ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಉನ್ನತ ಅಧಿಕಾರ ಸಿಗಲಿದೆ
Published 9 ಸೆಪ್ಟೆಂಬರ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ನಿಮ್ಮ ತಪ್ಪುಗಳಿಗೆ ಪಶ್ಚಾತ್ತಾಪ ಪಟ್ಟು ಸರಿ ಮಾಡಲು ಯತ್ನಿಸಿಕೊಳ್ಳುವ ಗುಣ ಇಂದು ಬೇಕಾಗುತ್ತದೆ. ಕೆಲಸಕ್ಕೆ ಸಂಬಂಧಪಟ್ಟಂತೆ ಪ್ರವಾಸ ಮಾಡುವ ಸಾಧ್ಯತೆಗಳಿರಬಹುದು.
ವೃಷಭ
ವೈದ್ಯ ವೃತ್ತಿಯಲ್ಲಿನ ಸಾಧನೆಗೆ ಸಾಮಾಜಿಕವಾಗಿ ಗೌರವವನ್ನು ಪಡೆದುಕೊಳ್ಳುವಿರಿ. ಗಾಯಕರು, ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರಿಗೆ ಹೊಸ ಅವಕಾಶಗಳು ದೊರೆಯಲಿವೆ. ಉನ್ನತ ಅಧಿಕಾರ ಸಿಗಲಿದೆ.
ಮಿಥುನ
ಸ್ನೇಹಿತರೊಂದಿಗೆ ಪ್ರವಾಸ ಮಾಡಬೇಕೆನಿಸಿದ್ದರೂ ಮುಂದೂಡುವುದು ಉತ್ತಮ. ಸಮರ್ಥಿಸಿಕೊಳ್ಳುವ ಮಾತುಗಳನ್ನು ಆಡುವಾಗ ನುಡಿಯಲ್ಲಿ ದಿಟ್ಟತನವಿರಲಿ. ಷೇರು ವ್ಯವಹಾರ ಲಾಭದಾಯಕ.
ಕರ್ಕಾಟಕ
ವೃತ್ತಿರಂಗದಲ್ಲಿ ತಿಳಿವಳಿಕೆಯಂತೆ ನಡೆಯಿರಿ, ಅನ್ಯರ ಮಾತಿಗೆ ಕಿವಿಗೊಡಬೇಡಿ. ಹೊಸ ಒಪ್ಪಂದಗಳನ್ನು ಒಪ್ಪಿಕೊಳ್ಳುವ ಮುನ್ನ ಅದರ ಸಾಧಕ ಬಾಧಕಗಳನ್ನು ಯೋಚಿಸಿ ಮುಂದುವರಿಯಿರಿ.
ಸಿಂಹ
ಖರೀದಿಸಿದ ನಿವೇಶನ ಈಗ ಮಾರುವುದಾದರೆ ಉತ್ತಮ ಬೆಲೆಗೆ ಮಾರಾಟ ಆಗುವುದು. ಸಮಯಕ್ಕೆ ಸರಿಯಾಗಿ ವರ್ತಿಸುವಂಥ ಬುದ್ಧಿವಂತಿಕೆ ತೋರುವಿರಿ. ಕಲಾವಿದರಿಗೆ ನೂತನ ಅವಕಾಶಗಳು ಅಧಿಕ ಮಟ್ಟದಲ್ಲಿ ಸಿಗಲಿದೆ.
ಕನ್ಯಾ
ನಿರ್ಮಲವಾದ ಮನಸ್ಸಿನಿಂದಾಗಿ ಎಷ್ಟೇ ಸಣ್ಣ ತಪ್ಪು ನಿಮ್ಮದಾದರೂ ಪಶ್ಚಾತ್ತಾಪ ಪಡುತ್ತೀರಿ. ಮಾಡುವ ಕೆಲಸಗಳೆಲ್ಲವೂ ನಿಮಗೆ ಸರಿಯಾಗಿಯೇ ಕಂಡರೂ ಅವೆಲ್ಲವೂ ಸರಿಯಾಗಿ ಇರುವುದಿಲ್ಲ.
