ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ | ಏಪ್ರಿಲ್ 2024: ಉನ್ನತ ಶಿಕ್ಷಣಕ್ಕೆ ಯತ್ನಿಸುತ್ತಿರುವವರಿಗೆ ಯಶಸ್ಸು
Published 31 ಮಾರ್ಚ್ 2024, 23:30 IST
ಅರುಣ ಪಿ.ಭಟ್ಟ
ಮೇಷ
ದಾನ–ಧರ್ಮ ಕಾರ್ಯಗಳಲ್ಲಿ ಆಸಕ್ತಿ ಮೂಡುತ್ತದೆ. ವ್ಯಾಪಾರ, ಉದ್ಯೋಗದ ವಿಚಾರದಲ್ಲಿ ದೊಡ್ಡ ಅಧಿಕಾರಿಗಳು, ವ್ಯವಹಾರ–ವ್ಯಾಪಾರಸ್ಥರ ಜತೆಗೆ ಮಾತುಕತೆ ನಡೆಸುವಿರಿ. ಕೌಟುಂಬಿಕ ಬಾಂಧವ್ಯ ಗಟ್ಟಿಯಾಗುತ್ತದೆ. ಇಡೀ ತಿಂಗಳು ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಶುಭ: 12,18,26 ಅಶುಭ: 10,15,29.
ವೃಷಭ
ವೈಯಕ್ತಿಕ ಶ್ರಮದಿಂದ ಹೆಚ್ಚಿನ ಯಶಸ್ಸು ಪಡೆಯುವಿರಿ. ಇದರಿಂದ ಇಡೀ ತಿಂಗಳು ಉತ್ಸಾಹ ಮತ್ತು ಸಂತೋಷ ಇರಲಿದೆ. ಸಹೋದ್ಯೋಗಿಗಳ ಜತೆಗೆ ಭಿನ್ನಾಭಿಪ್ರಾಯ ಮುಂದುವರೆಸಬೇಡಿ. ಕೆಲಸಗಳ ವಿಸ್ತರಣೆಗೆ ಸಂಬಂಧಿಸಿದಂತೆ ಪ್ರಮುಖ ತೀರ್ಮಾನ ಕೈಗೊಳ್ಳಲಿದ್ದೀರಿ. ಶುಭ: 11,18,29 ಅಶುಭ: 15,22,28.
ಮಿಥುನ
ವ್ಯಾಪಾರ, ವ್ಯವಹಾರ, ಉದ್ಯಮದಲ್ಲಿ ತೊಡಗಿಕೊಂಡವರಿಗೆ ಅತ್ಯುತ್ತಮ ಸಮಯ. ಅಂದುಕೊಂಡ ಹಲವು ಕೆಲಸಗಳು ಪೂರ್ಣಗೊಳ್ಳುತ್ತವೆ. ಉದ್ಯೋಗಸ್ಥರು ಕೆಲಸದಲ್ಲಿ ಗುಣಮಟ್ಟದ ವೇಗ ಕಂಡುಕೊಳ್ಳುತ್ತಾರೆ. ಸಾಮಾಜಿಕ ಸ್ಥಾನಮಾನ ಹೆಚ್ಚಾಗಲಿದೆ. ಉತ್ಸಾಹವೂ ಹೆಚ್ಚಲಿದೆ. ಶುಭ: 12,16,22 ಅಶುಭ: 21,26,29.
ಕರ್ಕಾಟಕ
ಶೈಕ್ಷಣಿಕ ವಲಯದಲ್ಲಿರುವವರಿಗೆ, ವಿದ್ಯಾರ್ಥಿಗಳಿಗೆ ಅನುಕೂಲ. ಉದ್ಯೋಗಿಗಳಿಗೆ ಬಡ್ತಿ ಸಿಗುವ ಸಾಧ್ಯತೆಯೂ ಇದೆ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಮುಂಬರುವ ದಿನಗಳಲ್ಲಿ ಸಾಕಷ್ಟು ಅವಕಾಶಗಳು ಬರಲಿವೆ. ತಿಂಗಳ ಅಂತ್ಯದ ವೇಳೆ ಒಳ್ಳೆಯ ಮೊತ್ತ ಕೈಸೇರಲಿದೆ. ಶುಭ: 22,24,28 ಅಶುಭ: 18,25,29.
ಸಿಂಹ
ಪ್ರಶಸ್ತಿ–ಗೌರವಕ್ಕೆ ನಿಮ್ಮ ಹೆಸರು ಸೂಚಿಸುವ ಯೋಗವಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿರಿ. ವೃತ್ತಿಪರ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡುವಿರಿ. ವ್ಯಾವಹಾರಿಕ ಸಂಪರ್ಕ ಅಭಿವೃದ್ಧಿಯಾಗಲಿದೆ. ಕುಟುಂಬದಲ್ಲಿ ಸಂತಸ. ಆದಾಯದಲ್ಲಿ ಹೆಚ್ಚಳ. ಶುಭ: 10,15,22 ಅಶುಭ: 18,20,24.
ಕನ್ಯಾ
ಕುಟುಂಬ ಸದಸ್ಯರು, ಬಂಧುಗಳು, ಪ್ರೀತಿಪಾತ್ರರೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯುವಿರಿ. ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಆಗಲಿವೆ. ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲಿದ್ದೀರಿ. ಸಾಮಾಜಿಕ–ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಮನ್ನಣೆ ದೊರೆಯಲಿದೆ. ಶುಭ: 16,18,22 ಅಶುಭ: 17,19,20.
