ಸೋಮವಾರ, 28 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಆಫೀಸಿನಲ್ಲಿಂದು ಸಮರ್ಥಿಸಿಕೊಳ್ಳುವುದು ಕಷ್ಟ ಎನಿಸಿದರೂ ಜಯ ಸಿಗಲಿದೆ
Published 28 ಜುಲೈ 2025, 0:05 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಭವಿಷ್ಯದ ಬಗ್ಗೆ ಕೆಲವು ಗಂಭೀರ ಹಾಗೂ ಅರ್ಥಪೂರ್ಣ ಪ್ರಶ್ನೆಗಳು ಕಾಡಲಿವೆ. ಗಂಭೀರ ಆಲೋಚನೆ ನೈತಿಕತೆ ಮೇಲೆ ಪರಿಣಾಮ ಬೀರುವುದು. ಒಳಾಂಗಣ ವಿನ್ಯಾಸಕಾರರು, ಆರ್ಕಿಟೆಕ್ಟ್‌ಗಳು ಹೊಸರೀತಿಯಲ್ಲಿ ಆಲೋಚಿಸಿ.
ವೃಷಭ
ಆಫೀಸಿನಲ್ಲಿಂದು ಸಮರ್ಥಿಸಿಕೊಳ್ಳುವುದು ಕಷ್ಟ ಎನಿಸಿದರೂ ಜಯ ಸಿಗಲಿದೆ. ಬರಹಗಾರರಿಗೆ ಹಾಗೂ ಚಲನಚಿತ್ರರಂಗದವರಿಗೆ ಹಣದ ಜತೆಗೆ ಖ್ಯಾತಿಯೂ ದೊರೆಯುವುದು.
ಮಿಥುನ
ಮುಂದಿನ ಕೆಲಸಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳುವುದು ವಿಜಯಕ್ಕೆ ಮುಖ್ಯ ಕಾರಣವಾಗುವುದು. ಹೂಡಿಕೆಯ ವಿಷಯದಲ್ಲಿ ನಿಶ್ಚಿಂತೆಯಿಂದ ಇರಿ. ಹೊಸ ವಿಷಯಗಳನ್ನು ಪತ್ತೆ ಮಾಡುವ ಬಗ್ಗೆ ಕುತೂಹಲ ಹೆಚ್ಚಾಗಲಿದೆ.
ಕರ್ಕಾಟಕ
ಹಿಂದಿನ ಸಣ್ಣ ಹೂಡಿಕೆಯೂ ಭಾರಿ ಲಾಭ ತರುವ ಸಾಧ್ಯತೆ ಇದೆ. ಆಪ್ತಸ್ನೇಹಿತರನ್ನು ಪ್ರೋತ್ಸಾಹಿಸುವ ಜವಾಬ್ದಾರಿ ನಿಮ್ಮದಾಗಿದೆ. ಲವಲವಿಕೆಯಿಂದ ಕೆಲಸಗಳನ್ನು ಮಾಡುವಿರಿ.
ಸಿಂಹ
ಕಠಿಣ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಯಶಸ್ವಿ ಆಗುವಿರಿ. ಗುರುಗಳಿಂದ ವಿದ್ಯಾರ್ಥಿಗಳಿಗೆ ಪ್ರಶಂಸೆ ಸಿಗಲಿದೆ. ವೈದ್ಯಕೀಯ ಕ್ಷೇತ್ರದವರಿಗೆ ಕ್ಲಿಷ್ಟಕರ ಕೆಲಸಗಳು ಎದುರಾಗಲಿವೆ.
ಕನ್ಯಾ
ವೃತ್ತಿ ಮತ್ತು ಪ್ರವೃತ್ತಿಯಂಥ ಎರಡು ದೋಣಿಗೆ ಕಾಲುಹಾಕಿದ ಸ್ಥಿತಿಯಿಂದ ಹೊರಬಂದು, ವೃತ್ತಿಯ ಬಗ್ಗೆ ಸಂಪೂರ್ಣವಾಗಿ ಗಮನ ವಹಿಸಿ. ಸಗಟು ವ್ಯಾಪಾರವನ್ನು ಪ್ರಾರಂಭಿಸಲು ಸಕಾಲ.
