ಶುಕ್ರವಾರ, 11 ಜುಲೈ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ |ಏಪ್ರಿಲ್ 2025: ಈ ರಾಶಿಯ ಅವಿವಾಹಿತರಿಗೆ ವಿವಾಹ ಭಾಗ್ಯ ಒದಗಿ ಬರಲಿದೆ
Published 31 ಮಾರ್ಚ್ 2025, 23:30 IST
ಅರುಣ ಪಿ.ಭಟ್ಟ
ಮೇಷ
ಉದ್ಯೋಗಿಗಳಿಗೆ ಕೆಲಸದಲ್ಲಿ ವಿರೋಧ. ಸ್ಥಳ ಬದಲಾವಣೆ ಸಾಧ್ಯತೆ. ಸಾರ್ವಜನಿಕ ಕ್ಷೇತ್ರದಲ್ಲಿನ ಜನರಿಗೆ ತೊಂದರೆ. ತಿಂಗಳ ಉತ್ತರಾರ್ಧದಲ್ಲಿ ಯುವಕರ ಜೀವನದಲ್ಲಿ ಸ್ಥಿರತೆ. ದೊಡ್ಡ ಆರ್ಥಿಕ ವ್ಯವಹಾರ ವಹಿವಾಟುಗಳು ಪೂರ್ಣಗೊಳ್ಳುವವು.
ವೃಷಭ
ಕಲಾವಿದರಿಗೆ ಉತ್ತಮ ಸಮಯ, ಉತ್ತಮ ಅವಕಾಶ ಬರುವುದು. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು. ಗೃಹ ನಿರ್ಮಾಣ ಅಥವಾ ನೂತನ ಮನೆ ಕೊಳ್ಳುವ ಯೋಗ. ಸಾಲದ ಬಾಕಿ ಹಣ ಬರುವುದು. ತಿಂಗಳ ಉತ್ತರಾರ್ಧದಲ್ಲಿ ದುಃಖಗಳು ದೂರಾಗುವವು.
ಮಿಥುನ
ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಹಿನ್ನಡೆ. ವಾಹನ ಖರೀದಿ ಯೋಗ. ಉದ್ಯೋಗ ವ್ಯವಹಾರದಲ್ಲಿ ಬಡ್ತಿ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಅನಗತ್ಯ ಅಲೆದಾಟ ಜಾಸ್ತಿ ಇರುತ್ತದೆ. ಬಂಧು-ಮಿತ್ರರಲ್ಲಿ ಸ್ನೇಹದ ಒಡನಾಟ ಜಾಸ್ತಿ ಇರುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯ ನಡೆಸುವಿರಿ.
ಕರ್ಕಾಟಕ
ಸಮಾಜದಲ್ಲಿ ಉತ್ತಮ ಮಾನ, ಸನ್ಮಾನಯೋಗ. ವಿವಿಧ ಮೂಲಗಳಿಂದ ಧನಲಾಭ. ವಿಲಾಸಿ ವಸ್ತು ಖರೀದಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಗೆ ಬಂಧುಮಿತ್ರರ ಆಗಮನ ಸಂತಸ. ವಿವಾಹ ಅಪೇಕ್ಷಿತ ವಧೂ–ವರರಿಗೆ ಉತ್ತಮ ಸಮಯ.
ಸಿಂಹ
ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿ ಮುಂದುವರೆಯುತ್ತದೆ. ಕೆಲಸಗಳಲ್ಲಿ ಬಹಳ ಶ್ರಮ ವಹಿಸುವಿರಿ. ಬಹಳ ವರ್ಷಗಳಿಂದ ಆಗದಿರುವ ಕಾರ್ಯ ಬಂಧುಮಿತ್ರರ ಸಹಾಯದಿಂದ ಶುಭವಾಗುವುದು. ಕೋರ್ಟ್ ಕಚೇರಿ ವ್ಯವಹಾರಗಳಿದ್ದರೆ ಸಮಾಧಾನಕರ ಹಂತಕ್ಕೆ ತಲುಪುದು.
ಕನ್ಯಾ
ನೆರೆಹೊರೆಯವರಿಂದ ಉತ್ತಮ ಸಹಕಾರ ಸ್ನೇಹಮಯ ವಾತಾವರಣ ಇರುತ್ತದೆ. ಮನೆಯಲ್ಲಿ ಮಂಗಳ ಕಾರ್ಯ ನಡೆಸುವಿರಿ. ಆರ್ಥಿಕವಾಗಿ ಉತ್ತಮ ತಿಂಗಳು. ರಾಜಕೀಯದಲ್ಲಿರುವವರಿಗೆ ಉತ್ತಮ ಫಲಿತಾಂಶ. ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭದ ಅವಕಾಶ.
