ದುಬೈ: ಪಥುಮ್ ನಿಸಾಂಕ (68; 44ಎ) ಅವರ ಅರ್ಧಶತಕದ ನೆರವಿನಿಂದ ಶ್ರೀಲಂಕಾ ತಂಡವು ಸೋಮವಾರ ನಡೆದ ಎರಡನೇ ಪಂದ್ಯದಲ್ಲಿ ನಾಲ್ಕು ವಿಕೆಟ್ಗಳಿಂದ ಅನನುಭವಿ ಹಾಂಗ್ಕಾಂಗ್ ತಂಡವನ್ನು ಮಣಿಸಿತು.

ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಹಾಂಗ್ಕಾಂಗ್ ನಿಝಕತ್ ಖಾನ್ (ಔಟಾಗದೇ 52) ಮತ್ತು ಅಂಶುಮನ್ ರಥ್ ಅವರ 48 (46 ಎ) ಉಪಯುಕ್ತ ಕೊಡುಗೆಯ ನೆರವಿನಿಂದ 4 ವಿಕೆಟ್ಗೆ 149 ರನ್ಗಳ ಸವಾಲಿನ ಮೊತ್ತ ಗಳಿಸಿತು. ಅದಕ್ಕುತ್ತರವಾಗಿ ಶ್ರೀಲಂಕಾ 18.5 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 153 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು.

3 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದ್ದ ಲಂಕಾ, ಸುಲಭವಾಗಿ ಗೆಲ್ಲುವತ್ತ
ಮುನ್ನಡೆಯುತ್ತಿತ್ತು. ಈ ನಡುವೆ 8 ರನ್ಗಳ ಅಂತರದಲ್ಲಿ 4 ವಿಕೆಟ್ ಕಳೆದು ಕೊಂಡಾಗ ಹಾಂಗ್ಕಾಂಗ್ ಪವಾಡದ ನಿರೀಕ್ಷೆಯಲ್ಲಿತ್ತು. ಆದರೆ, ವನಿಂದು ಅವರು (ಔಟಾಗದೇ 20; 9ಎ) ಲಂಕಾವನ್ನು ಗೆಲುವಿನ ದಡ ಸೇರಿಸಿದರು.

ಸ್ಕೋರುಗಳು

ಹಾಂಗ್ಕಾಂಗ್: 20 ಓವರುಗಳಲ್ಲಿ 4ಕ್ಕೆ149 (ಜೀಶಾನ್ ಅಲಿ 23, ಅಂಶುಮನ್ ರಥ್ 48, ನಿಝಕತ್ ಖಾನ್ ಔಟಾಗದೇ 52; ದುಷ್ಮಂತ ಚಮೀರ 29ಕ್ಕೆ2)

ಶ್ರೀಲಂಕಾ: 18.5 ಓವರ್ಗಳಲ್ಲಿ 6ಕ್ಕೆ 153(ಪಥುಮ್ ನಿಸಾಂಕ 68, ಕುಶಾಲ್ ಪೆರೇರಾ 20, ವನಿಂದು ಹಸರಂಗ ಔಟಾಗದೇ 20, ಯಾಸೀಂ ಮುರ್ತಾಝಾ 37ಕ್ಕೆ 2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.