಗಳು ಅದಲು ಬದಲು ಮಾಡಿಕೊಳ್ಳುವ ಸಾಧ್ಯತೆ ಇದೆ. ಪೂರ್ವತಯಾರಿ ಅಗತ್ಯ. ಮನೆಯಲ್ಲಿ ನಡೆಯುವ ಶುಭ ಸಮಾರಂಭಕ್ಕೆ ಪಿತೃ ಸಮಾನರಿಂದ ಆಶೀರ್ವಾದ ಸಿಗುವುದು.
ವೃಷಭ
ಮಕ್ಕಳ ಸರ್ವತೋಮುಖ ಚಟುವಟಿಕೆ ಮತ್ತು ವಿದ್ಯಾಭ್ಯಾಸ ಉತ್ತಮ ವಾಗಿದ್ದು, ಕುಟುಂಬದಲ್ಲಿ ಸುಖ-ಶಾಂತಿ ತುಂಬಿರುತ್ತವೆ. ದಾಂಪತ್ಯದಲ್ಲಿ ಹೊಂದಾಣಿಕೆಯಿಂದ ಜೀವನ ಹಸನವಾಗಲಿದೆ.
ಮಿಥುನ
ವಸ್ತ್ರವಿನ್ಯಾಸ ಸಲಹೆಗಾರರಿಗೆ ಪ್ರತಿಷ್ಠಿತ ಗಾರ್ಮೆಂಟ್ ಸಂಸ್ಥೆಯೊಂದ ರಲ್ಲಿ ಉದ್ಯೋಗ ಸಿಗುವ ಕುರುಹುಗಳು ಸಿಗುತ್ತವೆ. ಸಲಹೆ ಸೂಚನೆಗಳನ್ನು ಮೇಲಧಿಕಾರಿಗಳು ವ್ಯತ್ಯಾಸವಿಲ್ಲದೆ ಜಾರಿಗೆ ತಂದದ್ದಕ್ಕೆ ಸಂತೋಷವಾಗಲಿದೆ.
ಕರ್ಕಾಟಕ
ಮನರಂಜನೆಗಾಗಿ ದುಂದುವೆಚ್ಚ ಮಾಡಿ ಮುಂದಿನ ದಿನಗಳಲ್ಲಿ ಕೊರಗುವಂತೆ ಮಾಡಿಕೊಳ್ಳದಿರಿ. ಭೂಮಿ ಅಥವಾ ವಾಹನ ಖರೀದಿಯಲ್ಲಿ ಮೋಸ ಹೋಗುವ ಸಾಧ್ಯತೆ ಇದ್ದು, ಎಚ್ಚರವಿರಲಿ.
ಸಿಂಹ
ಸ್ನೇಹಪರ ಸ್ವಭಾವದಿಂದಾಗಿ ಕಾರ್ಯಕ್ಷೇತ್ರದಲ್ಲಿ ವೈಯಕ್ತಿಕ ಸ್ಥಾನಮಾನಗಳು ಲಭಿಸಲಿವೆ. ಎಲ್ಲವನ್ನು ಮಾಡಬಲ್ಲೆನೆಂಬ ಹುಮ್ಮಸ್ಸು ಅನುಭವದಿಂದ ಬಂದಿದೆ. ಸುಲಭವಾಗಿ ಕೆಲಸ ಪೂರೈಸುವಿರಿ.
ಕನ್ಯಾ
ದೈವಾನುಗ್ರಹ ನಿಮ್ಮ ಪಾಲಿಗೆ ಸಂಪೂರ್ಣವಿದ್ದು ತೊಂದರೆಗಳನ್ನು ನಿವಾರಿಸಿ ವೃತ್ತಿರಂಗದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಲು ಪೂರಕ. ಉದ್ಯೋಗ, ವ್ಯವಹಾರದಲ್ಲಿ ಪ್ರಗತಿ ಇರುವುದು.
