ಶುಕ್ರವಾರ, 31 ಅಕ್ಟೋಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ
Published 30 ಅಕ್ಟೋಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇನ್ನೊಬ್ಬರಿಗೆ ಮೋಸ ಮಾಡುವ ಮನಸ್ಥಿತಿ ದೂರಮಾಡಿಕೊಂಡು ಜೀವನ ನಡೆಸಿ, ಅದರಿಂದಾಗಿ ನಿಮಗೆ ಶ್ರೇಯಸ್ಸು ಪ್ರಾಪ್ತಿಯಾಗುವುದು. ಸಜ್ಜನರ ಭೇಟಿಯಾಗಲಿದೆ. ಗೃಹ ನಿರ್ಮಾಣದ ಆರಂಭಕ್ಕೆ ದಿನ ನಿಶ್ಚಯ.
ವೃಷಭ
ಸವಿತೃ ಸೂರ್ಯ ನಾರಾಯಣನಿಗೆ ನಮಸ್ಕರಿಸುವುದರಿಂದ ಮನಸ್ಸಿನಲ್ಲಿ ಯಾವುದೇ ಗೊಂದಲಗಳಿಗೆ ಆಸ್ಪದಗಳಿರುವುದಿಲ್ಲ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾದ ಕೆಲಸಗಳು ದೊರೆಯಲಿವೆ.
ಮಿಥುನ
ಕೆಲಸಗಳನ್ನು ಶ್ರದ್ಧೆಯಿಂದ ಮಾಡಿ ಮುಗಿಸುವಿರಿ. ಮುಂದಾಳತ್ವವಿರುವ ಸಾಮಾಜಿಕ ಚಟುವಟಿಕೆಯಲ್ಲಿ ಅಡ್ಡಿ-ಆತಂಕಗಳು ಎದುರಾಗಲಿವೆ. ಗೆಳೆಯರ ಒತ್ತಾಯದಿಂದ ಸಂಘ-ಸಂಸ್ಥೆ ಅಥವಾ ರಾಜಕೀಯಕ್ಕೆ ಸೇರುವಿರಿ.
ಕರ್ಕಾಟಕ
ವಾಹನ ರಿಪೇರಿಯಂಥ ವಿಚಾರದಲ್ಲಿ ಅಧಿಕ ಖರ್ಚು ಸಂಭವಿಸಲಿದೆ. ವಿದ್ಯಾರ್ಥಿಗಳು ಉದಾಸೀನ ಮಾಡದೆ ಶಾಲಾ ತರಗತಿಯಲ್ಲಿ ಭಾಗವಹಿಸಿ. ಗುರುಗಳ ಮಾತನ್ನು ಮೀರುವುದರಲ್ಲಿ ಶ್ರೇಯಸ್ಸು ಇರುವುದಿಲ್ಲ.
ಸಿಂಹ
ಮಾತನ್ನು ತಿರಸ್ಕರಿಸಿ ಬೇರೆಯ ಮಾರ್ಗವನ್ನು ಹಿಡಿದಂಥ ಮಕ್ಕಳು ಪಶ್ಚ್ತಾತಾಪ ಪಡುವರು. ಮಕ್ಕಳ ಓದಿಗೆ ಅಡ್ಡಿಯಾಗಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ ನೆಮ್ಮದಿ ಮೂಡುತ್ತದೆ. ನೂತನ ವಸ್ತ್ರ ಖರೀದಿಯ ಯೋಗವಿದೆ.
ಕನ್ಯಾ
ವೃತ್ತಿಯಲ್ಲಿ ಬದಲಾವಣೆ ಮಾಡುವವರು ಲಕ್ಷ್ಮಿ ಸಮೇತನಾದ ಶ್ರೀನಿವಾಸ ದೇವರ ಸೇವೆಯನ್ನು ಮಾಡುವುದರಿಂದ ಅಭಿವೃದ್ಧಿಯನ್ನು ಕಾಣಬಹುದು. ಮನೆಯಲ್ಲಿ ದೇವತಾಕಾರ್ಯ ಮಾಡುವ ತೀರ್ಮಾನ ಮಾಡಿರಿ.
ತುಲಾ
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ನಿಮ್ಮ ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ವ್ಯಾಪಾರದಲ್ಲಿ ಮಿಶ್ರಫಲವಿರುವುದು.
ವೃಶ್ಚಿಕ
ಆನುವಂಶಿಕ ಬಹುಕಾಲದ ಬೇಡಿಕೆಯೊಂದು ಈಡೇರುವುದರಿಂದ ನೆಮ್ಮದಿ ಸಿಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ನಂಬಿಕೆ ಪ್ರತಿಪಾದಿಸಲು ಅಂಜಿಕೆ ಬೇಡ.
ಧನು
ಸಂಪೂರ್ಣ ಜ್ಞಾನವನ್ನು ಹೊಂದದೆ ವಾದಿಸಿದ ವಿಷಯದಲ್ಲಿ ಹಾಸ್ಯಾಸ್ಪ ದರಾಗಬಹುದು. ವಸ್ತ್ರ ವಿನ್ಯಾಸ, ಚಿತ್ರಕಲೆ, ಕಥೆ-ಕವನಗಳ ಬರವಣಿಗೆಯಲ್ಲಿ ಆಸಕ್ತಿ ಮೂಡಲಿದೆ.
ಮಕರ
ಪ್ರಮುಖ ಗುರಿ ಸಾಧನೆಗಳಿಗೆ ಕುಟುಂಬ ವರ್ಗದವರಿಂದ ಒಳ್ಳೆಯ ಬೆಂಬಲ ಸಿಗುವುದು. ಮಲ್ಲಿಕಾರ್ಜುನನ ಅನುಗ್ರಹ ಸಂಪಾದಿಸಿದಲ್ಲಿ ಮತ್ತಷ್ಟು ಉತ್ತಮ ಫಲಗಳನ್ನು ಅನುಭವಿಸುವ ಯೋಗವಿದೆ.
ಕುಂಭ
ಸಣ್ಣ ಸಣ್ಣ ವಿಚಾರಗಳನ್ನು ದೊಡ್ಡ ದೊಡ್ಡ ಸಮಸ್ಯೆ ಮಾಡುವ ಮನಸ್ಥಿತಿಯನ್ನು ತಕ್ಷಣದಲ್ಲಿಯೇ ಬದಲಾಯಿಸಿಕೊಳ್ಳುವುದು ಉತ್ತಮ. ಕೆಲಸಗಳು ಮಂದಗತಿಯಲ್ಲಿ ಸಾಗಲಿವೆ.
ಮೀನ
ಕೃಷಿಕರು ಕೈ ಬಿಟ್ಟಿರುವ ಯೋಜನೆಗಳನ್ನು ಮತ್ತೆ ಮುಂದುವರಿಸುವ ಅವಕಾಶ ಬರಲಿದೆ. ಪೂರಕವಾದ ವಾತಾವರಣ ನಿರ್ಮಾಣವಾಗುವುದು. ಶ್ರಮಕ್ಕೆ ಹೋಲಿಸಿದರೆ ದುಪ್ಪಟ್ಟು ಸಂಪಾದನೆಯಾಗುವ ಯೋಗವಿದೆ.
ADVERTISEMENT
ADVERTISEMENT