ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ಮಾಸ ಭವಿಷ್ಯ: ಅಕ್ಟೋಬರ್ 2025– ಈ ರಾಶಿಯವರಿಗೆ ಭೂ ವ್ಯವಹಾರಕ್ಕೆ ಉತ್ತಮ ಸಮಯವಿದು‌
Published 30 ಸೆಪ್ಟೆಂಬರ್ 2025, 18:35 IST
ಅರುಣ ಪಿ.ಭಟ್ಟ
ಮೇಷ
ಉದ್ಯೋಗಿಗಳಿಗೆ ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನವನ್ನು ಪಡೆಯುತ್ತೀರಿ. ಇದರಿಂದ ನಿಮ್ಮ ಹಿರಿಯ ಅಧಿಕಾರಿಗಳು ಮತ್ತು ಸಹೋದ್ಯೋಗಿಗಳು ಸಂತೋಷಪಡುತ್ತಾರೆ. ತಿಂಗಳ ಆರಂಭದಿಂದ ಮಧ್ಯ ಬಾಗದವರೆಗೆ ನೀವು ಸ್ವಲ್ಪ ಸಮಸ್ಯೆಯನ್ನು ಅನುಭವಿಸುತ್ತೀರಿ. ಈ ಸಮಯದಲ್ಲಿ ಚಿಕ್ಕ ಆರೋಪವನ್ನು ಎದುರಿಸಬೇಕಾಗುವುದು. ಇದರಿಂದ ನಿಮ್ಮ ಮನಸ್ಸಿಗೆ ಹಾನಿಯಾಗುತ್ತದೆ. ನೀವು ವ್ಯಾಪಾರಿಗಳಾಗಿದ್ದರೆ ವ್ಯಾಪಾರದಲ್ಲಿ ಹಾನಿಯನ್ನು ಎದುರಿಸಬೇಕಾಗುತ್ತದೆ. ಚಿಕ್ಕ ಪ್ರವಾಸ ಕೈಗೊಳ್ಳುವಿರಿ ಅದರಿಂದ ಮನಸಿಗೆ ಸಂತಸ ಸಿಗುವುದು. ಭೂ ವ್ಯವಹಾರಕ್ಕೆ ಉತ್ತಮ ಸಮಯವಿದು‌. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಒಟ್ಟಾರೆ ಈ ತಿಂಗಳು ಮಿಶ್ರ ಫಲ. ಶುಭ. 12,16,21, ಅಶುಭ. 15,19,23,
ವೃಷಭ
ಬಹು ದಿನಗಳ ಗೃಹ ಕಲಹಕ್ಕೆ ಮುಕ್ತಿ ದೊರೆಯುವುದು. ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಗೆ ಉತ್ತಮ ಯಶ. ಸರಕಾರಿ ನೌಕರದಾರರಿಗೆ ಪದೋನ್ನತಿ ಯಶ, ಇಚ್ಚಿತ ಸ್ಥಳಕ್ಕೆ ಬದಲಾವಣೆ. ತಿಂಗಳಾಂತ್ಯದಲ್ಲಿ ಆಪ್ತರಿಂದ ಸನ್ಮಾನ. ಕಾಗದ ಪತ್ರಗಳ ಕೆಲಸ ಸರಾಗ. ಹಳೆಯ ಸ್ನೇಹಿತರು ಸಾಲ ಕೇಳಿದರು ಎಂದು ತಕ್ಷಣ ನೀಡಿದರೆ ವಾಪಸ್ ಬರುವುದು ಕಷ್ಟ. ಕಾನೂನು ವಿಚಾರಗಳು ನಿಮ್ಮ ವಿರುದ್ಧ ಸಾಗುತ್ತವೆ. ಬೇರೊಬ್ಬರು ನೀಡಿದ ವಸ್ತು, ಹಣ, ಕಾಗದ ದಾಖಲೆ ಪತ್ರಗಳನ್ನು ನೀವು ಕಳೆದುಕೊಳ್ಳುವ ಅವಕಾಶ ಇದ್ದು, ಒಂದೋ ಅಂಥ ಜವಾಬ್ದಾರಿ ವಹಿಸಿಕೊಳ್ಳಬೇಡಿ ಅನಿವಾರ್ಯವಾಗಿ ಜವಾಬ್ದಾರಿ ಬಂದರೆ ಎಚ್ಚರಿಕೆಯಿಂದ ನಿರ್ವಹಿಸಿ. ಶುಭ. 14,19,24, ಅಶುಭ. 13,22,26,
