ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ವಾರ ಭವಿಷ್ಯ: ಕೃಷಿ ಭೂಮಿಯನ್ನು ಕೊಳ್ಳಲು ಪ್ರಯತ್ನ ಪಡುವಿರಿ
Published 23 ಡಿಸೆಂಬರ್ 2023, 13:50 IST
ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
author
ಜ್ಯೋತಿಷ್ಯ ವಿಶಾರದ, ಮಾದಾಪುರ ಸಂಪರ್ಕ ಸಂಖ್ಯೆ: 8197304680
ಮೇಷ
ಬೇರೆಯವರು ನಿಮಗೆ ಗೌರವ ಕೊಡಬೇಕೆಂದು ಬಹಳ ನಿರೀಕ್ಷೆ ಮಾಡುವಿರಿ. ಒಳ್ಳೆಯ ಮಾತುಗಳನ್ನು ಆಡಿದರೂ ಅದರಲ್ಲಿನ ಕೆಲವು ವ್ಯಂಗ್ಯಗಳು ಬೇರೆಯ ವರಿಗೆ ಖಂಡಿತ ಘಾಸಿಮಾಡುವುದು. ಧನಾದಾಯವು ಅಗತ್ಯಗಳನ್ನು ಪೂರೈಸುತ್ತದೆ. ನಿಮ್ಮೆಲ್ಲಾಕೆಲಸಕಾರ್ಯ ಗಳಿಗೆ ಹಿರಿಯರು ಸಹಕಾರ ಕೊಡುವವರು. ಸಂಸಾರ ದಲ್ಲಿ ಸಂತೋಷಮಯ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಾಕಷ್ಟು ಯಶಸ್ಸು ಸಿಗುತ್ತದೆ. ಪಾದದಲ್ಲಿ ಇದ್ದ ನೋವುಗಳು ಜಾಸ್ತಿ ಆಗ ಬಹುದು.ಸಂಗಾತಿಯಆದಾಯದಲ್ಲಿ ಬಹಳಷ್ಟು ಏರಿಕೆ ಇದ್ದರೂ ಸಹ ಅಷ್ಟೇ ಖರ್ಚು ಇರುತ್ತದೆ.ಹರಿತವಾದ ಆಯುಧಗಳನ್ನು ಉಪಯೋಗಿಸುವವರು ಹೆಚ್ಚು ಎಚ್ಚರದಿಂದ ಉಪಯೋಗಿಸಿರಿ. ಕೆಲವೊಂದು ಗುಹ್ಯ ಕಾಯಿಲೆಗಳು ಶ್ವಾಸಕೋಶದ ತೊಂದರೆಗಳು ನಿಮ್ಮನ್ನು ಕಾಡಬಹುದು.
ವೃಷಭ
ವೈಯಕ್ತಿಕ ಗೌರವಕ್ಕಾಗಿ ಸಲ್ಲದ ಮಾತುಗಳು ಆಗಬಹುದು. ಧನದಾಯವು ಸ್ವಲ್ಪ ಕಡಿಮೆ ಇರುತ್ತದೆ. ನಿಮ್ಮ ನಡವಳಿಕೆಗಳಲ್ಲಿ ನಿಮ್ಮ ತಾಯಿಯ ವರ್ತನೆ ಪ್ರತಿಬಿಂಬಿತವಾಗಿರುತ್ತದೆ. ಸಣ್ಣಪುಟ್ಟ ಮಾತುಗಳು ಕಾವೇರಿದವಾತಾವರಣವನ್ನು ತರಬಹುದು.ವಿದ್ಯಾರ್ಥಿ ಗಳಿಗೆ ಅಧ್ಯಯನದಲ್ಲಿ ಸ್ವಲ್ಪಹಿನ್ನಡೆ ಇರುತ್ತದೆ. ಮೂತ್ರ ಸಂಬಂಧಿತ ಖಾಯಿಲೆಗಳು ಅಥವಾ ಗುಪ್ತಾಂಗಕ್ಕೆ ಸಂಬಂಧಿಸಿದ ಕಾಯಿಲೆಗಳಿರುವವರು ಹೆಚ್ಚು ಎಚ್ಚರ ವಹಿಸಿರಿ. ಸಂಗಾತಿಯ ಮಾತುಗಳು ಬಹಳ ಕಠಿಣ ವಾಗಿರುತ್ತದೆ. ಹಿರಿಯರ ಮಾರ್ಗವನ್ನು ಅನುಸರಿಸಿ ಅವರ ಹೆಸರಿಗೆ ಕೀರ್ತಿತರುವ ಯೋಗವಿದೆ.ಸರ್ಕಾರಿ ಕೆಲಸಕಾರ್ಯಗಳು ನಿಧಾನಗತಿಯನ್ನುಕಾಣಬಹುದು. ತಾಯಿಯಿಂದ ನಿಮಗೆ ಹೆಚ್ಚಿನ ಅನುಕೂಲಗಳು ದೊರೆಯುತ್ತವೆ. ವೃತ್ತಿಯಲ್ಲಿದ್ದ ತೊಂದರೆಗಳು ಕಡಿಮೆ ಯಾಗುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ.
