ಬುಧವಾರ, 23 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ ದೊರೆಯಲಿದೆ
Published 22 ಜುಲೈ 2025, 22:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವೃತ್ತಿಭೂಮಿಕೆಯಲ್ಲಿ ಕೆಲವರು ನಾಯಕರಾಗುವ ಸಂಭವವಿದೆ. ಹಿತಶತ್ರುಗಳ ಮೇಲೆ ಗಮನವಿರಲಿ. ಹಣ್ಣು ಹಾಗೂ ತರಕಾರಿ ವ್ಯಾಪಾರಿಗಳಿಗೆ ಸರಕು ಸಾಗಣೆಯಲ್ಲಿ ತೊಂದರೆಗಳಾಗಬಹುದು. ಮುನ್ನೆಚ್ಚರಿಕೆ ತೆಗೆದುಕೊಳ್ಳಿ.
ವೃಷಭ
ಚಿತ್ರರಂಗಕ್ಕೆ ಸೇರಿದ ಕಲಾವಿದರಿಗೆ ವಿಭಿನ್ನವಾದ ಕಲೆ, ಸಾಮರ್ಥ್ಯದಿಂದ ದೊಡ್ಡ ಮಟ್ಟದ ಪ್ರಚಾರ ದೊರೆಯುವುದು. ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಗುರಿ ಮುಟ್ಟುವ ವಿಚಾರವಾಗಿ ಸವಾಲುಗಳು ಎದುರಾಗುತ್ತವೆ.
ಮಿಥುನ
ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಇರುವ ವ್ಯಕ್ತಿಗಳಿಗೆ ಮನೆಗೆ ಹೋಗಿಬರುವ ಅವಕಾಶ ಶೀಘ್ರ ಲಭಿಸಲಿದೆ. ವಿದ್ಯಾರ್ಥಿಗಳು ಓದಿನಲ್ಲಿ ಏಕಾಗ್ರತೆ ಸಾಧಿಸದಿದ್ದರೆ ಅಭ್ಯುದಯ ಅಸಾಧ್ಯ.
ಕರ್ಕಾಟಕ
ಮಾತಿನಲ್ಲಿ ಹಿಡಿತವಿರಲಿ. ನೀವಾಡಿದ ಮಾತುಗಳಲ್ಲಿ ನೀವೇ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಇದೆ. ಗೌರವವನ್ನು ಕಳೆದುಕೊಳ್ಳುವ ಲಕ್ಷಣವೂ ಇದೆ. ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆಯನ್ನು ಕಾಣಬಹುದು.
ಸಿಂಹ
ವಿಜ್ಞಾನ, ಶಿಕ್ಷಣ ಹಾಗೂ ಸಂಶೋಧನೆ ಕ್ಷೇತ್ರದಲ್ಲಿರುವ ವೃತ್ತಿಪರರು ಅಭಿವೃದ್ಧಿ ಕಾಣುವ ಲಕ್ಷಣಗಳಿವೆ. ವ್ಯಾಪಾರಕ್ಕೆ  ಬಂಡವಾಳ ಹೂಡುವಂತೆ ಮಗನಿಂದ ಒತ್ತಾಯ ಹೆಚ್ಚಲಿದೆ. ಬುದ್ಧಿವಂತಿಕೆಯಿಂದ ಬದುಕಬೇಕಾದ ದಿನ.
ಕನ್ಯಾ
ಧರ್ಮ ಕಾರ್ಯಗಳಿಗಾಗಿ ಧನ ವಿನಿಯೋಗಿಸುವ ಬಗ್ಗೆ ಯೋಚಿಸಿ. ವ್ಯಾಪಾರ, ವ್ಯವಹಾರಗಳಲ್ಲಿ ಪೈಪೋಟಿ ಎದುರಾಗಿ ಆತಂಕಕ್ಕೆ ಕಾರಣವಾಗಲಿದೆ. ಕಾರ್ಮಿಕರ ಬೇಡಿಕೆಗಳನ್ನು ಪೂರೈಸುವ ತೀರ್ಮಾನ ಅನಿವಾರ್ಯ.