ಮಿಥುನ
ಈ ತಿಂಗಳ ಮೊದಲಾರ್ಧದಲ್ಲಿ ಗ್ರಹಗತಿಗಳು ನಿಮಗೆ ಅನುಕೂಲಕರವಾಗಿವೆ. ಈ ಅವಧಿಯಲ್ಲಿ ಅತಿ ಮುಖ್ಯವಾದ ಕೆಲಸಗಳನ್ನು ಮಾಡಿಕೊಂಡು ಬಿಡಿ. ನಿಮ್ಮಲ್ಲಿನ ಜಡತ್ವ ಕರಗಿ ಹೋಗಲಿದೆ. ನಿಮ್ಮ ವಿನಯದ ಸ್ವಭಾವದಿಂದ ಹೆಚ್ಚಿನ ಹೆಸರು ಸಂಪಾದನೆ ಮಾಡಲಿದ್ದೀರಿ. ಸಂಗಾತಿಯ ಬಯಕೆಗಳಿಗೆ ನೀವು ಸಮ್ಮತಿಯ ವಾಗ್ದಾನ ನೀಡಲಿದ್ದೀರಿ. ಮಕ್ಕಳ ಕೆಲವು ವರ್ತನೆಗಳು ನಿಮ್ಮ ಮನದಲ್ಲಿ ಬೇಸರ ತರಿಸಲಿದೆ, ಆದಷ್ಟು ಅವರನ್ನು ಸರಿಪಡಿಸಲು ಯೋಜನೆ ರೂಪಿಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ.ಶುಭ ಕಾರ್ಯವನ್ನು ಆಯೋಜಿಸುವ ಸಾಧ್ಯತೆ ಇದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಗೌರವ, ವರ್ಚಸ್ಸು ಹೆಚ್ಚುವ ಸಾಧ್ಯತೆ ಇದೆ. ನಿಮ್ಮ ಪೋಷಕರ ಸಂತೋಷಕ್ಕೆ ನೀವು ಕಾರಣರಾಗುತ್ತೀರಿ. ಕೌಟುಂಬಿಕವಾಗಿ ಬಹಳ ನೆಮ್ಮದಿಯಾಗಿ ಇರುತ್ತೀರಿ. ಶುಭ. 18,21,24, ಅಶುಭ. 16,22,24,
ಕರ್ಕಾಟಕ
ತಿಂಗಳ ಪ್ರಾರಂಭದಲ್ಲಿ ಮನೆಕಟ್ಟುವ ಸಮಸ್ಯೆ ಬಗೆಹರಿಯುವುದು. ಕ್ರಯ ವಿಕ್ರಯದಲ್ಲಿ ವಂಚನೆ ನಡೆಯುವ ಸಂಭವ ಜಾಗ್ರತೆ. ತಂದೆಯಿಂದ ಹಣಕಾಸಿನ ಸಹಾಯ ಸಾದ್ಯತೆ. ಕಾಲಿಗೆ ನೋವು. ಆಸ್ಪತ್ರೆಗೆ ಖರ್ಚು. ನಿರೀಕ್ಷಿತ ಸ್ಪರ್ಧೆಯಲ್ಲಿ ಯಶಸ್ಸು. ಶಾರೀರಿಕ ಮಾನಸಿಕ ಉತ್ಸಾಹ ವೃದ್ದಿಸುವದು. ಸರಕಾರಿ ಕೆಲಸಗಳು ತ್ವರಿತ ಗತಿಯಲ್ಲಿ ನಡೆಯುವುದು. ಪರಿಚಿತ ಸ್ತ್ರೀ ವಿರೋದ ಕಾಣಿಸುವುದು. ಪಶುಗಳ ವಿಕ್ರಿಯದಾರರಿಗೆ ಲಾಭ. ಹೊಟ್ಟೆನೋವಿನ ಪ್ರಸಂಗ. ಅಜ್ಞಾತವಾಸದಿಂದ ಬಿಡುಗಡೆ. ಮಹತ್ವದ ಮಾತುಕತೆ. ಶುಭ. 16,18,23, ಅಶುಭ. 15,22,27,