ತುಲಾ
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಲಾಭ ಹಾಗೂ ಮಹತ್ತರವಾದ ಪ್ರಗತಿ ಕಾಣುವ ಯೋಗವಿದೆ. ಸಂದರ್ಶನಗಳಲ್ಲಿ ಭಾಗವಹಿಸುವವರು ಉತ್ತಮ ಫಲಿತಾಂಶ ನಿರೀಕ್ಷಿಸಬಹುದು. ಸಿನಿಮಾ, ವೈದ್ಯಕೀಯ, ಕಲಾ ವೃತ್ತಿಯಲ್ಲಿರುವವರಿಗೆ ಲಾಭ. ಆರೋಗ್ಯ ಚೆನ್ನಾಗಿರುತ್ತದೆ. ಶುಭ: 12,18,22 ಅಶುಭ: 14,16,24.
ವೃಶ್ಚಿಕ
ಈ ಅವಧಿಯಲ್ಲಿ ತಾಳ್ಮೆ ಮತ್ತು ಧೈರ್ಯ ಬಹಳ ಮುಖ್ಯ. ತಿಂಗಳ ಮಧ್ಯಭಾಗದಲ್ಲಿ ವ್ಯಾಪಾರ ವ್ಯವಹಾರಗಳ ವಿಸ್ತರಣೆ. ಕೆಲಸ ಕಾರ್ಯಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತಂದುಕೊಳ್ಳಲು ಪ್ರಯತ್ನಿಸುತ್ತೀರಿ. ತಿಂಗಳ ಅಂತ್ಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಶುಭ:14,16,22 ಅಶುಭ: 12,18,22.
ಧನು
ಆಸ್ತಿ ಖರೀದಿಗೆ ಮುನ್ನ ಸಂಬಂಧಪಟ್ಟ ಕಾಗದಪತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಿ. ದೊಡ್ಡ ಪ್ರಮಾದಗಳನ್ನು ತಡೆಯುವಂತಹ ಸನ್ನಿವೇಶಗಳು ನಿಮಗೆ ಪೂರಕವಾಗಲಿವೆ. ವೈಯಕ್ತಿಕ ಸಂಬಂಧದಲ್ಲಿ ಕೆಲವು ಕಹಿ ಬೆಳವಣಿಗೆಗಳಾಗಬಹುದು. ಸೋದರ ವರ್ಗ ನೆರವಿಗೆ ಬರುವುದು. ಶುಭ: 14,25,28 ಅಶುಭ: 12,16,22.
ಮಕರ
ಪ್ರತಿಷ್ಠಿತ ಸಂಸ್ಥೆಯೊಂದರ ಜತೆಗೆ ಮಹತ್ವದ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಾಧ್ಯತೆಗಳಿವೆ. ವ್ಯಾಪಾರ ಉದ್ಯಮ ವಿಸ್ತರಣೆ ಬಗ್ಗೆ ಮುಖ್ಯವಾದ ತೀರ್ಮಾನ ಕೈಗೊಳ್ಳಲಿದ್ದೀರಿ. ವೈವಾಹಿಕ ಜೀವನದಲ್ಲಿ ಸಂತೋಷ ನೆಲೆಸಲಿದೆ. ತಿಂಗಳ ಮಧ್ಯಭಾಗದಲ್ಲಿ ಪ್ರಯಾಣ ಮಾಡಬೇಕಾಗುತ್ತದೆ. ಶುಭ: 11,16,24 ಅಶುಭ: 12,17,20.
ಕುಂಭ
ಹಣದ ಸದುಪಯೋಗಕ್ಕೆ ಮಾರ್ಗ ಹುಡುಕುವಿರಿ. ಮಾರಾಟ ಕ್ಷೇತ್ರದಲ್ಲಿರುವವರಿಗೆ ಲಾಭ. ‌ಹಾಕಿಕೊಂಡ ಗುರಿಯನ್ನು ಅಂದುಕೊಂಡ ಸಮಯಕ್ಕಿಂತ ಮುಂಚಿತವಾಗಿಯೇ ತಲುಪುವಿರಿ. ಅಹಂಕಾರವನ್ನು ಬದಿಗಿಟ್ಟು ಸಂಗಾತಿಯ ಭಾವನೆಗಳಿಗೆ ಗೌರವ ನೀಡಿ. ಶುಭ: 14,18,21 ಅಶುಭ: 12,19,24.
ಮೀನ
ಉನ್ನತ ಶಿಕ್ಷಣಕ್ಕೆ ಯತ್ನಿಸುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ದೇವತಾ ಆರಾಧನೆಗೆ ಮನಸು ಮಾಡುವಿರಿ. ಉದ್ಯೋಗ ಸ್ಥಳದಲ್ಲಿ ಕೆಲವು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಿದ್ದೀರಿ. ತಂದೆಗೆ ಅಥವಾ ತಂದೆಯ ಸಮಾನರಾದವರಿಗೆ ಅನಾರೋಗ್ಯ ಕಾಡಬಹುದು. ಶುಭ: 14,18,24 ಅಶುಭ: 16,25,27.