
ನವಿ ಮುಂಬೈಯಲ್ಲಿ ಗುರುವಾರ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ಆಸೀಸ್ ಒಡ್ಡಿದ 339 ರನ್ ಗೆಲುವಿನ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಐದು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು.
(ಚಿತ್ರ ಕೃಪೆ:X/@BCCIWomen)

ಆಕರ್ಷಕ ಆಟವಾಡಿದ ಜೆಮಿಮಾ ರಾಡ್ರಿಗಸ್ ಅಜೇಯ ಶತಕ (127*, 134 ಎಸೆತ, 14 ಬೌಂಡರಿ) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅರ್ಧಶತಕ (89, 88 ಎಸೆತ, 10 ಬೌಂಡರಿ, 2 ಸಿಕ್ಸರ್) ಗಳಿಸಿ ಆತಿಥೇಯ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
(ಚಿತ್ರ ಕೃಪೆ:X/@BCCIWomen)

ಮಹಿಳಾ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಬೆನ್ನಟ್ಟಿದ ದಾಖಲೆಗೆ ಭಾರತ ಭಾಜನವಾಗಿದೆ.
(ಚಿತ್ರ ಕೃಪೆ:X/@BCCIWomen)

ಐಸಿಸಿ ಏಕದಿನ ವಿಶ್ವಕಪ್ ನಾಕೌಟ್ ಹಂತದಲ್ಲಿ (ಪುರುಷರ ವಿಭಾಗ ಸೇರಿದಂತೆ) 300ಕ್ಕೂ ಹೆಚ್ಚು ರನ್ ಇದೇ ಮೊದಲ ಬಾರಿಗೆ ಚೇಸ್ ಮಾಡಿದ ನಿದರ್ಶನ ಇದಾಗಿದೆ.
(ಚಿತ್ರ ಕೃಪೆ:X/@BCCIWomen)

341 ರನ್ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಗಳಿಸಿದ ಗರಿಷ್ಠ ಮೊತ್ತವಾಗಿದೆ.
(ಚಿತ್ರ ಕೃಪೆ:X/@BCCIWomen)

ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿರುವ ಭಾರತ ತಂಡವು ಮೂರನೇ ಬಾರಿಗೆ ವಿಶ್ವಕಪ್‌ನಲ್ಲಿ ಫೈನಲ್‌ಗೇರಿದ ಸಾಧನೆ ಮಾಡಿದೆ.
(ಚಿತ್ರ ಕೃಪೆ:X/@BCCIWomen)

ಈ ಹಿಂದೆ 2005 ಮತ್ತು 2017ರಲ್ಲಿ ಪ್ರಶಸ್ತಿ ಸುತ್ತು ತಲುಪಿತ್ತು.
(ಚಿತ್ರ ಕೃಪೆ:X/@BCCIWomen)

ಭಾನುವಾರ ನವಿ ಮುಂಬೈಯಲ್ಲಿ ನಡೆಯಲಿರುವ ಬಹುನಿರೀಕ್ಷಿತ ಫೈನಲ್ ಪಂದ್ಯದಲ್ಲಿ ಭಾರತ ತಂಡವು ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾದ ವಿರುದ್ದ ಸೆಣಸಲಿದೆ.
(ಚಿತ್ರ ಕೃಪೆ:X/@BCCIWomen)

ಇದೇ ಮೊದಲ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಇಂಗ್ಲೆಂಡ್ ಹೊರತಾದ ತಂಡಗಳು ಫೈನಲ್‌ನಲ್ಲಿ ಕಾಣಿಸಿಕೊಂಡಿವೆ.
(ಚಿತ್ರ ಕೃಪೆ:X/@BCCIWomen)

ಇದರೊಂದಿಗೆ ಆಸ್ಟ್ರೇಲಿಯಾ ತಂಡದ ಸತತ 15 ಪಂದ್ಯಗಳ ಗೆಲುವಿನ ಓಟಕ್ಕೆ ತೆರೆಬಿತ್ತು. ಆಸೀಸ್ ತಂಡವು ಕೊನೆಯದಾಗಿ 2017ರಲ್ಲಿ ಭಾರತ ವಿರುದ್ಧವೇ ಸೆಮಿಫೈನಲ್‌ನಲ್ಲಿ ಪರಾಭವಗೊಂಡಿತ್ತು.
(ಚಿತ್ರ ಕೃಪೆ:X/@BCCIWomen)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.