ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ
Published 17 ಜೂನ್ 2024, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸಂಗೀತ ಕ್ಷೇತ್ರದಲ್ಲಿ ನೀವಂದುಕೊಂಡ ಸಾಧನೆ ಮಾಡಲಾಗದೆ ಮನಸ್ಸಿನಲ್ಲಿ  ದುಃಖವನ್ನು ಅನುಭವಿಸುವಿರಿ. ಉದ್ಯೋಗದಲ್ಲಿ ಸಿಗುವ ವರ್ಗಾವಣೆಯ ಅವಕಾಶಗಳನ್ನು ಯಾವ ಕಾರಣಕ್ಕೂ ಬಿಟ್ಟುಕೊಳ್ಳಬೇಡಿ.
ವೃಷಭ
ಉದ್ಯೋಗದಲ್ಲಿ ವೈಯಕ್ತಿಕ ಅನಿಸಿಕೆಯು ಉತ್ತಮ ರೀತಿಯಲ್ಲಿ ಸಹಕಾರಿ ಆಗುವುದು. ಅಪರೂಪದ ಅತಿಥಿಯ ಆಗಮನ ಸಂತೋಷ ತರಲಿದೆ. ನೆಂಟರಿಷ್ಟರ ಕೊಂಕು ಮಾತುಗಳಿಗೆ ಮುಖ ಬಾಡಬಹುದು.
ಮಿಥುನ
ಮಕ್ಕಳ ವಿಚಾರದಲ್ಲಿ ಭವಿಷ್ಯದ ದೃಷ್ಟಿಯಿಂದ ದೊಡ್ಡದು ಸಣ್ಣದು ಎಂಬ ಭೇದ ಮಾಡದೇ ತಕ್ಷಣ ಕಾರ್ಯೋನ್ಮುಖರಾಗುವುದು ಉತ್ತಮ.  ಉತ್ತಮ ವರ್ತನೆಯಿಂದ ಸಂತಸ ಉಂಟಾಗುವುದು.
ಕರ್ಕಾಟಕ
ಮಾತುಗಾರರಿಗೆ, ವಾಗ್ಮಿಗಳಿಗೆ, ಬೋಧಕ ವರ್ಗದವರಿಗೆ ವೃತ್ತಿಯಲ್ಲಿ ಮುಂಬಡ್ತಿ ಅಥವಾ ಸನ್ಮಾನಗಳು ದೊರಕಲಿವೆ. ಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ. ವ್ಯಾಪಾರದಲ್ಲಿ  ಮಿಶ್ರಫಲವಿರುವುದು.
ಸಿಂಹ
ನ್ಯಾಯಾಂಗ ವಿಭಾಗದ ವಿದ್ಯಾರ್ಥಿಗಳಿಗೆ ಓದಿನಲ್ಲಿ ಇಂದಿನಿಂದ ವಿಶೇಷ ಆಸಕ್ತಿ. ಪೂರ್ಣಾಯುವನ್ನು ಅನುಭವಿಸದೆ ಕುಟುಂಬಸ್ಥರು ನಿಧನರಾದದ್ದು ದುಃಖವಾಗುತ್ತದೆ. ಆರ್ಥಿಕ ಸಮಸ್ಯೆ ನಿದ್ದೆ ಕೆಡಿಸಲಿದೆ.
ಕನ್ಯಾ
ವೃತ್ತಿರಂಗದಲ್ಲಿ ಹೊಸ ಹೆಜ್ಜೆ ಇಡುವವರಿಗೆ ವಿದ್ಯಾರ್ಹತೆಗಿಂತ ಸ್ವ–ಪ್ರತಿಭೆ ಬಹಳ ಮುಖ್ಯ. ಮಕ್ಕಳ ಹಿತಾಸಕ್ತಿಗಳಿಗೆ ಹೆಚ್ಚು ಗಮನ ಕೊಡಿ. ಮಕ್ಕಳ ಅಗತ್ಯಗಳನ್ನು ಪೂರೈಸಿ.
ತುಲಾ
ರಾಜಕೀಯ ವರ್ಗದವರು ರಾಜಕಾರಣದ ತಂತ್ರಗಾರಿಕೆ ನಡೆಸುವುದು ಅಗತ್ಯ. ಹಣಕಾಸಿನ ವ್ಯಾಮೋಹ ತೊಂದರೆಗಳಿಗೆ ಕಾರಣವಾಗದಂತೆ ನೋಡಿಕೊಳ್ಳಿ. ಸ್ನೇಹಿತರ ಮಧ್ಯಸ್ಥಿಕೆಯಿಂದ ಪರಿಹಾರ .
ವೃಶ್ಚಿಕ
ಆನುವಂಶಿಕ  ಬೇಡಿಕೆಯೊಂದು ಈಡೇರುವುದರಿಂದ ಕೊಂಚ ನೆಮ್ಮದಿ ಸಿಗಲಿದೆ. ತಂದೆ ತಾಯಿ ಅಥವಾ ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ತಪಾಸಣೆ ಅಗತ್ಯವೆನಿಸಲಿದೆ. ನಂಬಿಕೆ ಪ್ರತಿಪಾದಿಸಲು ಅಂಜಬೇಡಿ.
ಧನು
ಪ್ರಯಾಣದಲ್ಲಿ ವಂಚನೆ, ನಷ್ಟದ ಪ್ರಸಂಗಗಳಿದೆ ಎಚ್ಚರಿಕೆಯಿಂದಿರಿ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ. ಉದ್ಯೋಗ ಬದಲಿಸುವ ವಿಚಾರದಲ್ಲಿ ಚೆನ್ನಾಗಿ ಯೋಚಿಸುವುದು ಉತ್ತಮ.
ಮಕರ
ಶ್ರದ್ಧೆ, ತಾಳ್ಮೆಯಿಂದ ಹಾಗೂ ಹಿಂದಿನ ಸೋಲು ಹೇಳಿಕೊಟ್ಟ ಪಾಠವನ್ನು ಪಾಲಿಸಿದರೆ ಕಾರ್ಯ ಸಿದ್ಧಿಯಾಗುವುದು.  ಅನವಶ್ಯಕವಾಗಿ ಮನಸ್ಸಿನಲ್ಲಿ ಇಟ್ಟುಕೊಂಡಿರುವ ಅನುಮಾನವನ್ನು ಪ್ರಥಮವಾಗಿ ತೆಗೆದುಹಾಕಿ.
ಕುಂಭ
ಜ್ಞಾನ ಸಂಪಾದನಾ ಮಾರ್ಗದಲ್ಲಿ ಉತ್ತಮ ಗುರುವಿನ ಕೊರತೆಯಿಂದಾಗಿ ವಿಳಂಬವಾಗುವ ಸಾಧ್ಯತೆ ಇದೆ. ಸಾಮಾಜಿಕ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ಆಗುತ್ತದೆ. ಆ ಮನೋಭಾವವೇ  ಗೆಲುವಿಗೆ ಕಾರಣ.
ಮೀನ
ತಿಂಗಳ ಕೊನೆಯಲ್ಲಿ ಅನುಭವಿಸಿದ ಹಣದ ಕಷ್ಟವನ್ನು ಇಂದು ಸಂಪೂರ್ಣವಾಗಿ ನಿವಾರಿಸಿಕೊಳ್ಳುವಿರಿ.  ಮನಸ್ಸಿಗೆ ಅಪಾರ ಸಂತಸ ದೊರಕಲಿದೆ. ಅಧಿಕಾರದ ಅನುಭವದಿಂದ  ಆತ್ಮಾಭಿಮಾನ ವೃದ್ಧಿಯಾಗಲಿದೆ.