ದಿನ ಭವಿಷ್ಯ: ದಾಖಲೆಯ ನಿರ್ವಹಣೆಯ ವಿಚಾರದಲ್ಲಿ ಕೆಲಸ ಪೂರ್ಣಗೊಳಿಸುವಿರಿ
Published 15 ಸೆಪ್ಟೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ತೃಪ್ತಿಕರ ಜೀವನ ನಡೆಸಲು ಬೇಕಾದ ಸಂಪಾದನೆಯ ಕೆಲಸ ಸಿಕ್ಕಿ ಸಂತೋಷ ಹೊಂದುವಿರಿ. ಸಂಸಾರ ನಿರ್ವಹಣೆಗೆ ಮತ್ತು ಹೆಂಡತಿಯ ಸಂತೋಷಕ್ಕಾಗಿ ಕೆಲವು ವಸ್ತುಗಳ ಖರೀದಿ ಮಾಡಬೇಕಾಗುವುದು.
ವೃಷಭ
ವ್ಯವಸ್ಥಾಪಕರ ಜತೆ ಧೈರ್ಯದ ಮಾತುಗಳು ಇಂದಿನ ಜವಾಬ್ದಾರಿಯನ್ನು ಉತ್ತಮ ಗುಣಮಟ್ಟದ್ದಾಗಿಸುತ್ತದೆ. ದೇವಸ್ಥಾನದ ಭೇಟಿ ಹಾಗೂ ದೇವರ ದರ್ಶನದಿಂದ ಮನಸ್ಸಿಗೆ ಸಂತಸವಾಗುವುದು.
ಮಿಥುನ
ಯಶಸ್ಸನ್ನು ಹೊಂದಲು ಕಠಿಣ ಪರಿಶ್ರಮ ಅಗತ್ಯ. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ತಿಳಿಯಲಿದೆ. ಅದೇ ಮಾರ್ಗದಲ್ಲಿ ನಡೆಯಿರಿ. ಫಲ ಸಿಗುವುದು. ಮನೆಯ ರಿಪೇರಿಗಾಗಿ ಖರ್ಚು ಸಂಭವಿಸಬಹುದು.
ಕರ್ಕಾಟಕ
ಕುಟುಂಬದ ಅಭಿವೃದ್ಧಿಗೆ ಅಂತಃಕಲಹ, ಹಿತಶತ್ರುಗಳ ಬಾಧೆಯು ಅನುಭವಕ್ಕೆ ಬರಲಿದೆ. ರೈತರು ತಳಿಯ ಬೆಳೆಯಿಂದ ಸಂತೋಷವನ್ನು ಹೊಂದುವರು. ಮಕ್ಕಳ ಪರೀಕ್ಷೆಯು ಸಮಸ್ಯೆಯಾಗದಿರಲಿ.
ಸಿಂಹ
ಸರ್ಕಾರಿ ಅಧಿಕಾರಿಗಳಿಂದ ಆಗಬೇಕಾದ ಕೆಲಸಗಳು ಸರಿಯಾಗಿ ಆಗುವ ಸಾಧ್ಯತೆಗಳು ಕಂಡುಬರುತ್ತವೆ. ಕಾರ್ಖಾನೆಯೊಂದನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳುವ ಅವಕಾಶಗಳು ಸ್ನೇಹಿತನ ಸಹಾಯದಿಂದ ಸಿಗಬಹುದು.
ಕನ್ಯಾ
ಪ್ರತಿಭೆಯ ಸಾಮರ್ಥ್ಯ ಬೆಳಕಿಗೆ ಬರಲಿದೆ. ಸೃಜನಶೀಲತೆಗೆ ಮನ್ನಣೆಯು ದೊರಕುವುದು. ಮನೆಯಲ್ಲಿ ಉದ್ವೇಗದ ವಾತಾವರಣ ಎದುರಾಗಬಹುದು. ಎಳ್ಳೆಣ್ಣೆ ದೀಪ ಹಚ್ಚುವುದರಿಂದ ಪಾಪ ಪರಿಹಾರವಾಗಲಿದೆ.