ಮಿಥುನ
ನಿಮ್ಮ ವ್ಯಾಪಾರದ ಬಗ್ಗೆ ನಿಮಗೆ ನಂಬಿಕೆ ಇರುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿದ್ದು ಖರ್ಚುಹೆಚ್ಚಾಗುವ ಸಂದರ್ಭವಿದೆ. ನಿಮ್ಮ ನಡವಳಿಕೆ ಯನ್ನು ನಿಮ್ಮ ಸಂಗಾತಿ ಅನುಸರಿಸಿ ವ್ಯವಹಾರದಲ್ಲಿ ಪ್ರಮುಖ ಪಾತ್ರ ವಹಿಸುವರು. ಆಸ್ತಿಕೊಳ್ಳುವ ಯೋಗ ವಿದ್ದರೂ ಸಹ ಹಣದಸ್ಥಿತಿ ಮತ್ತು ದಾಖಲೆಗಳನ್ನು ಪರಿ ಶೀಲಿಸಿರಿ. ವಿದ್ಯಾರ್ಥಿಗಳಿಗೆ ಮಧ್ಯಮ ವರ್ಗದ ಫಲಿ ತಾಂಶವಿರುತ್ತದೆ. ಮಹಿಳೆಯರಿಗೆ ಹೆಚ್ಚು ಅಭಿವೃದ್ಧಿ ಇರುತ್ತದೆ. ಸಾಹಸ ಕಲಾವಿದರಗಳು ಸಾಹಸ ಕಾರ್ಯ ಮಾಡುವಾಗ ಹೆಚ್ಚು ಎಚ್ಚರ ವಹಿಸಿರಿ, ಅಪಘಾತಗಳಾ ಗುವ ಸಂದರ್ಭಗಳಿವೆ. ಸಂಗಾತಿಯ ಸಹಾಯದಿಂದ ಸರ್ಕಾರಿ ವ್ಯವಹಾರಗಳಲ್ಲಿ ಪಾಲು ದೊರೆಯುತ್ತದೆ.
