ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಕಂಕಣ ಭಾಗ್ಯ ಕೂಡಿಬರಬಹುದು
Published 22 ಮೇ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಪರ ಊರಿಗೆ ಕಳುಹಿಸುವ ವಿಚಾರವೇ ಅರಗಿಸಿಕೊಳ್ಳಲಾಗದ ತುತ್ತಾಗುತ್ತದೆ. ಕೆಲಸಗಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಅನಿವಾರ್ಯ. ಮಾನಸಿಕ ನೆಮ್ಮದಿ ಇರುವುದು.
ವೃಷಭ
ಆರ್ಥಿಕ ಸಮಸ್ಯೆ ಎದುರಾಗಿ ಸಹೋದರರ ಅಥವಾ ಸಂಬಂಧಿಕರ ಸಹಾಯ ಕೇಳುವುದು ಅನಿವಾರ್ಯ. ಸೋದರ ಮಾವನ ಮಾತನ್ನು ಕೇಳಿ. ದೇಹದಲ್ಲಿನ ಅಧಿಕ ಉಷ್ಣಾಂಶದಿಂದ ದಂತವ್ಯಾಧಿ ಸಂಭವಿಸಬಹುದು.
ಮಿಥುನ
ಪ್ರಯಾಣದ ಪರಿಣಾಮ ದೇಹಾಯಾಸ ಹಾಗೂ ನೋವನ್ನು ಅನುಭವಿಸುವಿರಿ. ವೃತ್ತಿ ಬದಲಾವಣೆಯ ಸಮಸ್ಯೆ ನಿವಾರಣೆಯಾಗುವುದು. ಬಂಗಾರದ ಮೇಲಿನ ಧನ ಹೂಡಿಕೆಯಲ್ಲಿ ಲಾಭ ಆಗುವುದು.
ಕರ್ಕಾಟಕ
ತಪ್ಪುಗಳನ್ನು ತಿದ್ದಿಹೇಳುವಲ್ಲಿ ಹಿರಿಯ ಅಧಿಕಾರಿಗಳು ನೆರವಿಗೆ ನಿಲ್ಲುವರು. ದ್ವಿಚಕ್ರ ವಾಹನಗಳ ಮಾರಾಟಗಾರರು ಜೋರಿನ ವಹಿವಾಟು ನಡೆಸುವರು. ನಿತ್ಯದ ಹಣಕಾಸಿನ ಕೊರತೆ ಇರುವುದಿಲ್ಲ.
ಸಿಂಹ
ಐಹಿಕ ಸುಖಗಳನ್ನು ಆದಷ್ಟು ಬಿಟ್ಟುಬಿಡುವ ಮನಸ್ಥಿತಿ ಹಿರಿಯ ನಾಗರಿಕರಲ್ಲಿ ಉಂಟಾಗುತ್ತದೆ. ಸಂಧಾನ ಅಥವಾ ಮಧ್ಯಸ್ಥಿಕೆ ವಹಿಸುವಂತಹ ಕೆಲಸಗಳನ್ನು ಮಾಡುವಿರಿ. ಗೃಹಾಲಂಕಾರ ವಸ್ತುಗಳ ವ್ಯಾಪಾರದಿಂದ ಲಾಭ.
ಕನ್ಯಾ
ಉತ್ತಮ ಕೆಲಸ ನಿರ್ವಹಣೆಯಿಂದ ಬಡ್ತಿಯ ವಿಚಾರ ಸುಳಿದಾಡಿ  ಸಹೋದ್ಯೋಗಿಗಳ ಈರ್ಷ್ಯೆಗೆ ಕಾರಣವಾಗುತ್ತದೆ. ಬಾಲ ಕಲಾವಿದರಪ್ರದರ್ಶನಗಳು ಉತ್ತಮ ಹೆಸರನ್ನು ಗಳಿಸಿಕೊಡುವುದು.