ತುಲಾ
ಕೊಡು-ಕೊಳ್ಳುವಿಕೆಗಳಿಂದ ಅಧಿಕ ಲಾಭವಿರುವುದು. ಉದ್ಯೋಗದಲ್ಲಿ ಒಳ್ಳೆಯ ಆಭಿವೃದ್ಧಿ ಹೊಂದುವಿರಿ. ಕಾರ್ಮಿಕ ಜನರಿಗೆ ಒಳ್ಳೆಯ ದಿನ. ಮನೆಯಲ್ಲಿ ಮಂಗಳಕಾರ್ಯಗಳು ನೆರವೇರುವ ಬಗ್ಗೆ ಸೂಚನೆ ಸಿಗಲಿದೆ.
ವೃಶ್ಚಿಕ
ಹಗಲು ರಾತ್ರಿ ಎಂದೆನ್ನದೆ ನೀವು ಪಟ್ಟ ಶ್ರಮವು ಉತ್ತಮ ಫಲವನ್ನು ಶೀಘ್ರ ನೀಡಲಿದೆ. ಆಪ್ತರು ಸಕಾಲಿಕ ನೆರವಿಗಾಗಿ ಧನ್ಯವಾದ ತಿಳಿಸುವರು. ದಾಖಲೆಯ ನಿರ್ವಹಣೆಯ ವಿಚಾರದಲ್ಲಿ ಕೆಲಸಗಳನ್ನು ಪೂರ್ಣಗೊಳಿಸುವಿರಿ.
ಧನು
ಕೋರ್ಟ್‌ನಲ್ಲಿ ನಡೆಯುತ್ತಿದ್ದ ವಾದ–ವಿವಾದಗಳು ಎಲ್ಲರಿಗೂ ಸರಿಯಾಗುವ ರೀತಿಯಲ್ಲಿ ಕೊನೆಗೊಳ್ಳಲಿವೆ. ತಂದೆ-ತಾಯಿಯ ಆರೋಗ್ಯದ ಕಡೆಗೆ ಗಮನ ಕೊಡುವುದು ಅನಿವಾರ್ಯ.
ಮಕರ
ಭಾವನೆಗಳಿಗೆ ಬೆಲೆ ಕೊಡದವರ ಎದುರು ದುಃಖಗಳನ್ನು ಹೇಳಿಕೊಳ್ಳುವುದರಿಂದ ಪ್ರಯೋಜನವಿರುವುದಿಲ್ಲ. ಪೂರ್ಣ ಮನಸ್ಸಿನಿಂದ ಮಾಡಿದಂಥ ಕಾರ್ಯಗಳು ಉತ್ತಮ ಫಲ ನೀಡುತ್ತವೆ.
ಕುಂಭ
ಉದ್ಯೋಗ ಕ್ಷೇತ್ರದಲ್ಲಿ ಬಂದಿರುವ ಸಮಸ್ಯೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ಪರಿಹಾರಗಳು ದೊರೆಯಲಿವೆ. ಉದ್ಯೋಗದಲ್ಲಿ ಸಣ್ಣದಾಗಿ ಬದಲಾವಣೆ ಕಂಡುಬರುವುದು. ಬೌದ್ಧಿಕ ಶಕ್ತಿಗೆ ಪುಷ್ಟಿ ದೊರೆಯಲಿದೆ.
ಮೀನ
ವೈಯಕ್ತಿಕ ಮನೋಭಾವವನ್ನು ಬದಲಿಸಿಕೊಳ್ಳುವಂತೆ ಆಗಲಿದೆ. ಹಣಕಾಸಿನ ವಿಚಾರದಲ್ಲಿ ಭವಿಷ್ಯದ ಕುರಿತು ಯೋಚಿಸಿ ನಿರ್ಧಾರ ಕೈಗೊಳ್ಳುವುದರಿಂದ ಮುಂದಿನ ದಿನಗಳು ನೆಮ್ಮದಿದಾಯಕವಾಗಿ ಇರುವುದು.