ಕರ್ಕಾಟಕ
ನಿಮ್ಮ ಮನಸ್ಸಿನ ನಿಯಂತ್ರಣ ಹಾಗೂ ಚೇತನ ಎರಡು ನಿಮ್ಮ ಕೈಯಲ್ಲಿ ಇರುತ್ತದೆ. ಹಣದ ಒಳ ಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಮಂದಗತಿಯ ಲಾಭವಿರುತ್ತದೆ. ಸರ್ಕಾರಿ ವ್ಯವಹಾರಗಳಲ್ಲಿ ಲಾಭ ಕಡಿಮೆ ಇರುತ್ತದೆ. ಸ್ವಲ್ಪ ಆಲಸೀನಡವಳಿಕೆ ನಿಮ್ಮಲ್ಲಿ ಮೈದುಂಬಿರುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಲಾಭವಿರುತ್ತದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ಕೃಷಿ ಯಿಂದ ಹೆಚ್ಚಿನಲಾಭ ಒದಗುವಸಾಧ್ಯತೆ ಇದೆ.ಸರ್ಕಾರಿ ಸಾಲದ ವ್ಯವಹಾರಗಳಲ್ಲಿ ಮೋಸ ಹೋಗಬಹುದು, ಎಚ್ಚರವಹಿಸಿರಿ. ಸಂಗಾತಿಯ ನಡುವೆ ತಿಕ್ಕಾಟಗಳು ಆಗಬಹುದು.ಪಿತ್ರಾರ್ಜಿತ ಜಮೀನಿನ ವಿಚಾರವಾಗಿ ಸ್ವಲ್ಪ ತಗಾದೆಗಳು ಬರಬಹುದು. ಹಳೆಯ ಕಬ್ಬಿಣ ಗಳನ್ನು ಮಾರಾಟ ಮಾಡುವವರಿಗೆ ಲಾಭವಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಬಟ್ಟೆಯ ಮೇಲೆ ಕಸೂತಿ ಮಾಡುವವರಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆ ಆಗುತ್ತದೆ.
ಸಿಂಹ
ನಿಮ್ಮ ಬುದ್ಧಿವಂತಿಕೆ ಕೆಲಸ ಮಾಡಿ ಒಳ್ಳೆಯ ಹೆಸರು ಗಳಿಸುವಿರಿ. ಮಾತನಾಡುವಾಗ ಅದರ ಮಹತ್ವ ಅರಿತು ಮಾತನಾಡಿರಿ. ಸಹೋದರಿಯರಿಂದ ನಿಮಗೆ ಬಹಳ ಸಹಕಾರವಿರುತ್ತದೆ.ಕೃಷಿ ಭೂಮಿಯನ್ನು ಈಗ ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳಿಗೆ ಈಗ ಹೆಚ್ಚಿನ ಯಶಸ್ಸು ಇರುತ್ತದೆ. ಗಣಿತ ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಮೀರಿದ ಯಶಸ್ಸು ಇರುತ್ತದೆ. ಕೆಲವು ರಾಜಕೀಯ ನಾಯಕರುಗಳಿಗೆ ಸ್ವಲ್ಪ ಹಿನ್ನಡೆ ಉಂಟಾಗಬಹುದು. ಸಂಗಾತಿಯ ಜೊತೆ ಕಾವೇರಿದ ವಾತಾವರಣಗಳು ಆದರೂ ಸಹ ನಂತರ ಸರಿಯಾಗುತ್ತದೆ. ಕೆಲವು ಪಾಲುದಾರರು ನಿಮ್ಮ ಯೋಜನೆಗಳಿಗೆ ಪ್ರತಿ ರೋಧ ಒಡ್ಡುವಸಾಧ್ಯತೆ ಇದೆ. ವಾಹನ ಮಾರಾಟಗಾರರಿಗೆ ಮಾರಾಟದಲ್ಲಿ ನಿಧಾನಗತಿಯನ್ನುಕಾಣಬಹುದು. ವಾಹನ ದುರಸ್ತಿ ಮಾಡುವವರಿಗೆ ಕೆಲವೊಂದು ವಾಹ ನಗಳ ದುರಸ್ತಿಯೂ ಬಹಳ ಕ್ಲಿಷ್ಟವೆನಿಸಬಹುದು.