ತುಲಾ
ಜೀವನದಲ್ಲಿ ಹೊಸ ರೀತಿಯ ಚಲನೆ ಇಲ್ಲದೆ ಬಂದ ಬೇಸರವು ದಿನಚರಿಯ ಬದಲಾವಣೆಯಿಂದ ನಿವಾರಣೆಯಾಗಬಹುದು. ಗುತ್ತಿಗೆದಾರರ ಹತ್ತಿರ ಗೃಹ ನಿರ್ಮಾಣದ ವಿಚಾರದಲ್ಲಿ ಪುನಃ ಪುನಃ ಪಾಠ ಕಲಿಯುವಿರಿ.
ವೃಶ್ಚಿಕ
ವಾಸಸ್ಥಾನದ ಬದಲಾವಣೆಯನ್ನು ಬಯಸಿದ ನಿಮಗೆ ಇಂದು ಹರ್ಷದ ಸಮಯ. ಬುದ್ಧಿವಂತಿಕೆಯನ್ನು ಉಪಯೋಗಿಸಿ  ಗ್ರಾಹಕರಲ್ಲಿ ವ್ಯವಹರಿಸಿದರೆ ಲಾಭದ ದಿನವಾಗುತ್ತದೆ.
ಧನು
ಪಾರಮಾರ್ಥಿಕವಾಗಿ ಸಾಧನೆಗಳೆಷ್ಟೇ ಇದ್ದರೂ ಸಮಾಜದಲ್ಲಿ ಬದುಕುವಾಗ ಲೌಕಿಕ ಜ್ಞಾನದ ಅಗತ್ಯ ಇದ್ದೇ ಇರಬೇಕೆಂಬುವುದನ್ನು ಸ್ಮರಿಸಿ. ಭೂಮಿ ಖರೀದಿ ವಿಚಾರ ಮುಂದಕ್ಕೆ ಹಾಕುವ ಪರಿಸ್ಥಿತಿ ಕಂಡುಬಂದೀತು.
ಮಕರ
ಸ್ನೇಹಿತನ ಕೆಲವು ಅನಿರೀಕ್ಷಿತ ನಡೆಗಳನ್ನು ಗುರುತಿಸಿ ಆತನ ಮಾನಸಿಕ ಖಿನ್ನತೆಯನ್ನು ಬೆಳಕಿಗೆ ತರುವಂಥ ಕೆಲಸ ಮಾಡುವ ಸಾಧ್ಯತೆ ಇದೆ. ಮನಸ್ಸಿನ ನಾಗಾಲೋಟಕ್ಕೆ ಕಡಿವಾಣ ಹಾಕುವುದು ಉತ್ತಮ.
ಕುಂಭ
ಚಾರಣಿಗರಿಗೆ ಬಯಸಿದ ಸ್ಥಾನಕ್ಕೆ ತೆರಳುವ ಅವಕಾಶ ಸಿಗದೆ ಬಹಳ ಬೇಸರವಾಗುತ್ತದೆ. ವದಂತಿಗಳಿಗೆ ಕಿವಿಗೊಡದೆ  ಕೆಲಸವನ್ನು ನೀವು ಮುಂದುವರಿಸಿಕೊಂಡು ಹೋಗಿ. 
ಮೀನ
ಜನರ ಅಭಿಪ್ರಾಯವನ್ನು ಸಂಗ್ರಹಿಸಲು ಹೋಗಿ ಅದರಿಂದ ಅಪಮಾನಕ್ಕೊಳಗಾಗುವ ಸಾಧ್ಯತೆ ಇದೆ. ಪರೋಪಕಾರದ ಫಲ ಮತ್ತು ಆತ್ಮವಿಶ್ವಾಸ  ರಕ್ಷಿಸಲಿದೆ. ವಿವಾಹದಂತಹ ಶುಭಕಾರ್ಯಗಳ ನಿರೀಕ್ಷೆ ಮಾಡಬಹುದು.