ಸಿಂಹ
ಬಹುಮುಖ್ಯ ಕೆಲಸವನ್ನು ನೀವು ಮರೆತುಬಿಡಬಹುದು ಆದಷ್ಟು ಕೆಲಸ ಕಾರ್ಯಗಳ ಬಗ್ಗೆ ಸೂಕ್ತ ಮುತುವರ್ಜಿವಹಿಸಿ. ಆರೋಗ್ಯದ ಹಿತದೃಷ್ಟಿಯನ್ನು ಮನಗಾಣಿರಿ. ಹೆಚ್ಚಿನ ಕೆಲಸ ಹಾಗೂ ಹೊಸ ಆದಾಯ ಮಾರ್ಗ ಕಂಡುಬರಲಿದೆ. ನವೀನವಾಗಿ ಪ್ರಾರಂಭ ಮಾಡಿರುವ ಉದ್ಯೋಗ ಭರವಸೆಯ ಮಹಾಪೂರವನ್ನೇ ತರಲಿದೆ. ಆದಾಯ ಹೆಚ್ಚಳವಾಗಿದ್ದರೂ ಸಹ ಖರ್ಚುಗಳು ವಿಪರೀತ ವಾಗಲಿದೆ. ಮುನಿಸಿಕೊಂಡು ಹೋಗಿರುವ ದಂಪತಿಗಳು ಹತ್ತಿರವಾಗುವ ಸಮಯವಿದು. ನಿಮ್ಮ ವರ್ಚಸ್ಸು ಹಾಳು ಮಾಡಲು ವಿರೋಧಿ ಪಾಳಯದವರು ಬಹಳ ಪ್ರಯತ್ನ ಪಡುತ್ತಾರೆ. ನೀವು ಈ ಬಗ್ಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಉನ್ನತ ಶಿಕ್ಷಣಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲ ಇದೆ. ಸಾಮಾಜಿಕ ಹಾಗೂ ರಾಜಕೀಯ ಬದುಕಿನಲ್ಲಿ ಹುದ್ದೆ ಹಾಗೂ ಘನತೆ ಹೆಚ್ಚಳ ಆಗಲಿದೆ. ಶುಭ.14, 22,29, ಅಶುಭ. 16,19,29,
ಕನ್ಯಾ
ವೈಯಕ್ತಿಕ ಹಾಗೂ ವೃತ್ತಿಪರ ಬದುಕಿನಲ್ಲಿ ಲಾಭ ಹಾಗೂ ಮಹತ್ತರವಾದ ಪ್ರಗತಿ ಕಾಣುವ ಯೋಗ ಇದೆ. ಇಂಟರವ್ಯೂಗಳಲ್ಲಿ ಭಾಗವಹಿಸುವವರು ಅನುಕೂಲಕರ ಫಲಿತಾಂಶ ನಿರೀಕ್ಷಿಸಬಹುದು. ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ಮಾಡಲಿದ್ದೀರಿ. ಸಿನಿಮಾ, ವೈದ್ಯಕೀಯ, ಕಲೆ ಈ ರೀತಿಯ ವೃತ್ತಿಯಲಿ ಇರುವವರಿಗೆ ಅತ್ಯುತ್ತಮವಾದ ಲಾಭ ಇದೆ. ತಿಂಗಳ ಮಧ್ಯ ಭಾಗದಲ್ಲಿ ಪ್ರಗತಿ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ. ಶೈಕ್ಷಣಿಕ ಅರ್ಹತೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಆರೋಗ್ಯವು ಚೆನ್ನಾಗಿರುತ್ತದೆ. ಕಾನೂನು ವ್ಯಾಜ್ಯಗಳು ಇದ್ದಲ್ಲಿ ಎದುರು ಪಕ್ಷದವರು ಸರಿಸಮವಾದ ಹೋರಾಟ ಮಾಡುತ್ತಾರೆ. ತಿಂಗಳಾಂತ್ಯದಲ್ಲಿ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಶುಭ. 14,18,22, ಅಶುಭ. 17,23,29,