ಕನ್ಯಾ
ನಿಮ್ಮ ವರ್ತನೆಯಲ್ಲಿ ಸಾಕಷ್ಟು ದುರಹಂಕಾರ ವಿರುತ್ತದೆ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವ ಹತ್ತಿರಕ್ಕೆ ಬರುತ್ತದೆ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಗಮನ ಕೊಡುವಿರಿ. ಆಸ್ತಿ ವ್ಯವಹಾರ ಮಾಡುವವರಿಗೆ ಲಾಭವಿದೆ. ಸರ್ಕಾರಕ್ಕೆ ಜಮೀನು ಖರೀದಿ ಮಾಡಿ ಕೊಡುವವರಿಗೆ ಹೆಚ್ಚಿನ ಹಣ ದೊರೆ ಯುತ್ತದೆ. ಮಕ್ಕಳ ಏಳಿಗೆಯಲ್ಲಿ ನಿಧಾನ ಗತಿಯನ್ನು ಕಾಣಬಹುದು. ಅಜೀರ್ಣ ನಿಮ್ಮನ್ನು ಭಾದಿಸಬಹುದು. ವಿದೇಶದಲ್ಲಿರುವ ಸಂಗಾತಿಯನ್ನು ಈಗ ಹೋಗಿ ಸೇರಿ ಕೊಳ್ಳಬಹುದು. ವೃತ್ತಿಯಲ್ಲಿಸಂಗಾತಿಗೆ ಸಂಪಾದನೆ ಮಾಡುವ ಯೋಗವಿದೆ. ಆದಿರು ಮಾರಾಟಗಾರರಿಗೆ ಇದ್ದತೊಡಕುಗಳು ನಿವಾರಣೆಯಾಗುತ್ತವೆ.ತಾಯಿಯು ನಿಮ್ಮನ್ನು ಉಪೇಕ್ಷಿಸಬಹುದು. ವೃತ್ತಿಯಲ್ಲಿ ಸ್ಥಾನ ಮಾನದ ಬಗ್ಗೆ ಹಿನ್ನಡೆಯಾಗುವ ಸಂದರ್ಭವಿದೆ. ವೃತ್ತಿ ಯಲ್ಲಿಹಿರಿಯರಿಂದ ಸ್ವಲ್ಪಮಟ್ಟಿನ ಧನ ಸಹಾಯ ಆಗಬಹುದು.
ತುಲಾ
ಅಲಂಕಾರಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುವಿರಿ. ಮಾತಿನಲ್ಲಿ ಖಂಡಿತ ಒರಟುತನ ಬೇಡ. ಎಲ್ಲರನ್ನು ಆಕರ್ಷಿಸಲು ಪ್ರಯತ್ನಪಡುವಿರಿ. ನಿಮ್ಮ ನಡವಳಿಕೆಯಲ್ಲಿ ದ್ವಂದ್ವವಿರುತ್ತದೆ. ಕೃಷಿ ಭೂಮಿಯನ್ನು ಕೊಳ್ಳಲು ಪ್ರಯತ್ನ ಪಡುವಿರಿ. ವಿದ್ಯಾರ್ಥಿಗಳಿಗೆ ಅಷ್ಟು ಯಶಸ್ವಿ ಇರುವುದಿಲ್ಲ. ಸಂತಾನ ಅಪೇಕ್ಷಿತರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಕೀಲು ನೋವುಗಳು ಕೆಲವರನ್ನು ಕಾಡಬಹುದು.ಸಂಗಾತಿಯ ಕಡೆಯಿಂದ ಧನಸಹಾಯ ಇರುತ್ತದೆ. ಸಂಗಾತಿ ಕಡೆಯವರಿಂದ ನಿಮ್ಮ ಕೆಲಸ ಕಾರ್ಯಗಳಿಗೆ ಹೆಚ್ಚಿನ ಒತ್ತು ದೊರೆಯುತ್ತದೆ. ಒಡವೆ ಗಳನ್ನು ಮಾಡುವವರಿಗೆ ತಯಾರು ಮಾಡುವವರಿಗೆ ಮತ್ತು ವ್ಯಾಪಾರ ಮಾಡುವವರಿಗೆ ಅನಿರೀಕ್ಷಿತ ಲಾಭ ವಿರುತ್ತದೆ. ವ್ಯಾಪಾರದಲ್ಲಿ ಹಿರಿಯರ ಜಾಣತನವನ್ನು ತಿಳಿಯಲು ನಿಮಗೆ ಅವಕಾಶದೊರೆಯುತ್ತದೆ. ವೃತ್ತಿ ಯಲ್ಲಿ ಸ್ವಲ್ಪ ಏಳಿಗೆ ಇರುತ್ತದೆ, ಹಾಗೂ ವೇತನದ ಏರಿಕೆಯನ್ನು ಕಾಣಬಹುದು.
