ಗುರುವಾರ, 31 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ
Published 26 ಜುಲೈ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಉದ್ಯೋಗಕ್ಕಾಗಿ ನಡೆಸಿದ ಪ್ರಯತ್ನ ಈ ದಿನ ಫಲ ನೀಡಲಿದೆ. ಕೃಷಿಕರಿಗೆ ಹೆಚ್ಚಿನ ಬೆಳೆ ಕೈ ಸೇರುವ ನಿರೀಕ್ಷೆ ಇದೆ. ಸಹೋದರರಲ್ಲಿನ ಕೋರ್ಟು ವ್ಯವಹಾರಗಳನ್ನು ರಾಜಿ ಸಂಧಾನ ಮೂಲಕ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ.
ವೃಷಭ
ಕಿರಿಯರಿಗಾಗಿ ಹೆಚ್ಚಿನ ಖರ್ಚು– ವೆಚ್ಚಗಳು ಮಾಡುವಿರಿ. ಈ ದಿನ ಒಂದು ವಿಚಾರವನ್ನು ಆಳವಾದ ಅಧ್ಯಯನ ನಡೆಸಿ, ನಂತರದಲ್ಲಿ ತೀರ್ಮಾನ ತೆಗೆದುಕೊಳ್ಳುವುದು ಉತ್ತಮ. ರೋಗಬಾಧೆಯಿಂದ ಮುಕ್ತಿ ಸಿಗಲಿದೆ.
ಮಿಥುನ
ನಿಮ್ಮ ಕರ್ತವ್ಯದಲ್ಲಿ ಜವಾಬ್ದಾರಿಯ ಕೊರತೆ ಮೇಲಧಿಕಾರಿಗಳಿಗೆ ಎದ್ದು ಕಾಣಲಿದೆ. ವ್ಯಾಪಾರದ ವಿಚಾರದಲ್ಲಿ ಗಂಭೀರ ಚರ್ಚೆ ನಡೆಯುವುದು. ವಸ್ತ್ರ ವಿನ್ಯಾಸಗಾರರಿಗೆ ವಿಶೇಷವಾದ ಪರಿಣಿತಿಯು ಅಗತ್ಯವೆನಿಸಲಿದೆ.
ಕರ್ಕಾಟಕ
ಪೆಟ್ರೋಲಿಯಂ ಉತ್ಪನ್ನಗಳಿಂದ ಹೆಚ್ಚಿನ ಆದಾಯವಿದೆ. ಕೌಟುಂಬಿಕ ವಿಷಯಗಳತ್ತ, ಅದರಲ್ಲೂ ಮಡದಿಯ ಆರೋಗ್ಯದ ವಿಚಾರದಲ್ಲಿ ಹೆಚ್ಚು ಗಮನ‌ ನೀಡಿ. ಮಾನಸಿಕವಾಗಿ ಕುಗ್ಗದೇ ಧೈರ್ಯವಾಗಿರಿ.
ಸಿಂಹ
ಸಮಸ್ಯೆಗಳು ಬಗೆಹರಿಯುವುದು. ಎಲೆಕ್ಟ್ರಾನಿಕ್ ಕ್ಷೇತ್ರದಲ್ಲಿರುವವರಿಗೆ ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಆದಾಯವಿದೆ. ಹೆಚ್ಚಿನ ಪರಿಶ್ರಮದಿಂದ ಕೊರತೆಯನ್ನು ಹೋಗಲಾಡಿಸಿಕೊಳ್ಳಬಹುದು.
ಕನ್ಯಾ
ಮದುವೆ ಮುಂತಾದ ವಿಷಯಗಳತ್ತ ಗಮನಹರಿಸುವಂತೆ ಒತ್ತಡ ಬರಲಿದೆ. ಅಲಂಕಾರಿಕ ವಸ್ತುಗಳಿಗಾಗಿ ಹೆಚ್ಚು ಹಣ ವಿನಿಯೋಗಿಸುವಿರಿ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ದೊರೆಯುವುದು.
ತುಲಾ
ಪ್ರಾಚಾರ್ಯರಿಗೆ ಮತ್ತು ಸಲಹೆಗಾರರಿಗೆ ಹೆಚ್ಚಿನ ಅವಕಾಶಗಳು ಬರುವವು. ಸಹೋದರನ ವ್ಯಾಪಾರ ವಹಿವಾಟುಗಳ ವಿಚಾರಗಳಿಗೆ ಅಡ್ಡಿ ಮಾಡುವ ಬದಲು ಉತ್ತಮ ಸಲಹೆಗಳನ್ನು ನೀಡಿ.
ವೃಶ್ಚಿಕ
ಹೂಡಿಕೆ ವಿಚಾರದಲ್ಲಿ ಆಳವಾಗಿ ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಮಿತ್ರರಿಂದ ಸಲಹೆ ಬರುವುದು. ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡು ಬರಲಿದೆ. ನವ ದಂಪತಿಗಳಿಗೆ ಸಂತಾನ ಫಲ.
ಧನು
ದೈವಾನುಗ್ರಹದಿಂದ ಸಾಹಸ ಕಾರ್ಯಗಳು ಕೈಗೂಡಿ ಬಹುಮಟ್ಟಿಗೆ ನಿರೀಕ್ಷಿತ ಫಲ ಲಭಿಸಲಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮೇಲುಗೈ ಸಾಧಿಸುವಿರಿ. ಆಹಾರ ವ್ಯತ್ಯಾಸದಿಂದ ಅನಾರೋಗ್ಯ ಉಂಟಾಗಬಹುದು.
ಮಕರ
ಪ್ರಿಯ ವ್ಯಕ್ತಿಯೊಂದಿಗೆ ವಿಚಾರ ವಿನಿಮಯ ಸೂಕ್ತ ರೀತಿಯಲ್ಲಿ ಮಾಡಿಕೊಳ್ಳುವಿರಿ. ಭೂ ವ್ಯವಹಾರಗಳಿಂದ ಲಾಭ. ಇಂದು ಪಾಲುದಾರಿಕೆಯಂತಹ ವ್ಯವಹಾರದಲ್ಲಿ ತೀರ್ಮಾನ, ಒಪ್ಪಂದ ಕಾರ್ಯಗಳು ಸರಿಯಲ್ಲ.
ಕುಂಭ
ವೈಯಕ್ತಿಕ ವಿಚಾರಗಳಲ್ಲಿ ಸಣ್ಣ ಪುಟ್ಟ ಬದಲಾವಣೆಯಿಂದ ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವಿರಿ. ಗುರುಗಳ ಅನುಗ್ರಹದಿಂದ, ಹಿರಿಯರ ಉತ್ತೇಜನದಿಂದಾಗಿ ಕೆಲಸ ಕಾರ್ಯಗಳಲ್ಲಿ ಜಯ ಲಭಿಸುವುದು.
ಮೀನ
ನಿರುದ್ಯೋಗಿಗಳು ಹಂಗಾಮಿ ನೌಕರಿಯ ಬಗ್ಗೆ ಅಲೋಚಿಸುವುದು ಉತ್ತಮ. ಧನ ಆದಾಯಕ್ಕೆ ಯಾವುದೇ ಅಡ್ದಿಗಳು ಇರುವುದಿಲ್ಲ ಹಾಗೆಯೇ ವ್ಯಯವೂ ಸಹ ಅನಿವಾರ್ಯವಾಗುವುದು. ಮಹಾಲಕ್ಷ್ಮಿಯನ್ನು ಆರಾಧಿಸಿ.
ADVERTISEMENT
ADVERTISEMENT