ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಸಂಗಾತಿಯಿಂದ ಉಡುಗೊರೆ ದೊರೆಯಲಿದೆ
Published 25 ಮೇ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಅನುಷ್ಠಾನದ ಉತ್ತಮ ಫಲಗಳು ನಿಮ್ಮ ವರ್ಚಸ್ಸನ್ನು ಅಧಿಕಗೊಳಿಸುತ್ತದೆ. ವಿದ್ಯಾವಂತರಾಗಿದ್ದರು ಸಹ ಪ್ರಜ್ಞಾವಂತಿಕೆಯನ್ನು ಕಳೆದುಕೊಂಡರೆ ವಿದ್ಯೆಗೆ ಬೆಲೆ ಬರುವುದಿಲ್ಲ. ಅಭಿಮಾನಿಗಳ ಅಭಿಲಾಶೆಯನ್ನು ಕಡೆಗಣಿಸದಿರಿ.
ವೃಷಭ
ಇಂಜಿನಿಯರಿಂಗ್ ಮುಗಿಸುವ ಹಂತದ ವಿದ್ಯಾರ್ಥಿಗಳು ಪರದೇಶಕ್ಕೆ ಹೋಗುವುದಿದ್ದಲ್ಲಿ ಆದಷ್ಟು ಬೇಗ ಕೆಲವು ಕೋರ್ಸ್‌ಗಳನ್ನು ಮಾಡಿಕೊಳ್ಳುವ ಯೋಚನೆ ಮಾಡಿ. ಕೆಲಸದ ನಿರ್ವಹಣೆಯನ್ನು ಉತ್ತಮವಾಗಿ ಮಾಡುವಿರಿ.
ಮಿಥುನ
ನಿಮ್ಮ ಹರಿತವಾದ ಮಾತುಗಳು ಕೆಲವರ ತೇಜೋವಧೆಯನ್ನು ಮಾಡಬಹುದು ಆದರೆ ಅದಕ್ಕೆ ಅವಕಾಶವನ್ನು ಕೊಡದಿರಿ. ನಿಷ್ಠಾವಂತ ಸಂಗಾತಿಯಾಗಿರುವ ನಿಮಗೆ ಉಡುಗೊರೆ ದೊರೆಯುವ ಸಂಭವವಿದೆ.
ಕರ್ಕಾಟಕ
ಹಲವಾರು ಕೆಲಸಗಳಲ್ಲಿ ಅಡೆತಡೆ ಉಂಟಾಗುತ್ತಿರುವುದು ಜನ್ಮಸ್ಥಾನದ ದೇವರ ಹರಕೆಯನ್ನು ತೀರಿಸದ ಪ್ರಭಾವ ಇದ್ದಿರಬಹುದು. ಸಕಲ ವಿಘ್ನಗಳನ್ನು ಕಳೆದುಕೊಂಡು ಕಾರ್ಯಸಾಧನೆಗಾಗಿ ಗಣಪತಿಯನ್ನು ಪ್ರಾರ್ಥಿಸಿ.
ಸಿಂಹ
ಕೆಲವೊಂದು ವಿಷಯಗಳು ಹೀಗಾಗಬಹುದು ಎಂಬ ಅನುಭವ ನಿಮಗಾಗುತ್ತಿದ್ದರು ಸಹ ಆಗುವ ಅವಘಡವನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ. ಹೆಚ್ಚು ಜ್ಞಾನ ಪಡೆಯುವ ಮನಸ್ಸಿನಿಂದ ಪರ ಊರಿಗೆ ತೆರಳುವ ಸಾಧ್ಯತೆ ಇದೆ.
ಕನ್ಯಾ
ದಾಯದಿವರ್ಗದ ಜನರಿಗೆ ಅವರು ನಿಮ್ಮನ್ನು ಸತ್ಕರಿಸುವಷ್ಟು ಸತ್ಕಾರವು ಸಾಕಾಗುತ್ತದೆ. ನೀವು ಮಾಡಿದ ವ್ಯವಹಾರ ವಿಶ್ಲೇಷಣೆಗೂ ವಾಸ್ತವ ಪರಿಸ್ಥಿತಿಗೂ ಹಲವಾರು ವ್ಯತ್ಯಾಸಗಳು ಉಂಟಾಗಬಹುದು.