ತುಲಾ
ರಾಜಕೀಯ ಭವಿಷ್ಯದಲ್ಲಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಪ್ರಯತ್ನ ನಡೆಸಿ. ಸಾಧಿಸಲೇಬೇಕೆಂಬ ಛಲವಿರುವವರಿಗೆಕಾರ್ಯಗಳೆಲ್ಲವೂ ಸಿದ್ಧಿಸಲಿವೆ.ಧನಾಗಮನದಲ್ಲಿ ವಿಳಂಬ. ಸಿದ್ಧಉಡುಪು ಮಾರಾಟಗಾರರಿಗೆ ಶುಭದಿನ.
ವೃಶ್ಚಿಕ
ವೈದ್ಯಕೀಯ ಖರ್ಚು ಹೆಚ್ಚಲಿದೆ. ಆದಾಯ ವೃದ್ಧಿಯೂ ವ್ಯಯಾಧಿಕ್ಯವೂ ಸಮತೋಲನವನ್ನು ಸಾಧಿಸುವುದು. ಅವಿವಾಹಿತರು ಬಾಳಸಂಗಾತಿಯನ್ನು ಪಡೆಯಲು ಧಾರ್ಮಿಕ ಮಾರ್ಗದಲ್ಲೂ ಯೋಚಿಸಿ.
ಧನು
ಪ್ರಾರಂಭಿಕ ಸಫಲತೆಯ ಬಗ್ಗೆ ಸಂತಸಗೊಳ್ಳುವಿರಿ. ಎಲ್ಲಾ ಕಾರ್ಯಗಳನ್ನು ಸಫಲತೆಗೆ ಮಾರ್ಪಡಿಸುವತ್ತ ಪ್ರಯತ್ನಿಸುವಿರಿ. ಈಶ್ವರನ ಆರಾಧನೆಯಿಂದ ಕೆಲಸದಲ್ಲಿ ತೊಡಕನ್ನುಂಟುಮಾಡುವ ಶತ್ರುಗಳ ಪ್ರಯತ್ನ ವಿಫಲವಾಗುವುದು.
ಮಕರ
ವಿದೇಶದಿಂದ ಶುಭ ಸಂದೇಶ ಬರಲಿದೆ. ಅನವಶ್ಯಕ ತಿರುಗಾಟ ಇದ್ದರೂ ರಿಯಲ್ ಎಸ್ಟೇಟ್ ಏಜೆಂಟರಿಗೆ ಅಧಿಕ ಲಾಭ. ತಾಯಿಯವರ ದೇಹಾರೋಗ್ಯ ತಪಾಸಣೆ ನಡೆಸಲು ವೈದ್ಯರನ್ನು ಸಂದರ್ಶಿಸುವುದು ಉತ್ತಮ.
ಕುಂಭ
ಹೊಸ ಜನರ ಸಂಪರ್ಕವು ಉತ್ತಮ ಧನಲಾಭ ತರಲಿದೆ. ಚರ್ಮದ ವಸ್ತುಗಳ ತಯಾರಿ ಅಥವಾ ಮಾರಾಟದಿಂದ ಲಾಭ ಬರಲಿದೆ. ಗಣ್ಯ ವ್ಯಕ್ತಿಗಳಿಗೆ ಸಮಾಜದಲ್ಲಿ ಅಥವಾ ರಾಜಕೀಯ ಕ್ಷೇತ್ರದಲ್ಲಿ ಗೌರವ ಲಭಿಸಲಿದೆ.
ಮೀನ
ದೇವರ ಕೃಪೆ ಹಾಗೂ ಹಿರಿಯರ ಆಶೀರ್ವಾದದಿಂದ ಸಮಸ್ಯೆಗಳಿಗೂ ಸುಲಭವಾಗಿ ಪರಿಹಾರ ಸಿಗಲಿದೆ. ಆಭರಣ ಅಥವಾ ಕಲಾವಸ್ತುಗಳನ್ನು ಖರೀದಿಸಲಿದ್ದೀರಿ. ನೂತನ ಸಂಸ್ಥೆಯೊಂದರಲ್ಲಿ ಉದ್ಯೋಗ ಪಡೆದುಕೊಳ್ಳುವಿರಿ.
ADVERTISEMENT
ADVERTISEMENT