ತುಲಾ
ಶೈಕ್ಷಣಿಕ ರಂಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ತಿಂಗಳ ಆರಂಭದಲ್ಲಿ ಅದ್ಭುತವಾದ ಯಶಸ್ಸು ದೊರೆಯುವ ಅವಕಾಶಗಳಿವೆ. ಕ್ರೀಡೆ, ಸಿನಿಮಾ ಸಂಗೀತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವಯುತವಾದ ಸ್ಥಾನಮಾನ ದೊರೆಯಲಿದೆ. ಹಲವು ಘಟನೆಗಳು ನೀವು ಅಂದುಕೊಂಡ ದಿಕ್ಕಿನ ಕಡೆಗೆ ಸಾಗುವುದರಿಂದ ಬಹಳ ಸಂತೋಷಗೊಳ್ಳುವಿರಿ. ಆದಾಯ ಮೂಲಗಳು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಲಾಭವನ್ನು ತಂದುಕೊಡುವ ಸಾಧ್ಯತೆ ಇದೆ. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಹಲವು ಅವಕಾಶಗಳು ಏಕಕಾಲಕ್ಕೆ ದೊರೆಯುತ್ತವೆ. ಉದ್ಯೋಗಸ್ಥರು ಹಾಗೂ ವ್ಯಾಪಾರಸ್ಥರ ಬೆಳವಣಿಗೆಗೆ ಅವಕಾಶ ದೊರೆಯುತ್ತದೆ. ಶುಭ. 10,16,23, ಅಶುಭ. 11,18,27,
ವೃಶ್ಚಿಕ
ನಿಮ್ಮ ಕಾರ್ಯಗಳನ್ನು ಈ ಹಿಂದೆಂದಿಗಿಂತಲೂ ವೇಗವಾಗಿ ಮಾಡಲಿದ್ದೀರಿ. ಈಗಿನ ಪರಿಸ್ಥಿತಿಯಲ್ಲಿ ನಿಮ್ಮ ಕೆಲಸ ಕಾರ್ಯಗಳನ್ನು ಪೂರ್ಣ ಮಾಡಲು ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ನಿಮ್ಮ ಮನಸಿನಲ್ಲಿ ಇರುವ ವಿಚಾರವನ್ನು ನೇರವಾಗಿ ಹೇಳಲು ಪ್ರಯತ್ನಿಸಿ. ಆದರೆ ಈ ಅವಧಿಯಲ್ಲಿ ಒಬ್ಬರು ಹೇಳುವುದನ್ನು ಮತ್ತೊಬ್ಬರು ಕೇಳಿಸಿಕೊಳ್ಳಲು ಸಿದ್ಧರಿಲ್ಲದ ಕಾರಣ ಸಮಸ್ಯೆ ದೊಡ್ಡದಾಗುತ್ತದೆ ಹಾಗೂ ಬಗೆಹರಿಸುವುದು ಕಷ್ಟವಾಗುತ್ತದೆ. ತಿಂಗಳ ಮಧ್ಯಭಾಗದಿಂದ ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯೋಗದ ಕಡೆಗೆ ನಿಮ್ಮ ಗಮನ ಹೆಚ್ಚಾಗುತ್ತದೆ. ಶುಭ.14,16,22, ಅಶುಭ. 07,11,26,