ವೃಶ್ಚಿಕ
ಕೃಷಿಕರಿಗೆ ಬಹಳ ಲಾಭವಿರುತ್ತದೆ. ಕ್ರೀಡಾಪಟು ಗಳಿಗೆ ಸಿಗಬೇಕಾಗಿದ್ದ ಸೂಕ್ತ ಸೌಲಭ್ಯ ಮತ್ತು ಸಹಾಯ ಧನಗಳು ಸಿಗುತ್ತವೆ. ಸೈನ್ಯದಲ್ಲಿನ ಹಿರಿಯ ಅಧಿಕಾರಿಗ ಳಿಗೆ ಹೆಚ್ಚಿನಸ್ಥಾನ ಸಿಗುತ್ತದೆ. ಪೋಲಿಸ್ ಇಲಾಖೆಯಲ್ಲಿ ರುವವರು ಪ್ರಮುಖ ವ್ಯಕ್ತಿಯ ಹುಡುಕಾಟದಲ್ಲಿ ಈಗ ಯಶಸ್ವಿಯಾಗುವರು. ಕೃಷಿ ಭೂಮಿಯನ್ನು ವಿಸ್ತರಣೆ ಮಾಡುವಿರಿ.ವಿದೇಶದಲ್ಲಿ ಓದಬೇಕೆನ್ನುವವರಿಗೆ ಸೂಕ್ತ ಮಾರ್ಗಗಳು ತೆರೆಯುತ್ತವೆ. ಸರ್ಕಾರಿ ಕೆಲಸದಲ್ಲಿರುವ ವರಿಗೆ ಆದಾಯಗಳ ಹೆಚ್ಚುತ್ತವೆ. ಹೊಟ್ಟೆಯಲ್ಲಿ ಸ್ವಲ್ಪ ತೊಂದರೆಗಳು ಕಾಣಬಹುದು. ಸಂಗಾತಿಯು ತಮ್ಮ ಸ್ವಂತ ಅಲಂಕಾರಕ್ಕಾಗಿ ಹೆಚ್ಚು ಖರ್ಚು ಮಾಡುವರು.
ಧನು
ಸಮಾಜದಲ್ಲಿ ಕೀರ್ತಿ ಗೌರವಗಳು ಹೆಚ್ಚಾಗುತ್ತವೆ. ಸಂಗೀತಗಾರರಿಗೆ ಲಲಿತ ಕಲೆಯನ್ನು ಅಭ್ಯಾಸ ಮಾಡು ವವರಿಗೆ ಹೆಚ್ಚಿನಯಶಸ್ಸುದೊರೆಯುತ್ತದೆ. ಬಲಿಷ್ಠಶತ್ರು ಗಳನ್ನು ಅವರದೇ ತಂತ್ರಗಳಿಂದ ಮಟ್ಟ ಹಾಕುವಿರಿ. ನವೀನ ರೀತಿಯ ಕೃಷಿಯಲ್ಲಿ ಹೆಚ್ಚು ಆಸಕ್ತಿ ತಾಳುವಿರಿ. ಭೂಮಿ ವ್ಯವಹಾರಗಳಲ್ಲಿ ಸಾಕಷ್ಟು ಎಚ್ಚರದಿಂದಿರಿ. ವಿದ್ಯಾರ್ಥಿಗಳಿಗೆ ಅತಿಹೆಚ್ಚಿನ ಯಶಸ್ಸುದೊರೆಯುತ್ತದೆ. ಹಿರಿಯರಿಂದ ನಿಮಗೆ ಉತ್ತಮ ಮನ್ನಣೆ ದೊರೆಯು ತ್ತದೆ. ಕೆಲವರಿಗೆ ಆರೋಗ್ಯ ತಪ್ಪಿದರೂ ಸಹ ತಕ್ಷಣದಲ್ಲಿ ಸುಧಾರಣೆಯಾಗುತ್ತದೆ.ಪಾಲುದಾರಿಕೆಯ ವ್ಯವಹಾರ ಗಳಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಸಂಗಾತಿಯ ಜೊತೆ ಸೇರಿ ಮಾಡಿದ ವ್ಯವಹಾರಗಳಲ್ಲಿ ನೆಚ್ಚಿನ ಲಾಭವಿರು ತ್ತದೆ. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಸರಾಗತೆ ಇರು ತ್ತದೆ.ಉದ್ಯೋಗದಲ್ಲಿ ಯಾವುದೇ ಏರಿಳಿತಗಳು ಇರು ವುದಿಲ್ಲ. ಒಡವೆಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಬರುತ್ತದೆ.