ತುಲಾ
ಕುಟುಂಬದ ಸದಸ್ಯರಲ್ಲಿ ಆದಷ್ಟು ತಾಳ್ಮೆ-ಸಮಾಧಾನದಿಂದ ವರ್ತಿಸಬೇಕಾದೀತು. ಹೊಸ ಕಾರ್ಯಗಳ ಚಾಲನೆಗೆ ಸೂಕ್ತ ಸಮಯವಲ್ಲ. ಅವಿವಾಹಿತರಿಗೆ ಕಂಕಣ ಬಲ ಕೂಡಿ ಬರುವ ಯೋಗವಿದೆ.
ವೃಶ್ಚಿಕ
ಉದ್ಯೋಗ-ವ್ಯವಹಾರಗಳಲ್ಲಿ ತೊಂದರೆ ಕಂಡುಬರಬಹುದು. ಜಾಗ್ರತೆಯಿಂದಿರಿ. ಕೋರ್ಟು-ಕಚೇರಿ ಕಾರ್ಯಭಾಗದಲ್ಲಿ ಯಶಸ್ಸು ಪಡೆಯುವಲ್ಲಿ ತೊಡಕು ಇರಲಿದೆ. ಗಣಪತಿಯ ಆರಾಧನೆಯಿಂದ ವಿಘ್ನ ನಿವಾರಣೆ.
ಧನು
ಅತಿಯಾಗಿ ಪ್ರೀತಿಸುವ ಹಾಗೂ ಆದರಿಸುವ ಜನರೊಂದಿಗೆ ಕಾಲ ಕಳೆಯಲು ಸಕಾಲ. ವ್ಯಾಪಾರದ ವಿಚಾರದಲ್ಲಿ ಬದಲಾವಣೆ ಇದ್ದಲ್ಲಿ, ಅವರೊಂದಿಗೆ ಗಂಭೀರ ಚರ್ಚೆ ನಡೆಸಿ,ತೀರ್ಮಾನಕ್ಕೆ ಬನ್ನಿರಿ.
ಮಕರ
ಸರ್ಕಾರಿ ಉದ್ಯೋಗ ಅಥವಾ ಕೆಲಸಗಳು ನೆರವೇರಲಿವೆ. ಅಧ್ಯಾಪಕ ವರ್ಗದವರಿಗೆ ವಿಧ್ಯಾರ್ಥಿಗಳ ಮೇಲುಗೈಯಿಂದ ಸಂತೋಷ ಹಾಗೂ ಗೌರವ ಸಿಗುವುದು. ಮುಂದಾಲೋಚನೆ ಇಲ್ಲದೇ ಭರವಸೆಯನ್ನೂ ನೀಡಬೇಡಿ.
ಕುಂಭ
ಅವಕಾಶದ ಜೊತೆಯಲ್ಲಿ ಅದೃಷ್ಟವೂ ಪಾಲಿಗಿದೆ. ಯಾವುದೇ ಕೆಲಸ ಮಾಡುವ ಮುನ್ನ ಅದರ ಫಲಾಫಲಗಳನ್ನು ಅರಿತು ಕಠಿಣ ಪರಿಶ್ರಮದಿಂದ ಕಾರ್ಯನಿರ್ವಹಿಸಿದಲ್ಲಿ ಕಹಿಯ ಸನ್ನಿವೇಶಗಳು ಸಹಜ ಸ್ಥಿತಿಗೆ ಮರಳಲಿವೆ.
ಮೀನ
ಬಂಗಾರದ ಮೇಲಿನ ಹೂಡಿಕೆ ವಿಚಾರಗಳು ಮಹತ್ವ ಪಡೆಯುವುದು. ಸಮಾಜದಲ್ಲಿ ಹೆಸರು ಲಭಿಸುವುದರ ಜತೆಗೆ ಬೇಡಿಕೆ ಹೆಚ್ಚಾಗಲಿದೆ. ಕಾಲಿನ ನೋವು ನಿವಾರಣೆಗೆ ವ್ಯಾಯಾಮ, ತೈಲ ಲೇಪನ ನೆರವಾಗಲಿದೆ.