ಧನು
ವೃತ್ತಿಪರ ಜೀವನದಲ್ಲಿ ಸ್ವಚ್ಛ ವ್ಯಕ್ತಿತ್ವ ಎಂಬ ಹೆಸರು ಪಡೆಯಲಿದ್ದೀರಿ. ನಿಮ್ಮ ಈ ಪ್ರಯತ್ನದಲ್ಲಿ ಯಶಸ್ಸು ಪಡೆಯಲು ಹಲವು ಅವಕಾಶಗಳು ದೊರೆಯಲಿವೆ. ಸ್ಥಿರತೆ ಹಾಗೂ ದೃಢತೆ ಕಾಪಾಡಿಕೊಂಡು ಪ್ರಗತಿಯತ್ತ ಹೆಜ್ಜೆಗಳನ್ನು ಇಡುತ್ತೀರಿ. ತಂದೆ ಜತೆಗೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ. ಮನೆಯಲ್ಲಿ ಸಂತೋಷವಾದ ವಾತಾವರಣ ಇರುತ್ತದೆ. ಈ ಅವಧಿಯಲ್ಲಿ ಉದ್ಯೋಗಸ್ಥರು ಪರಿಣಾಮಕಾರಿಯಾಗಿ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾದ ಸಲಹೆ ಸೂಚನೆ ನೀಡಲಿದ್ದೀರಿ. ಸಂಭವನೀಯ ಅಪಾಯಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಪಾಲಿಗೆ ದೈವ ಬಲವಿದೆ. ಸಾಮಾಜಿಕ ಜೀವನದಲ್ಲೂ ಉತ್ತಮ ಸ್ಥಾನ ಮಾನ ಪಡೆಯಲಿದ್ದೀರಿ. ವೈಯಕ್ತಿಕ ಸಂಬಂಧದಲ್ಲಿ ಬಹಳ ಒಳ್ಳೆ ಬಾಂಧವ್ಯ ಏರ್ಪಡುತ್ತದೆ. ಶುಭ. 09,14,25, ಅಶುಭ. 17,23,28,
ಮಕರ
ಬಹಳ ಸಂತೋಷವಾಗಿ ಇರುತ್ತೀರಿ. ಆದಾಯಕ್ಕೆ ಸಂಬಂಧಿಸಿದ ಮೂಲಗಳಿಂದ ಉತ್ತಮ ಲಾಭ ಪಡೆಯುವ ಅವಕಾಶ ಇದೆ. ಇದರಿಂದ ಹೆಚ್ಚು ಉತ್ಸಾಹಭರಿತರಾಗಿ, ಉಲ್ಲಸಿತರಾಗಿ ಕಾಣಿಸಿಕೊಳ್ಳಲಿದ್ದೀರಿ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಪಡೆಯುವ ಅವಕಾಶಗಳು ದೊರೆಯಲಿವೆ. ನಿಮ್ಮ ಮಗ ಅಥವಾ ಮಗಳ ಮದುವೆಯ ವಿಚಾರವನ್ನು ಅಂತಿಮಗೊಳಿಸುವ ಅವಕಾಶ ಇದೆ. ಸ್ಪರ್ಧೆ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಇರುವವರು ಅತ್ಯುತ್ತಮ ಸಾಧನೆ ಮಾಡಲು ಅವಕಾಶ ದೊರೆಯಲಿದೆ. ಕಾಲು ನೋವಿನ ಸಮಸ್ಯೆ ಕಾಡಬಹುದು. ತಿಂಗಳ ಅಂತ್ಯಕ್ಕೆ ಸರಿಯುತ್ತಾ ಆರೋಗ್ಯ ಸುಧಾರಿಸುತ್ತದೆ. ಶುಭ. 11,14,25, ಅಶುಭ. 15,26,29,
ಕುಂಭ
