ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರಿಗೆ ಆಧ್ಯಾತ್ಮ ಚಿಂತನೆಗಳಿಂದ ನೆಮ್ಮದಿ ಪ್ರಾಪ್ತಿಯಾಗಲಿದೆ
Published 21 ಡಿಸೆಂಬರ್ 2023, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಹೊಸ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುವುದರಿಂದ ಕಾರ್ಯದಲ್ಲಿ ಜಯ ದೊರೆಯುವುದು. ಯಾವುದೇ ಕಾರಣಗಳಿಗೂ ಉದ್ಯೋಗ ಬದಲಾವಣೆಯ ಬಗ್ಗೆ ತೀರ್ಮಾನಿಸಬೇಡಿ. ಸಾಲಬಾಧೆ ಸ್ವಲ್ಪ ಮಟ್ಟಿಗೆ ತೀರಲಿದೆ.
ವೃಷಭ
ಸಹೋದ್ಯೋಗಿಗಳೊಡನೆ ಅಥವಾ ಆಪ್ತ ಸ್ನೇಹಿತರೊಡನೆ ಹಣಕಾಸಿನ ವ್ಯವಹಾರದಿಂದಾಗಿ ಸಂಬಂಧಕ್ಕೆ ಹುಳಿ ಹಿಂಡಿದಂತಾಗಲಿದೆ. ನಂಬಿಕೆಗಳನ್ನು ಪ್ರತಿಪಾದಿಸಲು ಅಂಜಿಕೆ ಬೇಡ.
ಮಿಥುನ
ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟವನ್ನು ಭರಿಸಬೇಕಾದ ಕ್ಲಿಷ್ಟ ಸಂದರ್ಭಗಳು ವ್ಯವಹಾರದಿಂದ ಹಿಂಬರುವ ಯೋಚನೆಗೆ ಮೂಲ ಕಾರಣ ಆಗುವುದು. ಅನಗತ್ಯ ಮಾತನ್ನು ಆಡುವುದರಿಂದ ನೆಮ್ಮದಿಗೆ ಭಂಗವಾಗಲಿದೆ.
ಕರ್ಕಾಟಕ
ಮನೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಲಿದೆ. ಅನಿರೀಕ್ಷಿತವಾಗಿ ಸಂಘ-ಸಂಸ್ಥೆಗಳ ಜವಾಬ್ದಾರಿಯ ಅಧಿಕಾರ ವಹಿಸಬೇಕಾಗುವುದು. ಮಾಟ-ಮಂತ್ರದ ಭೀತಿ ಎದುರಾಗಲಿದೆ.
ಸಿಂಹ
ಅಧಿಕಾರದಲ್ಲಿ ಸ್ಥಾನಮಾನ ಪಡೆಯಲು ಧಾರ್ಮಿಕ ಕಾರ್ಯಗಳನ್ನು ನಡೆಸುವುದು ಒಳ್ಳೆಯದು. ಖಾದಿ ಉದ್ಯಮದವರಿಗೆ ಸರ್ಕಾರದಿಂದ ಸಹಾಯ ಸೌಲಭ್ಯ ದೊರೆಯಲಿದೆ. ಮಕ್ಕಳನ್ನು ದೂರಮಾಡಿಕೊಳ್ಳಬೇಡಿ.
ಕನ್ಯಾ
ವಾಹನಗಳ ರಿಪೇರಿಯಂತಹ ಅಥವಾ ಯಂತ್ರಗಳ ರಿಪೇರಿಯಂತಹ ಕಾರಣದಿಂದ ಖರ್ಚು ಉದ್ಭವಿಸುವುದು. ಕುಟುಂಬದ ಮಾರ್ಗಸೂಚಕರ ಮಾರ್ಗಸೂಚಿಯಂತೆ ಕಳೆದು ಹೋಗಿದ್ದ ವಸ್ತುಗಳೂ ಸಹ ಪತ್ತೆಯಾಗುವುವು.
ತುಲಾ
ವಿವಾಹ ಸಂಬಂಧ ವರಾನ್ವೇಷಣೆಗೆ ತೊಡಗುವುದಕ್ಕೆ ಸೂಕ್ತವಾದ ದಿನ, ಸುಲಭವಾಗಿ ಪ್ರಾಪ್ತಿಯಾಗುವುದು. ಅಜೀರ್ಣದ ಸಮಸ್ಯೆಯಿಂದ ಜೀವನೋತ್ಸಾಹ ಕಳೆದುಕೊಂಡು ಆಲಸ್ಯ ಹೊಂದುವಿರಿ.
ವೃಶ್ಚಿಕ
ನಿಮ್ಮ ಒತ್ತಡದ ನಡುವೆಯೂ ಇತರರಿಗೆ ಸಹಾಯ ಮಾಡುವ ಮನಸ್ಥಿತಿ ಬೆಳೆಸಿಕೊಳ್ಳಿ. ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಹಣ ಇಂದು ನಿಮ್ಮ ಕೈ ಸೇರಲಿದೆ. ರಾಜಕೀಯದವರಿಗೆ ನಿರೀಕ್ಷಿತ ಕಾರ್ಯ ಸಾಧನೆ ತೃಪ್ತಿ ತರುತ್ತದೆ.
ಧನು
ಅಣ್ಣ-ತಮ್ಮಂದಿರ ವರ್ಗದವರ ಮನೆಯಲ್ಲಿನ ಶುಭಕಾರ್ಯಗಳಲ್ಲಿ ಜವಾಬ್ದಾರಿ ವಹಿಸುವಿರಿ. ಭೂ ಖರೀದಿ, ಗೃಹ ನಿರ್ಮಾಣ ಕೈಗೊಳ್ಳಲು ಉತ್ತಮವಾದ ಸಮಯ. ಯಂತ್ರೋಪಕರಣ ಮಾರಾಟದಿಂದ ಲಾಭ.
ಮಕರ
ಹಿರಿಯರ ಮಾರ್ಗದರ್ಶನದಂತೆ ಕೆಲಸಗಳನ್ನು ಮಾಡುವುದರಿಂದ ಅಡೆತಡೆಗಳು ಇರುವುದಿಲ್ಲ. ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಅಗತ್ಯ ವಸ್ತುಗಳ ಖರೀದಿಗೆ ಹಣ ವಿನಿಯೋಗ ಆಗುವುದು.
ಕುಂಭ
ನಿಮ್ಮ ಮನದಲ್ಲಿರುವ ಆಲೋಚನೆಗಳನ್ನು ಕಾರ್ಯರೂಪಕ್ಕೆ ಇಳಿಸಲು ಇಂದು ಸೂಕ್ತ ದಿನವಾಗಿದೆ. ಬಹುಕಾಲ ನೆನಪಿನಲ್ಲಿ ಉಳಿಯುವಂತಹ ಒಂದು ಮಧುರ ಘಟನೆ ಈ ದಿನ ನಿಮ್ಮ ಮನೆಯಲ್ಲಿ ನಡೆಯಲಿದೆ.
ಮೀನ
ನೀವು ಮಾಡಿದ ಪರೋಪಕಾರದ ಫಲ ತಕ್ಷಣದಲ್ಲಿಯೇ ಅನುಭವಕ್ಕೆ ಬರಲಿದೆ. ಆಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಪ್ರಾಪ್ತಿಯಾಗಲಿದೆ. ಅವಶ್ಯಕತೆಗಿಂತ ಹೆಚ್ಚಾಗಿ ಹಣ ಸಂಗ್ರಹವಾಗುವುದು.