ತುಲಾ
ರಾಜಕೀಯ ವ್ಯಕ್ತಿಗಳು ಪಕ್ಷದ ವರಿಷ್ಠರಲ್ಲಿ ಇಟ್ಟಂತಹ ಬೇಡಿಕೆಗಳು ಈಡೇರಲಿವೆ. ಆರೋಗ್ಯದ ದೃಷ್ಟಿಯಿಂದ ಧ್ಯಾನ ಮತ್ತು ವ್ಯಾಯಾಮ ಆರಂಭಿಸುವುದು ಫಲಕಾರಿಯಾಗಲಿದೆ.
ವೃಶ್ಚಿಕ
ಅಂದುಕೊಂಡ ಕಾರ್ಯಗಳು ನಿಧಾನಗತಿಯಲ್ಲಿ ಇದ್ದರೂ, ಪ್ರಗತಿಯತ್ತ ಸಾಗುವುದು ಸಂತೋಷವನ್ನು ತರಲಿದೆ. ನಿವೇಶನ ಮಾರಾಟದಲ್ಲಿ ಲಾಭವನ್ನು ಹೊಂದುವಿರಿ. ಪ್ರಾಮಾಣಿಕತೆಯಿಂದ ದೇವರ ಕೃಪೆಗೆ ಪಾತ್ರರಾಗುವಿರಿ.
ಧನು
ಅರಣ್ಯ ಅಧಿಕಾರಿಗಳಿಗೆ ವರ್ಗಾವಣೆ ಸಂಭವವಿದೆ. ಕೌಟುಂಬಿಕವಾಗಿಇದ್ದಂತಹ ಎಲ್ಲಾ ತೊಂದರೆಗಳು ನಿವಾರಣೆ ಆಗಲಿವೆ. ಬರುವ ಅವಕಾಶಗಳನ್ನು ಬುದ್ಧಿವಂತಿಕೆಯಿಂದ ಉಪಯೋಗಿಸಿಕೊಳ್ಳಿರಿ.
ಮಕರ
ಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು. ಪ್ರಭಾವಿ ವ್ಯಕ್ತಿಗಳ ಮೇಲೆ ದ್ವೇಷ ಇಟ್ಟುಕೊಂಡು ಅದನ್ನು ಸಾಧಿಸುವುದರಲ್ಲಿ ಹುರುಳಿಲ್ಲ. ದೃಢ ನಿರ್ಧಾರ ತೆಗೆದುಕೊಳ್ಳಿರಿ.
ಕುಂಭ
ಭೂಖರೀದಿಗೆ ಮುಂದಾಗಿರುವ ಆಯ-ವ್ಯಯದ ಬಗ್ಗೆ ವಾಸ್ತು ವಿಚಾರದ ಬಗ್ಗೆ ಗಮನಹರಿಸುವುದು ಒಳ್ಳೆಯದು. ಮಂಗಳಕರ ಕಾರ್ಯಕ್ರಮಕ್ಕೆ ಉಡುಗೆ ತೊಡುಗೆಗಳು ಸಾಂಪ್ರದಾಯಿಕವಾಗಿರಲಿ
ಮೀನ
ಕೆಲವು ವಿಚಾರಗಳು ಭ್ರಾಂತಿಯ ಕಾರಣದಿಂದ ಅನಿಶ್ಚಿತತೆಯನ್ನು ಉಂಟುಮಾಡಬಹುದು. ಕಾರ್ಯಗಳ ನಿರ್ವಹಣೆಯನ್ನು ಇತರರಿಗೆ ಕೊಟ್ಟರೆ ಮಂದಗತಿಯಲ್ಲಿ ಸಾಗುವ ಸಾಧ್ಯತೆ ಇರುತ್ತದೆ.
ADVERTISEMENT
ADVERTISEMENT