ಮಕರ
ಸ್ಥಿರ ಮನಸಿನಿಂದ ಕೆಲಸ ಮಾಡುವಿರಿ. ಅದರ ಫಲಿತಾಂಶ ಸಹ ನಿಮಗೆ ದೊರಕುತ್ತದೆ. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿರುತ್ತದೆ. ವಿಭಿನ್ನ ನಡವಳಿಕೆಗಳಿಂದ ಶತ್ರುಗಳನ್ನು ದಿಕ್ಕು ತಪ್ಪಿಸುವಿರಿ. ಆಸ್ತಿ ಖರೀದಿಯನ್ನು ಈಗ ಮಾಡಬಹುದು.ಶೀತಭಾದೆ ಇರುವವರು. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಸಂಗಾತಿಯು ನೆರಳಿನಂತೆ ನಿಮ್ಮನ್ನು ಹಿಂಬಾಲಿಸುವರು. ಧಾರ್ಮಿಕ ಕಾರ್ಯಗಳನ್ನುಮಾಡು ವವರಿಗೆ ಹೆಚ್ಚಿನ ಲಾಭವಿರುತ್ತದೆ. ಉದ್ಯೋಗದಲ್ಲಿ ವೇತನ ಹೆಚ್ಚಾಗುವ ಸಂದರ್ಭವಿದೆ. ಮಹಿಳೆಯರು ನಡೆಸುವ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚು ಲಾಭ ವಿರುತ್ತದೆ. ಕ್ರೀಡಾಪಟುಗಳಿಗೆ ಸೂಕ್ತ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ದಿನಸಿ ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭವಿರುತ್ತದೆ. ಧಾರ್ಮಿಕ ಸಂಸ್ಥೆಗಳನ್ನು ನಡೆಸುವವರಿಗೆ ಸಮಾಜದಿಂದ ಧನಸಹಾಯ ಬರು ತ್ತದೆ. ತಾಯಿ ಮತ್ತು ನಿಮ್ಮಸಂಗಾತಿಯ ನಡುವೆ ಇದ್ದ ಮುನಿಸುಗಳು ದೂರವಾಗಿ ಅನ್ಯೋನ್ಯತೆ ಏರ್ಪಡುತ್ತದೆ.