ತಿಂಗಳ ಶುರುವಿನಿಂದಲೇ ಉದ್ಯೋಗ ಕ್ಷೇತ್ರದಲ್ಲಿ ಅದ್ಭುತವಾದ ಸಾಧನೆ ಮಾಡುವ ಅವಕಾಶಗಳಿವೆ. ನಿಮ್ಮ ಪಾಲಿಗೆ ದೊರೆಯುವ ಅವಕಾಶಗಳನ್ನು ಬಹಳ ಚೆನ್ನಾಗಿ ಬಳಸಿಕೊಳ್ಳಲಿದ್ದೀರಿ. ವ್ಯಾಪಾರಸ್ಥರು ಸ್ಥಳೀಯವಾಗಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿರಿ. ಆರೋಗ್ಯ ಉತ್ತಮವಾಗಿ ಇರುತ್ತದೆ. ನಿಮ್ಮ ಪೋಷಕರಿಗೆ ಹೆಚ್ಚಿನ ಗೌರವ ನೀಡುತ್ತೀರಿ. ಜತೆಗೆ ಅವರ ಅಗತ್ಯಗಳನ್ನು ಪೂರೈಸುತ್ತೀರಿ. ಈ ಮೂಲಕ ಅವರ ಆಶೀರ್ವಾದ ನಿಮಗೆ ದೊರೆಯಲಿದೆ.ನಿಮ್ಮ ಆದಾಯ ಉತ್ತಮವಾಗಿರುತ್ತದೆ. ಸಾಮಾಜಿಕವಾಗಿ ಗೌರವ- ಮನ್ನಣೆಗಳನ್ನು ಪಡೆಯಲಿದ್ದೀರಿ. ಮಕ್ಕಳ ಪ್ರಗತಿಯಿಂದ ಸಮಾಧಾನ ದೊರೆಯಲಿದೆ. ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ನಿರೀಕ್ಷಿತವಾದ ಯಶಸ್ಸು ದೊರೆಯಲಿದೆ. ಶುಭ.12,20,28,ಅಶುಭ. 10,18,27,
ಮೀನ
ಸಣ್ಣ ಪ್ರವಾಸ ಮಾಡಬೇಕಾಗಿ ಬರುತ್ತದೆ. ಸಂಸ್ಥೆಯೊಂದರ ಜತೆ ಮಹತ್ತರವಾದ ಒಪ್ಪಂದವೊಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ. ಮನೆ ಹಾಗೂ ಕುಟುಂಬದ ಬಗ್ಗೆ ಹೆಚ್ಚು ಯೋಚನೆ ಮಾಡಲಿದ್ದೀರಿ. ಶ್ವಾಸಕೋಶ ಸಮಸ್ಯೆ ಎದುರಾಗಬಹುದು. ತಿಂಗಳ ಮಧ್ಯ ಭಾಗದಿಂದ ಹಲವು ಒಳ್ಳೆ ಅವಕಾಶಗಳು ನಿಮ್ಮ ಪಾಲಿಗೆ ದೊರೆಯಲಿವೆ. ಆರೋಗ್ಯ ಉತ್ತಮವಾಗಿ ಇರುತ್ತದೆ. ವ್ಯಾಸಂಗದಲ್ಲಿ ವಿದ್ಯಾರ್ಥಿಗಳಿಗೆ ಪ್ರಗತಿ ಇದೆ. ಆದಾಯದಲ್ಲಿ ಹೆಚ್ಚಳ ಆಗುತ್ತದೆ. ಇದರಿಂದ ಸಾಮಾಜಿಕ ಹಾಗೂ ಆರ್ಥಿಕ ಸ್ಥಾನಮಾನ ಹೆಚ್ಚಾಗಲಿದೆ. ವೈಯಕ್ತಿಕ ಸಂಬಂಧದಲ್ಲಿ ಮಧುರವಾದ ಕ್ಷಣಗಳನ್ನು ಅನುಭವಿಸಲಿದ್ದೀರಿ. ಜತೆಯಲ್ಲಿ ಇರುವವರಿಗೆ ಉಡುಗೊರೆಗಳನ್ನು ನೀಡುವ ಸಾಧ್ಯತೆ ಇದೆ. ಇದರಿಂದ ನಿಮಗೆ ಸಂತೋಷವಾಗುತ್ತದೆ. ಶುಭ. 08,16,22, ಅಶುಭ. 12,24,29,
ADVERTISEMENT
ADVERTISEMENT