ದಿನ ಭವಿಷ್ಯ:ಈ ರಾಶಿಯವರು ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಹುರುಪನ್ನು ಕಾಣಲಿದ್ದೀರಿ
Published 1 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಒಡಹುಟ್ಟಿದವರ ಸಹಕಾರದಿಂದ ಮಾನಸಿಕ ನೆಮ್ಮದಿ ಪಡೆಯುವಿರಿ. ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ಸಾಮಾಜಿಕವಾಗಿ ಬದುಕಿನಲ್ಲಿ ಹೊಸ ಹುರುಪನ್ನು ಕಾಣಲಿದ್ದೀರಿ.
ವೃಷಭ
ವಿನಾಕಾರಣ ಅಲೆದಾಟದಿಂದ ಬೇಸರ ಪಡುವ ಅವಶ್ಯಕತೆ ಇಲ್ಲ. ಮಗಳಿಗೆ ಆತ್ಮೀಯರೊಬ್ಬರ ಸಹಾಯದಿಂದ ಉದ್ಯೋಗ ದೊರೆಯಲಿದೆ. ಸಾಧು–ಸಂತರ ದರ್ಶನ ಮಾಡುವಿರಿ.
ಮಿಥುನ
ಲೇವಾದೇವಿ ವ್ಯವಹಾರದಲ್ಲಿ ಅಡ್ಡಿ ಆತಂಕ ಎದುರಾದರೂ ದುರ್ಗಾದೇವಿಯ ಆರಾಧನೆಯಿಂದ ಸರಿಯಾಗುವುದು. ಆರೋಗ್ಯದ ವಿಚಾರದಲ್ಲಿ ಉದಾಸೀನತೆ ತೋರುವುದು ಸರಿಯಲ್ಲ.
ಕರ್ಕಾಟಕ
ಭಾತೃ ವರ್ಗದವರಲ್ಲಿ ಮೃದುವಾಗಿ ವರ್ತಿಸುವುದು ಒಳ್ಳೆಯದು. ಇದರಿಂದಾಗಿ ಹಲವು ಕಾರ್ಯಗಳು ಕೈಗೂಡಲಿವೆ. ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಅನುಕೂಲ ತೋರಿ ಬರುವುದು.
ಸಿಂಹ
ದೇಹದಲ್ಲಿ ವಾತದ ಬಾಧೆಯು ತುಸು ಉಪಶಮನವಾಗುವುದು. ವೃಥಾ ಅಲೆದಾಟದಿಂದ ಆಯಾಸ. ಕಾರ್ಯಕ್ಷೇತ್ರದಲ್ಲಿ ಕೆಲಸದ ಹೊರೆ ಬೆಟ್ಟದಂತೆ ಇರುವುದು. ಮಾನಸಿಕ ಶಾಂತಿ ಹೆಚ್ಚಾಗಲಿದೆ.
ಕನ್ಯಾ
ಸುಖ-ದುಃಖ, ಲಾಭ-ನಷ್ಟಗಳೆರಡೂ ಸಮಾನವಾಗಿದ್ದರೂ ಪ್ರತಿಷ್ಠಿತರ ಸಹಕಾರದಿಂದ ಸುಧಾರಣೆ ಕಂಡುಬರಲಿದೆ. ರೈತರಿಗೆ ಹೆಚ್ಚಿನ ಲಾಭಾಂಶ ಅದರಲ್ಲೂ ತೆಂಗಿನಕಾಯಿ ಬೆಳೆಗಾರರಿಗೆ ಅಧಿಕ ಬೆಲೆ ಕಂಡು ಬರುತ್ತದೆ.
ತುಲಾ
ಅಭಿವೃದ್ಧಿಯಲ್ಲಿ ಹಲವು ಅಡೆತಡೆಗಳು ಎದುರಾಗಲಿವೆ. ಸದಾಕಾಲ ಪಕ್ಕದಲ್ಲಿಯೇ ಇರುವ ಪರಿಚಿತರಿಂದ ವಂಚನಾ ಪ್ರಸಂಗ ಇರಲಿದೆ. ನೂತನ ಗೃಹ ನಿರ್ಮಾಣದ ಯೋಜನೆಗೆ ಯೋಚಿಸಬಹುದು.
ವೃಶ್ಚಿಕ
ದೈಹಿಕ ಸಹಾಯ ನಿರೀಕ್ಷಿಸಿದ ಕಡೆಯಿಂದ ದೊರಕಲಿದೆ. ಅಪರಿಚಿತರ ಹತ್ತಿರ ಗೌಪ್ಯ ವಿಚಾರಗಳನ್ನು ಹಂಚಿಕೊಳ್ಳಬೇಡಿ. ಹೊಸ ಜವಾಬ್ದಾರಿಗಳು ಅರಸಿ ಬರಲಿವೆ. ಹೊಸತನದಲ್ಲಿ ಜಯ ಕಾಣುವಿರಿ.
ಧನು
ಪ್ರೀತಿಸುವವರ ಮಾರ್ಗದರ್ಶನ ದೊರೆಯಲಿದ್ದು , ಹೊಸ ಚೈತನ್ಯ ತುಂಬಿಬರಲಿದೆ. ವೃತ್ತಿಯ ಪರವಾಗಿ ಬಹಳ ಮುಖ್ಯ ಕೆಲಸವನ್ನು ಮಾತ್ರ ಈ ದಿನ ಕೈಗೆತ್ತಿಕೊಳ್ಳಿ. ವಿವೇಕರಹಿತ ಕೆಲಸದಲ್ಲಿ ತೊಡಗಿಸಿಕೊಳ್ಳದಿರಿ.
ಮಕರ
ಸರ್ಕಾರಿ ನೌಕರರಿಗೆ ನಾನಾ ರೀತಿಯಲ್ಲಿ ಅಡ್ಡಿ-ಆತಂಕಗಳು ಕಾಡಬಹುದು. ವ್ಯಕ್ತಿತ್ವವು ವಿಶೇಷವಾಗಿ ಆಕರ್ಷಿಸುವುದು. ಮಾನಸಿಕ ಒತ್ತಡ ಹೆಚ್ಚಾಗಿರುವುದು, ತಪ್ಪುಗಳು ಆಗದಂತೆ ಎಚ್ಚರವಹಿಸಿ.
ಕುಂಭ
ಅನಗತ್ಯ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕುವುದರಿಂದ ಆರ್ಥಿಕ ಸಂಕಷ್ಟ ಅರ್ಧದಷ್ಟು ಕಳೆಯುವುದು. ಧಾರ್ಮಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಿರಿ. ಸಂಜೆಯ ವೇಳೆ ಸಣ್ಣಮಟ್ಟಿನ ಪ್ರಯಾಣ ಸಂಭವಿಸಲಿದೆ.
ಮೀನ
ಅಧಿಕವಾದ ಆತ್ಮ ವಿಶ್ವಾಸದಿಂದ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸವನ್ನು ಮಾಡಲು ಹೋಗುವುದು ಸರಿಯಲ್ಲ. ಮಧ್ಯವರ್ತಿಗಳ ಸಹಾಯದಿಂದಾಗಿ ವಿವಾಹದ ವಿಷಯದಲ್ಲಿ ಅನುಕೂಲವಾಗಲಿದೆ.