ಕುಂಭ
ಜನ ಮೆಚ್ಚುವ ನಿರ್ಧಾರಗಳನ್ನು ತೆಗೆದುಕೊಂಡು ಕೆಲಸ ಮಾಡುವಿರಿ. ವಿದೇಶದಲ್ಲಿರುವ ಉದ್ಯೋಗಿಗಳಿಗೆ ವೇತನ ಹೆಚ್ಚಳದ ಸೂಚನೆ ಇರು ತ್ತದೆ. ಹಿರಿಯರು ತಮ್ಮ ನಡವಳಿಕೆಗಳಿಂದ ಸಮಾಜ ವನ್ನು ತಿದ್ದುವರು. ಪಿತ್ರಾರ್ಜಿತ ಆಸ್ತಿಗಳು ಒದಗುವ ಸಂದರ್ಭವಿದೆ. ವಿದ್ಯಾರ್ಥಿಗಳಿಗೆ ನಿರೀಕ್ಷಿತ ಯಶಸ್ಸು ಇದ್ದೇ ಇರುತ್ತದೆ. ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿರಿ. ಪ್ರೀತಿಪ್ರೇಮಗಳೆಂದು ಓಡಾಡುತ್ತಿದ್ದ ವರಿಗೆ ಮೋಸಹೋಗುವ ಸಾಧ್ಯತೆ ಇದೆ. ಸಂಗಾತಿಯು ನಡೆಸುವ ವ್ಯವಹಾರಗಳಲ್ಲಿ ಹೆಚ್ಚಿನ ಲಾಭವಿರುತ್ತದೆ. ವೃತ್ತಿಯಲ್ಲಿ ಸ್ಥಿರತೆಯನ್ನುಕಾಣಬಹುದು. ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ ಕಾಣಬಹುದು. ಶಿಕ್ಷಣ ಸಂಸ್ಥೆಗಳನ್ನು ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ಮಿಶ್ರ ಲೋಹವನ್ನು ತಯಾರಿಸುವವರಿಗೆ ಆದಾಯ ಹೆಚ್ಚುತ್ತದೆ.ಶಸ್ತ್ರಚಿಕಿತ್ಸೆಯನ್ನು ಮಾಡುವ ವೈದ್ಯರಿಗೆ ಹೆಚ್ಚುಬೇಡಿಕೆ ಬರುತ್ತದೆ.
ಮೀನ
ಸಾಕಷ್ಟು ಉಗ್ರತ್ವ ನಿಮ್ಮಲ್ಲಿ ಮನೆ ಮಾಡಿರುತ್ತದೆ. ಸಮಾಜದಿಂದ ಸೂಕ್ತ ಗೌರವ ದೊರೆಯದೆ ಬೇಸರವೆ ನಿಸುತ್ತದೆ. ನೀವು ಜಾಣತನದಿಂದ ಬೈದರು ಜನರಿಗೆ ಅರ್ಥವಾಗಿ ತಿರುಗಿ ಬೀಳುವರು. ವೃತ್ತಿಯಲ್ಲಿ ದ್ವಂದ್ವ ನಿರ್ಧಾರಗಳಿಂದ ತೊಂದರೆಗೆ ಸಿಲುಕುವಿರಿ. ಸಂಘ ಸಂಸ್ಥೆಗಳಮೂಲಕ ಆಸ್ತಿಖರೀದಿಸಬಹುದು.ವಿದ್ಯಾರ್ಥಿ ಗಳಿಗೆ ಶ್ರಮಕ್ಕೆ ತಕ್ಕ ಫಲವಿರುತ್ತದೆ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರವಹಿಸಿರಿ. ತಂದೆಯಆರೋ ಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇರಲಿ. ಸಂಗಾತಿಯ ನಿಮ್ಮ ಮೇಲಿನ ನಿರಾಸಕ್ತಿ ನಿಮ್ಮನ್ನು ಕೆರಳಿಸುತ್ತದೆ.ಕಬ್ಬಿಣದ ಎರಕಗಳನ್ನು ತಯಾರಿಸುವವರಿಗೆ ಬೇಡಿಕೆಹೆಚ್ಚುತ್ತದೆ. ಕಾಲಿನನೋವುಗಳು ಹೆಚ್ಚಾಗಿ ಕಾಡಬಹುದು. ಆಸೆ ಯಿಂದ ಆರಂಭಿಸಿದ ಉದ್ಯಮದಲ್ಲಿ ನಷ್ಟಗಳು ಕಾಣ ಬಹುದು.ಹೊಸದಾಗಿ ಕೊಂಡಭೂಮಿಯಲ್ಲಿ ತಗಾದೆ ಗಳು ಹುಟ್ಟಿಕೊಳ್ಳಬಹುದು. ಮಧ್ಯಸ್ಥಿಕೆ ವ್ಯವ ಹಾರ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.