ತುಲಾ
ಹತ್ತಿರದ ಬಂಧುಗಳಿಗೆ ನಿಮ್ಮ ಸಹಾಯದ ಅವಶ್ಯಕತೆ ಬರುವುದು. ಉದ್ಯೋಗದಲ್ಲಿ ಮೇಲಧಿಕಾರಿಗಳ ತೊಂದರೆ ಇರುವುದು. ಅವಿವಾಹಿತರಿಗೆ ವಿವಾಹ ಭಾಗ್ಯ. ವಾಹನ ಖರೀದಿಗೆ ಉತ್ತಮ ಅವಕಾಶ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು.
ವೃಶ್ಚಿಕ
ಸಹೋದರರಿಂದ ಸಹಾಯ ಸಹಕಾರ. ನೂತನ ಮನೆ ಅಥವಾ ಭೂಮಿ ಖರೀದಿಗೆ ಯೋಚಿಸಿದ್ದಲ್ಲಿ ಇದು ಸಕಾಲ. ಹತ್ತಿರದ ಸ್ನೇಹಿತರಿಂದ ಆರ್ಥಿಕ ಸಹಾಯ. ಮಕ್ಕಳಿಂದ ಶುಭ ವಾರ್ತೆ. ಶಿಕ್ಷಣ ಹಣಕಾಸು ಕ್ಷೇತ್ರದಲ್ಲಿರುವವರಿಗೆ ಪ್ರಮೋಷನ್ ಸಾಧ್ಯತೆ.
ಧನು
ಹೊಸ ಉದ್ಯೋಗ ಪ್ರಸ್ತಾಪ ಬರುತ್ತದೆ. ಅರ್ಹರಿಗೆ ನೌಕರಿ ಸಿಗುವ ಯೋಗವಿದೆ. ಬರತಕ್ಕ ಬಾಕಿ ಹಣ ಬರುವುದು. ಸಾಹಿತ್ಯ, ಸಂಗೀತಜ್ಞರಿಗೆ ಗೌರವ, ವಸ್ತ್ರೋದ್ಯಮ ಹೊಟೇಲ್ ಉದ್ದಿಮೆದಾರರಿಗೆ ಲಾಭ. ಹಿರಿಯರೊಂದಿಗೆ ಮನಸ್ತಾಪ ಇದ್ದಲ್ಲಿ ಬಗೆಹರಿಯುವುದು.
ಮಕರ
ಹಣಕಾಸು ವ್ಯವಹಾರವನ್ನು ಬಹಳ ಎಚ್ಚರಿಕೆಯಿಂದ ನಡೆಸಿ. ಖರ್ಚು ಹೆಚ್ಚಾಗಬಹುದು. ನಿಮ್ಮ ಇಚ್ಛೆಯಂತೆ ನಡೆಯಲು ಅಡೆತಡೆ ಸಾಧ್ಯತೆ. ಆಪ್ತಮಿತ್ರರ ಭೇಟಿ, ಗುಡಿಕೈಗಾರಿಕಾ ಉದ್ಯಮದವರಿಗೆ ಅನುಕೂಲ. ಭೂಮಿ, ಚಿನ್ನ ಖರೀದಿ ಬಗ್ಗೆ ವಿಶೇಷ ಆಸಕ್ತಿ.
ಕುಂಭ
ಕೃಷಿಕರಿಗೆ ಲಾಭದಾಯಕ. ಆಕಸ್ಮಿಕವಾಗಿ ಭೂಮಿ ಖರೀದಿ ಯೋಗ. ಹಣಕಾಸು ಸಂಸ್ಥೆ ಹೊಂದಿರುವವರಿಗೆ ಉತ್ತಮ ಲಾಭ. ವೈಜ್ಞಾನಿಕ ಕ್ಷೇತ್ರದಲ್ಲಿರುವವರಿಗೆ ಬಡ್ತಿ ಸಾಧ್ಯತೆ. ವಿದ್ಯಾರ್ಥಿಗಳಿಗೆ ಒಳಿತಾಗಲಿದೆ.
ಮೀನ
ಸಮಾಜದಲ್ಲಿ ಗೌರವಾದರ ಸಿಗಲಿವೆ. ಹಣಕಾಸಿನ ವಿಚಾರದಲ್ಲಿ ಕೆಲವರು ಆಪ್ತಮಿತ್ರರಂತೆ ನಟಿಸಿ ಮೋಸ ಮಾಡಬಹುದು. ಷೇರು ವ್ಯವಹಾರದಲ್ಲಿ ಲಾಭ. ವಾಹನ ಖರೀದಿ ಯೋಗ. ಮನೆಗೆ ಅಲಂಕಾರಿಕ ವಸ್ತು ಪೀಠೋಪಕರಣ ಖರೀದಿ ಮಾಡುವಿರಿ.
ADVERTISEMENT
ADVERTISEMENT