ತುಲಾ
ಪ್ರಾರ್ಥನೆಯನ್ನು ಮಾಡದೆ ಪ್ರಾರಂಭ ಮಾಡಿದ ಕೆಲಸಗಳಿಗೆ ಹಲವಾರು ವಿಘ್ನಗಳು ಬಂದೊದಗಬಹುದು. ಮಕ್ಕಳ ಆಟಿಕೆ ಸಾಮಾನು ಮಾರಾಟಗಾರರಿಗೆ ಲಾಭವಿದೆ. ನಿತ್ಯದ ಕೆಲಸ ಕಾರ್ಯಗಳಿಂದ ಸ್ವಲ್ಪ ಮುಕ್ತಿ ಸಿಗುವ ಅವಕಾಶವಿದೆ.
ವೃಶ್ಚಿಕ
ಮನೆಯಲ್ಲಿನ ಸಂತೋಷವು ಇಂದು ನಿಮ್ಮ ಅನಿರೀಕ್ಷಿತ ಭೇಟಿಯಿಂದ ಇಮ್ಮುಡಿಯಾಗುತ್ತದೆ. ಪುಷ್ಪವಿನ್ಯಾಸಕರ ಅಪರೂಪದ ಪುಷ್ಪ ಸಂಯೋಜನೆಯು ಪ್ರಸಿದ್ಧಿಯನ್ನು ಗಳಿಸುವುದು. ತವರಿನ ಸೆಳೆತ ಹೆಚ್ಚಾಗುತ್ತದೆ.
ಧನು
ಸಸ್ಯ ಶಾಸ್ತ್ರಜ್ಞರು ಶಿಲೀಂದ್ರಗಳ ಅಧ್ಯಯನ ನಡೆಸುವುದಿದ್ದಲ್ಲಿ ಮುಂಜಾಗ್ರತೆ ವಹಿಸಿ. ಅಮೂಲ್ಯವಾದ ವಸ್ತುವಿನ ಪ್ರಾಪ್ತಿಯಿಂದಾಗಿ ಸಂತೋಷ ಹೊಂದುವಿರಿ. ಊಟ ಉಪಹಾರಗಳನ್ನು ಇಂದು ಸ್ವಗೃಹದಲ್ಲಿ ಮಾಡಿ.
ಮಕರ
ಕೆಲವು ಕೆಲಸಗಳನ್ನು ನೀವೊಬ್ಬರೆ ಮಾಡಬಹುದೆಂದು ತಿಳಿದರು ಸಹ ಇತರರ ಸಹಾಯದಿಂದ ಕಡಿಮೆ ಸಮಯದಲ್ಲಿ ಮುಗಿಸಬಹುದೆಂಬುದನ್ನು ಕಂಡುಕೊಳ್ಳಿ. ಕುಲದೇವರ ದರ್ಶನ ಮಾಡುವ ಮನಸ್ಸಾಗಬಹುದು.
ಕುಂಭ
ಇಂದು ನೀವು ನಡೆಸಿದ ಅವಘಡವನ್ನು ಸರಿಪಡೆಸಿಕೊಂಡು ಮರೆಯಲು ಹೆಚ್ಚಿನ ಸಮಯ ಹಿಡಿಯಬಹುದು. ಸಹೋದರರ ನಡುವಿನ ವ್ಯಾಜ್ಯಗಳು ಮನೆಯಿಂದ ಹೊರಗೆ ಹೋಗುವುದು ಸರಿಯಲ್ಲ.
ಮೀನ
ಮೊಮ್ಮಗನ ವಯಸ್ಸಿಗೆ ಮೀರಿದ ಕೆಲವು ಆಟೋಟಗಳನ್ನು ನೋಡಿ ಮನಸ್ಸು ಪ್ರಫುಲ್ಲವಾಗುವುದು. ವ್ಯವಹಾರದ ಪಾರದರ್ಶಕತೆಯು ಶುಭ ತರುತ್ತದೆ. ಚರ್ಮ ಸಂಬಂಧಿ ತೊಂದರೆಗಳು ಪೀಡಿಸಬಹುದು.