ತುಲಾ
ಉತ್ತಮವಾದ ರೀತಿ ನೀತಿಗಳನ್ನು ಬೆಳೆಸಿಕೊಳ್ಳುವ ಮೂಲಕ ಶ್ರೇಯ ಸ್ಸನ್ನು ಕಾಣುವಿರಿ. ಕೆಲಸವನ್ನು ಬೇಗ ಮುಗಿಸಬೇಕೆಂಬ ಆತುರವು ಅಚಾತುರ್ಯ ಉಂಟುಮಾಡುವುದು. ಉದ್ಯೋಗದಲ್ಲಿ ಗೆಲುವು ದೊರೆಯಲಿದೆ.
ವೃಶ್ಚಿಕ
ಅತಿ ಆತ್ಮವಿಶ್ವಾಸದಿಂದಾಗಿ ತಪ್ಪು ನಿರ್ಧಾರಗಳನ್ನು ಕೈಗೊಳ್ಳುವಿರಿ. ಮನೆಯಲ್ಲಿ ಇರುವವರೆಲ್ಲರನ್ನೂ ಕೇಳದೆ ನಿರ್ಧಾರ ತೆಗೆದುಕೊಳ್ಳಬೇಡಿ. ಮಕ್ಕಳ ವಿಷಯವಾಗಿ ಮುಂಗೋಪಿಯಾಗುವಿರಿ.
ಧನು
ಉದ್ಯೋಗದಲ್ಲಿ ಸೆಣಸಾಡಲು ಬಂದವರ ಜತೆ ಕ್ರೀಡಾ ಸ್ಫೂರ್ತಿಯಂತೆ ಸ್ವೀಕರಿಸಿ ಸೆಣಸಾಡಿ. ಕಲಿಕೆಯಲ್ಲಿ ಉತ್ತಮ ಅಂಕಗಳನ್ನು ತೆಗೆಯಲು ಅಧಿಕ ಶ್ರಮ ಪಡಬೇಕಾಗುವುದು. ಸ್ತ್ರೀ ಸಂಬಂಧಿ ವ್ಯಾಜ್ಯಗಳು ಕಾಡಬಹುದು.
ಮಕರ
ರೇಷ್ಮೆ ಬೆಳೆಗಾರರಿಗೆ ಈ ಬಾರಿಯ ಬೆಳೆಯಿಂದ ಹೆಚ್ಚಿನ ಸಂತಸ ಮತ್ತು ಆದಾಯವಿರಿವುದು. ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳುವ ಕಾರಣದಿಂದ ತೂಕವನ್ನು ಕಡಿಮೆ ಮಾಡುಕೊಳ್ಳುವ ಸಾಹಸಕ್ಕೆ ಕೈಹಾಕುವಿರಿ.
ಕುಂಭ
ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳುವ ಮೂಲಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವಿರಿ. ಸೋದರಿಯ ಕುಟುಂಬದ ವಿವಾದಗಳು ಇತ್ಯರ್ಥಗೊಳ್ಳುವುದು. ಸ್ವಂತ ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುವಿರಿ.
ಮೀನ
ತಾರ್ಕಿಕ ಹಾದಿಯಲ್ಲಿ ಬರುವ ಭಾವನಾತ್ಮಕ ಆಲೋಚನೆಗಳನ್ನು ಬದಿಗೆ ಸರಿಸಿ. ದುಡುಕಿನ ಮಾತುಗಳು ಇತರರ ಮನಸ್ಸನ್ನು ನೋಯಿಸದಿರಲಿ. ಗುರಿ ಸಾಧಿಸಲು ಕೆಲ ಹೊಸ ಬದಲಾವಣೆಗಳು ಅನಿವಾರ್ಯ ಎನಿಸಲಿವೆ.
ADVERTISEMENT
ADVERTISEMENT